Site icon Vistara News

Wrestlers Protest: ಬಜರಂಗ ದಳಕ್ಕೆ ಬೆಂಬಲ ಸೂಚಿಸಿದ ಪ್ರತಿಭಟನಾನಿತರ ಕುಸ್ತಿಪಟು ಬಜರಂಗ್‌ ಪೂನಿಯ

wrestlers protest

#image_title

ನವದೆಹಲಿ: ಕರ್ನಾಟಕದಲ್ಲಿ ಬಜರಂಗ ದಳ ನಿಷೇಧಿಸುವ ಕಾಂಗ್ರೆಸ್​ನ ಚುನಾವಣ ಪ್ರಣಾಳಿಕೆಯ ಪ್ರಸ್ತಾವನೆಗೆ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಜಂತರ್​ ಮಂತರ್​ನಲ್ಲಿ ಬ್ರಿಜ್​ ಭೂಷಣ್​ ವಿರುದ್ಧ ತೊಡೆ ತಟ್ಟಿ ಪ್ರತಿಭಟನೆ(Wrestlers Protest) ನಡೆಸುತ್ತಿರುವ ಒಲಿಂಪಿಕ್‌ ಕಂಚಿನ ಪದಕ ವಿಜೇತ ಬಜರಂಗ್‌ ಪೂನಿಯ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಾಕಿರುವ ಪೋಸ್ಟ್​ವೊಂದು ಇದೀಗ ಎಲ್ಲಡೆ ವೈರಲ್​ ಆಗಿದೆ.

ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಜಂತರ್‌ಮಂತರ್‌ನಲ್ಲಿ ಕೆಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಅವರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ರೈತ ಸಂಘಟನೆಯೂ ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದು ಅವರು ಕೂಡ ಜಂತರ್​ ಮಂತರ್​ನಲ್ಲಿ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ Wrestlers Protest: ಸೌರವ್​ ಗಂಗೂಲಿ ಹೇಳಿಕೆಗೆ ತಿರುಗೇಟು ನೀಡಿದ ವಿನೇಶ್‌ ಫೋಗಟ್‌

ಕೆಲ ದಿನಗಳ ಹಿಂದೆ ಕುಸ್ತಿಪಟುಗಳನ್ನು ಈ ರೀತಿ ನಡೆಸಿಕೊಂಡರೆ, ನಾವು ದೇಶಕ್ಕಾಗಿ ಗಳಿಸಿದ ಪದಕ ಮತ್ತು ಎಲ್ಲ ಪ್ರಶಸ್ತಿಗಳನ್ನು ಸರಕಾರಕ್ಕೆ ಹಿಂದಿರುಗಿಸುತ್ತೇವೆ. ನಮಗೆ ಇದರ ಅಗತ್ಯವಿಲ್ಲ. ನಾವು ಸಾಮಾನ್ಯ ಜೀವನವನ್ನು ನಡೆಸುತ್ತೇವೆ ಎಂದು ಬಜರಂಗ್‌ ಪೂನಿಯ ಪತ್ರಕರ್ತರಿಗೆ ತಿಳಿಸಿದ್ದರು. ಇದೀಗ ಅವರು ಕೇಸರಿ ಮತ್ತು ಕಪ್ಪು ಮಿಶ್ರಿತ ಹನುಮನ ಫೋಟೊವನ್ನು ಪೋಸ್ಟ್​​ ಮಾಡುವ ಮೂಲಕ “ತಾನು ಭಜರಂಗಿ, ಬಜರಂಗ ದಳಕ್ಕೆ ನನ್ನ ಬೆಂಬಲ, ಜೈ ಶ್ರೀರಾಮ್​” ಎಂದು ಬರೆದುಕೊಂಡಿದ್ದಾರೆ. ಸದ್ಯ ಅವರ ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅವರು ಈ ಇದನ್ನು ಡಿಲೀಟ್​ ಮಾಡಿದ್ದಾರೆ.


ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಮೇ 21 ಗಡುವು

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರನ್ನು 21ರೊಳಗೆ ಬಂಧಿಸಬೇಕು ಎಂದು ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಬೆಂಬಲಿಸಿರುವ ಸಮಿತಿಯು ಎಚ್ಚರಿಯ ಗಡುವು ನೀಡಿದೆ. ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಸಿಂಗ್ ಟಿಕಾಯತ್, ಖಾಪ್ ಮಹಾಮ್ 24 ಮುಖ್ಯಸ್ಥ ಮೆಹರ್ ಸಿಂಗ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಬಲದೇವ್ ಸಿಂಗ್ ಸಿರ್ಸಾ ಅವರು ಭಾನುವಾರ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಬಂದು ಮಾಧ್ಯಮದವರೊಂದಿಗೆ ಮಾತನಾಡಿ ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿದ್ದಾರೆ.

Exit mobile version