Site icon Vistara News

Wrestlers Protest: ಕುಸ್ತಿಪಟುಗಳ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ಬ್ರಿಜ್‌ ಭೂಷಣ್‌

Protesting wrestlers

#image_title

ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರು ತಮ್ಮನ್ನು ಬಂಧಿಸುವಂತೆ ಒತ್ತಾಯಿಸಿ ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ(Wrestlers Protest) ನಡೆಸುತ್ತಿರುವ ಕುಸ್ತಿಪಟುಗಳ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಕುಸ್ತಿಪಟುಗಳನ್ನು ಟೀಕಿಸುವ ಭರದಲ್ಲಿ ಕುಸ್ತಿಪಟುಗಳು ಗೆದ್ದ ಬಹುಮಾನದ ಮೊತ್ತವನ್ನು ಹಿಂದಿರುಗಿಸಲಿ ಎಂದು ಹೇಳಿದ್ದಾರೆ. ಬ್ರಿಜ್​ ಭೂಷಣ್​ ಅವರ ಈ ದರ್ಪದ ಹೇಳಿಕೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪತ್ರಕರ್ತರೊಬ್ಬರು ಬ್ರಿಜ್‌ ಭೂಷಣ್‌ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ, ನೀವು ರಾಜೀನಾಮೆ ನೀಡದಿದ್ದರೆ ಕುಸ್ತಿಪಟುಗಳು ಪದಕಗಳನ್ನು ವಾಪಸ್‌ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಇದಕ್ಕೆ ನಿಮ್ಮ ಉತ್ತರವೇನು ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಬ್ರಿಜ್‌ ಭೂಷಣ್‌ ವಾಪಸ್‌ ಕೊಡುವುದಾದರೆ ಇಷ್ಟುವರ್ಷ ಪಡೆದಿರುವ ಬಹುಮಾನದ ಹಣವನ್ನು ಕೊಡಲಿ. ಪದಕಗಳ ಮೌಲ್ಯ 15 ರೂ. ಮಾತ್ರ ಎಂದಿದ್ದಾರೆ.

ಬ್ರಿಜ್‌ ಭೂಷಣ್‌ ಅವರ ಈ ಹೇಳಿಕೆ ಕುಸ್ತಿಪಟುಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದ್ದು ಇದಕ್ಕೆ ತಕ್ಕ ಪ್ರತಿಕ್ರಿಕೆ ನೀಡಿದ್ದಾರೆ. ‘ಕ್ರೀಡಾಪಟುಗಳ ಬಗ್ಗೆ ಇಷ್ಟು ಕೆಟ್ಟದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವ ಅವರು ತೆರೆಯ ಹಿಂದೆ ಎಷ್ಟೆಲ್ಲಾ ಕಿರುಕುಳ ನೀಡಿದ್ದಾರೆ ಎಂಬುದು ಅವರ ಈ ವರ್ತನೆಯಿಂದಲೇ ತಿಳಿಯುತ್ತದೆ. ನಮ್ಮ ಇಷ್ಟು ವರ್ಷದ ಪರಿಶ್ರಮದ ಮೌಲ್ಯ ಕೇವಲ 15 ರೂ ಎಂದಿರುವುದು ಅವರು ದೇಶಕ್ಕೆ ಮಾಡಿರುವ ಅವಮಾನ ಎಂದಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ನಾಯಕರು

ಹಲವು ದಿನಗಳಿಂದ ಜಂತರ್​ ಮಂತರ್​ನಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಕುಸ್ತಿಪಟುಗಳನ್ನು ಕಾಂಗ್ರೆಸ್‌ ನಾಯಕರಾದ ರಣ್‌ದೀಪ್‌ ಸುರ್ಜೆವಾಲಾ, ಸಚಿನ್‌ ಪೈಲಟ್‌ ಭೇಟಿ ಮಾಡಿದ್ದಾರೆ. ಪ್ರತಿಭಟನೆಗೆ ಬೇಕಾದ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಸಚಿನ್‌ ಪೈಲಟ್‌ ಅವರು ‘ಕುಸ್ತಿಪಟುಗಳಿಗೆ ನ್ಯಾಯ ಸಿಗುವುದಾದರೆ ಕಾನೂನು ರೀತಿಯಲ್ಲಿ ಯಾವುದೇ ಹೋರಾಟ ನಡೆಸಲು ಸಿದ್ಧ ಎಂದಿದ್ದಾರೆ. ಈಗಾಗಲೇ ರೈತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು ಅವರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ Wrestlers Protest: ಜಾಗತಿಕ ಮಟ್ಟದಲ್ಲಿ ಪ್ರತಿಭಟನೆ ವಿಸ್ತರಿಸಲು ಸಜ್ಜಾದ ಕುಸ್ತಿಪಟುಗಳು

ಬ್ರಿಜ್‌ ಭೂಷಣ್​ ಅವರ ಬಂಧನಕ್ಕೆ ಕುಸ್ತಿಪಟುಗಳು ಮೇ 21ಕ್ಕೆ ಗಡುವು ನೀಡಿದ ಹಿನ್ನಲೆ ಜಂತರ್‌ ಮಂತರ್​ ಹಾಗೂ ದೆಹಲಿ ಹೊರವಲಯಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಒಂದೊಮ್ಮೆ ಮೇ 21ಕ್ಕೆ ಬ್ರಿಜ್‌ ಭೂಷಣ್ ಅವರ ಬಂಧನ ಆಗದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಭದ್ರತೆ ಹೆಚ್ಚಿಸಲಾಗಿದೆ.

Exit mobile version