Site icon Vistara News

Wrestlers Protest: ಸಾವಿರಾರು ಬೆಂಬಲಿಗರ ಜತೆ ಕುಸ್ತಿಪಟುಗಳಿಂದ ಕ್ಯಾಂಡಲ್ ಮಾರ್ಚ್

March To India Gate

#image_title

ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದು ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಒಲಿಂಪಿಯನ್​ ಕುಸ್ತಿಪಟುಗಳ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಸಾವಿರಾರು ಪ್ರತಿಭಟನಾಕಾರರು ಇಂಡಿಯಾ ಗೇಟ್‌ ತನಕ ಕ್ಯಾಂಡಲ್ ಮಾರ್ಚ್ ಮಾಡಿದ್ದಾರೆ.

ಪ್ರತಿಭಟನೆಗೆ ಒಂದು ತಿಂಗಳಿ ಪೂರ್ಣಗೊಂಡ ಹಿನ್ನಲೆ ಕುಸ್ತಿಪಟುಗಳು ತಮ್ಮ ಬೆಂಗಲಿಗರೊಂದಿಗೆ ರಾಷ್ಟ್ರಧ್ವಜವನ್ನು ಹಿಡಿದು ಸಂಸತ್ ಭವನದ ಸಮೀಪದಲ್ಲಿರುವ ಇಂಡಿಯಾ ಗೇಟ್ ತನಕ ಮೆರವಣಿಗೆ ನಡೆಸಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಮಾತನಾಡಿದ ವಿನೇಶ್​ ಪೋಗಟ್​ ಇದು ಕೇವಲ ಆರಂಭವಷ್ಟೇ ಅಸಲಿ ಹೋರಾಟ ಇನ್ನು ಮುಂದೆ ಇದೆ ಎಂದು ಹೇಳುವ ಮೂಲಕ ಉಗ್ರ ಹೋರಟದ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ Wrestlers Protest: ನಾವು ಕೂಡ ಮಂಪರು ಪರೀಕ್ಷೆಗೆ ಸಿದ್ಧ; ಬಜರಂಗ್ ಪುನಿಯಾ

ತರಬೇತಿಯನ್ನು ಸ್ಥಗಿತಗೊಳಿಸಿ ಯಾವುದೇ ಕುಸ್ತಿ ಟೂರ್ನಿಗಳಲ್ಲಿ ಪಾಲ್ಗೊಳ್ಳದೆ ತೀವ್ರ ಬಿಸಿಗಾಳಿಯ ಮಧ್ಯೆಯೂ ಸುಮಾರು ಒಂದು ತಿಂಗಳಿನಿಂದ ಕುಸ್ತಿಪಟುಗಳು ದಿಲ್ಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಬಂಧನ ಆಗುವ ವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಕುಸ್ತಿಪಟುಗಳ ಎಲ್ಲ ಆರೋಪವನ್ನು ಬ್ರಿಜ್‌ ಭೂಷಣ್‌ ಅವರು ಸಲೀಸಾಗಿ ನಿರಾಕರಿಸುತ್ತಿದ್ದಾರೆ. ಸದ್ಯ ಕುಸ್ತಿಪಟುಗಳ ಆಂದೋಲನಕ್ಕೆ ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಯಾವ ಸ್ವರೂಪಕ್ಕೆ ತಿರುಗಲಿದೆ ಎಂದು ಕಾದು ನೋಡಬೇಕಿದೆ.

ಪ್ರತಿಭಟನೆ ಮಧ್ಯೆಯೂ ಲೇಖನ ಬರೆದ ವಿನೇಶ್‌ ಫೋಗಾಟ್‌

ಪ್ರತಿಭಟನಾ ನಿರತ ಕುಸ್ತಿಪಟು ವಿನೇಶ್‌ ಫೋಗಾಟ್‌ ಅವರು ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ತಮ್ಮ ಲೇಖನವನ್ನು ಪ್ರಕಟಿಸುವ ಮೂಲಕ ‘ನ್ಯಾಯಕ್ಕಾಗಿ ಇಷ್ಟು ದಿನ ಬೀದಿಯಲ್ಲಿ ಕೂರಬೇಕು ಎಂದು ಗೊತ್ತಿರಲಿಲ್ಲ’ ಎಂದಿದ್ದಾರೆ. ‘ಜನವರಿಯಲ್ಲಿ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ಆರಂಭಿಸಿದಾಗ 2-3 ದಿನದಲ್ಲಿ ನಮ್ಮ ಕೂಗು ಸರ್ಕಾರಕ್ಕೆ ಕೇಳಿಸಲಿದೆ, ಸುಲಭವಾಗಿ ನ್ಯಾಯ ಸಿಗಲಿದೆ ಎಂದುಕೊಂಡಿದ್ದೆವು. ಆದರೆ ರಾಜಕೀಯ ನಾಯಕರು ದೇಶಕ್ಕಾಗಿ ಪದಕ ಗೆದ್ದವರನ್ನು ಇಷ್ಟರ ಮಟ್ಟಿಗೆ ಕಡೆಗಣಿಸುತ್ತಾರೆ ಎಂದು ಊಹಿಸಿರಲಿಲ್ಲ’ ಎಂದು ವಿನೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version