Site icon Vistara News

Wrestlers Protest: ಬ್ರಿಜ್‌ ಭೂಷಣ್‌ ವಿಚಾರಣೆ ನಡೆಸಿದ ದೆಹಲಿ ಪೊಲೀ​ಸ​ರು

Brij Bhushan

ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಶುಕ್ರ​ವಾರ ದೆಹಲಿ ಪೊಲೀ​ಸ​ರು 3 ಗಂಟೆ​ಗಳ ಕಾಲ ವಿಚಾ​ರಣೆ ನಡೆ​ಸಿ​ದ್ದು, ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ವಿಶೇಷ ತನಿಖಾ ತಂಡ​(​ಎ​ಸ್‌​ಐ​ಟಿ)ವನ್ನೂ ರಚಿ​ಸ​ಲಾ​ಗಿ​ದೆ ಎಂದು ತಿಳಿದುಬಂದಿದೆ.

ಏಳು ಕುಸ್ತಿ​ಪ​ಟು​ಗಳು ಕಳೆದ ತಿಂಗಳು ನೀಡಿದ ದೂರಿನ ಹಿನ್ನೆ​ಲೆ​ಯಲ್ಲಿ ಬ್ರಿಜ್‌ ವಿರುದ್ಧ ಫೋಕ್ಸೋ ಕಾಯ್ದೆ ಸೇರಿ 2 ಪ್ರತ್ಯೇಕ ಎಫ್‌​ಐ​ಆರ್‌ ದಾಖ​ಲಾ​ಗಿ​ತ್ತು. ಹೀಗಾಗಿ ಶುಕ್ರ​ವಾರ ಬ್ರಿಜ್‌ ಭೂಷಣ್​ ಮತ್ತು ಡ​ಬ್ಲ್ಯು​ಎ​ಫ್‌​ಐ ಸಹಾಯಕ ಕಾರ‍್ಯದರ್ಶಿ ವಿನೋದ್‌ ತೋಮರ್‌ ಅವರನ್ನು ಪೊಲೀಸರು ವಿಚಾ​ರಣೆ ನಡೆ​ಸಿ​ದ್ದಾರೆ. ಆದರೆ ಬ್ರಿಜ್‌ ಭೂಕ್ಷಣ್​ ಹಾಗೂ ತೋಮರ್‌ ಅವರು ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾ​ಕ​ರಿ​ಸಿ​ದ್ದಾರೆ.

ಪ್ರಕ​ರ​ಣದ ತನಿಖೆಯ ವರ​ದಿ​ಯನ್ನು ಪೊಲೀ​ಸ​ರು ದೆಹಲಿ ನ್ಯಾಯಾ​ಲಯಕ್ಕೆ ಸಲ್ಲಿ​ಸಿದ್ದು, ತ​ನಿ​ಖೆ​ಗಾಗಿ 4 ಮಹಿಳಾ ಸಿಬ್ಬಂದಿ ಸೇರಿ 10 ಪೊಲೀ​ಸರಿ​ರುವ ವಿಶೇಷ ತಂಡ(ಎಸ್‌ಐಟಿ) ರಚಿ​ಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕುಸ್ತಿ​ಪ​ಟು​ಗಳ ಹೇಳಿ​ಕೆ​ಯನ್ನು ನ್ಯಾಯಾ​ಲಯದ ಮುಂದೆ ದಾಖ​ಲಿ​ಸು​ವಂತೆ ಸೂಚಿ​ಸಿದ ಪೀಠ ವಿಚಾ​ರ​ಣೆ​ಯನ್ನು ಮೇ 27ಕ್ಕೆ ಮುಂದೂ​ಡಿತ್ತು. ಪ್ರಕ​ರ​ಣಕ್ಕೆ ಸಂಬಂಧಿಸಿ​ದಂತೆ ಸಾಕ್ಷ್ಯಗಳನ್ನು ಸಂಗ್ರ​ಹಿ​ಸಲು ದೆಹಲಿ ಪೊಲೀ​ಸರು ವಿವಿಧ ತಂಡಗಳನ್ನು ರಚಿಸಿದ್ದು, ಕರ್ನಾ​ಟಕ, ಉತ್ತರ ಪ್ರದೇಶ, ಜಾರ್ಖಂಡ್‌ ಹಾಗೂ ಹರ್ಯಾಣಕ್ಕೆ ಭೇಟಿ ನೀಡಿ​ವೆ. ಹಲ​ವರ ಹೇಳಿ​ಕೆ​ಗ​ಳನ್ನು ಪೊಲೀ​ಸರು ದಾಖ​ಲಿ​ಸಿದ್ದು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಕೆಲ ಫೋಟೊ ಹಾಗೂ ವಿಡಿಯೊಗಳು ದೊರೆತಿವೆ ಎಂದು ತಿಳಿ​ದು​ಬಂದಿದೆ. ಇನ್ನು ವಿದೇಶಗಳಲ್ಲೂ ಕಿರುಕುಳ ನೀಡಿದ್ದಾಗಿ ಕುಸ್ತಿಪಟುಗಳು ತಮ್ಮ ದೂರಿನಲ್ಲಿ ತಿಳಿಸಿದ್ದ ಕಾರಣ ಈ ಸಂಬಂಧ ಕೆಲ ವಿದೇಶಿ ಕುಸ್ತಿ ಸಂಸ್ಥೆಗಳನ್ನೂ ದಿಲ್ಲಿ ಪೊಲೀಸರು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಸದ್ಯ ಕುಸ್ತಿಪೊಟುಗಳ ಹೋರಾಟಕ್ಕೆ ಜಯ ಸಿಗುವ ಸಾಧ್ಯತೆ ಇದೆ.

ಜಂತ​ರ್‌​ಮಂತ​ರ್‌​ನಲ್ಲಿ ಕಳೆದ 20 ದಿನ​ಗ​ಳಿಂದ ಪ್ರತಿ​ಭ​ಟನೆ ನಡೆ​ಸು​ತ್ತಿ​ರುವ ಕುಸ್ತಿ​ಪ​ಟು​ಗಳು ಆರ್ಥಿಕ ಸಮಸ್ಯೆ ನಿಭಾ​ಯಿ​ಸಲು ಸಾರ್ವ​ಜ​ನಿ​ಕರ ಮೊರೆ ಹೋಗಿ​ದ್ದಾರೆ. ವಿದ್ಯಾ​ರ್ಥಿ​ಗಳು, ರೈತರು ಸೇರಿ ಕೆಲ ಸಂಘಟನೆಗಳೂ ಸಹಾ​ಯಕ್ಕೆ ಧಾವಿ​ಸಿದ್ದು, ಕಳೆದ 4 ದಿನಗಳಲ್ಲಿ 6 ಲಕ್ಷ ರು. ದೇಣಿಗೆ ಸಂಗ್ರಹವಾ​ಗಿದೆ.

ಇದನ್ನೂ ಓದಿ Wrestlers Protest: ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ ಕುಸ್ತಿಪಟುಗಳು

ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ್ದ ಕುಸ್ತಿಪಟುಗಳು

ಒಲಿಂಪಿಯನ್​ ಕುಸ್ತಿಪಟುಗಳಾದ ಬಜರಂಗ್‌ ಪೂನಿಯ, ವಿನೇಶ್‌ ಪೋಗಟ್‌, ಸಾಕ್ಷಿ ಮಲಿಕ್‌ ಸೇರಿ ಹಲವರು ಎರಡು ದಿನಗಳ ಹಿಂದಷ್ಟೇ ತಮ್ಮ ಹಣೆಯ ಮೇಲೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು. ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸುವ ವರೆಗೆ ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿತ್ತು. ಇದೀಗ ಬ್ರಿಜ್​ ಭೂಷಣ್​ ಅವರನ್ನು ವಿಚಾರಣೆ ನಡೆಸಿರುವುದು ಕುಸ್ತಿಪಟುಗಳಿಗೆ ಕೊಂಚ ಮುನ್ನಡೆ ಸಿಕ್ಕಂತಾಗಿದೆ.

Exit mobile version