Site icon Vistara News

Wrestlers Protest: ಬ್ರಿಜ್‌ ಭೂಷಣ್ ಅಯೋಧ್ಯೆ ರ‍್ಯಾಲಿಗೆ ಬೆಂಬಲ ಇಲ್ಲ; ಬಿಜೆಪಿ ಘಟಕ

Bhushan Sharan Singh

#image_title

ನವದೆಹಲಿ: ಲೈಂಗಿಕ ದೌರ್ಜನ್ಯ(Sexual harassment allegations) ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರು, ಜೂನ್ 5ರಂದು ಅಯೋಧ್ಯೆಯಲ್ಲಿ ನಡೆಸುವ ರ‍್ಯಾಲಿಗೆ ನಮ್ಮ ಬೆಂಬಲವಿಲ್ಲ ಎಂದು ಅಯೋಧ್ಯೆ ಬಿಜೆಪಿ ಘಟಕ ತಿಳಿಸಿದೆ.

ಕೈಸರ್‌ಗಂಜ್ ಸಂಸದರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಲ್ಲಿ ಈಗಾಗಲೇ ದೆಹಲಿಯಲ್ಲಿ ಎರಡು ಎಫ್‌ಐಆರ್ ದಾಖಲಾಗಿದೆ. ಅವರ ಬಂಧನಕ್ಕೆ ಪಟ್ಟು ಹಿಡಿದು ಜಂತರ್​ ಮಂತರ್​ನಲ್ಲಿ ಕುಸ್ತಿಪಟುಗಳು ಸೇರಿ ವಿರೋಧ ಪಕ್ಷಗಳು, ನಾಗರಿಕರು ಮತ್ತು ರೈತ ಸಂಘಟನೆಗಳು ಕೂಡ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅವರು ತಮ್ಮ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಆದರೆ ಈ ರ‍್ಯಾಲಿಗೆ ಅಯೋಧ್ಯೆ ಬಿಜೆಪಿ ಘಟಕ ಯಾವುದೇ ಬೆಂಬಲವಿಲ್ಲ ಎಂದು ಇದರ ಮುಖ್ಯಸ್ಥರು ಹೇಳಿದ್ದಾರೆ.

ಎಫ್‌ಐಆರ್ ದಾಖಲಾದ ಬಳಿಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಆದರೆ ಅಯೋಧ್ಯೆಯಲ್ಲಿ ನಡೆಸುವ ರ‍್ಯಾಲಿಗೆ ಜನರನ್ನು ಆಹ್ವಾನಿಸಲು ಕಳೆದ ವಾರದಿಂದ ಉತ್ತರ ಪ್ರೇಶದ ಅವಧ್ ಪ್ರದೇಶದ ಗೊಂಡಾ, ಅಯೋಧ್ಯೆ, ಬಸ್ತಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಕಳೆದ ವಾರ, ಲಕ್ನೋದಲ್ಲಿ ನಡೆದ ಬಿಜೆಪಿಯ ಅವಧ್ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿಂಗ್ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಇ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ Wrestlers Protest: ಸಾವಿರಾರು ಬೆಂಬಲಿಗರ ಜತೆ ಕುಸ್ತಿಪಟುಗಳಿಂದ ಕ್ಯಾಂಡಲ್ ಮಾರ್ಚ್

ಬ್ರಿಜ್ ಭೂಷಣ್ ಅವರು ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ಜನ ಚೇತನ ಮಹಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಸಾಧುಗಳು, ಕಾನೂನು ತಜ್ಞರು ಹಾಗೂ ಶಿಕ್ಷಣ ತಜ್ಞರನ್ನು ಆಹ್ವಾನಿಸಲಾಗಿದೆ. ಆದರೆ ಈ ರ‍್ಯಾಲಿಗೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಇಲ್ಲಿನ ಬಿಜೆಪಿ ಘಟಕಗಳು ಹೇಳಿವೆ ಜತೆಗೆ ಇಂತಹ ರ‍್ಯಾಲಿ ನಡೆಸುವ ಬಗ್ಗೆಯೂ ನಮಗೆ ಪಕ್ಷದಿಂದ ಯಾವುದೇ ಸುತ್ತೋಲೆ ಬಂದಿಲ್ಲ ಎಂದು ತಿಳಿಸಿದೆ.

Exit mobile version