ನವದೆಹಲಿ: ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಮೇಲಿನ ಆರೋಪಗಳ(Wrestlers Row) ತನಿಖೆಗೆ ಕ್ರೀಡಾ ಸಚಿವಾಲಯ ನೇಮಿಸಿರುವ ಮೇಲುಸ್ತುವಾರಿ ಸಮಿತಿಯಲ್ಲಿ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ಕುಸ್ತಿಪಟು ಬಬಿತಾ ಪೋಗಟ್ ಅವರಿಗೆ ಸ್ಥಾನ ನೀಡಲಾಗಿದೆ.
ಭಾರತ ಕುಸ್ತಿ ಒಕ್ಕೂಟದ ಆಡಳಿತ ನೋಡಿಕೊಳ್ಳಲು ನೇಮಿಸಿರುವ ಸಮಿತಿಗೆ ಬಬಿತಾ ಪೋಗಟ್ ಅವರನ್ನೂ ಸೇರಿಸಿಕೊಳ್ಳಲಾಗಿದೆ ಎಂದು ಕ್ರೀಡಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಈ ಮೂಲಕ ಬಾಕ್ಸರ್ ಎಂ.ಸಿ.ಮೇರಿಕೋಮ್ ನೇತೃತ್ವದ ಸಮಿತಿಯಲ್ಲಿರುವ ಸದಸ್ಯರ ಸಂಖ್ಯೆ ಆರಕ್ಕೇರಿದೆ.
ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್ ವಿರುದ್ಧದ ತನಿಖಾ ಸಮಿತಿ ಪುನರ್ ರಚನೆ ಅಸಾಧ್ಯ; ಕ್ರೀಡಾ ಸಚಿವಾಲಯ
ಎಂ.ಸಿ.ಮೇರಿಕೋಮ್ ನೇತೃತ್ವದ ಮೇಲುಸ್ತುವಾರಿ ಸಮಿತಿ ರಚಿಸಿದಾಗ ಕುಸ್ತಿಪಟುಗಳು ತಮ್ಮ ಅಭಿಪ್ರಾಯ ಕೇಳದಿರುವುದು ಬೇಸರದ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಕ್ರೀಡಾ ಸಚಿವಾಲಯ ನೂತನ ಸಮಿತಿಯನ್ನು ರಚಿಸುವುದು ಅಸಾಧ್ಯ ಎಂದು ಹೇಳಿತ್ತು. ಇದೀಗ ಈ ಸಮಿತಿಗೆ ಬಬಿತಾ ಪೋಗಟ್ ಅವರನ್ನು ನೇಮಕಮಾಡಿದೆ. ಈ ಮೂಲಕ ಪೋಗಟ್ ಸಹೋದರಿಯರಿಗೆ ಈ ಸಮಿತಿಯಲ್ಲಿ ವಿಶ್ವಾಸ ಮೂಡುವಂತೆ ಕ್ರೀಡಾ ಸಚಿವಾಲಯ ಮಾಡಿದೆ ಎನ್ನಬಹುದು.