Site icon Vistara News

Wrestling India: ಈಜಿಪ್ಟ್ ಕುಸ್ತಿ ಟೂರ್ನಿಯಿಂದ ಹಿಂದೆ ಸರಿದ ಭಾರತದ ಪ್ರಮುಖ ಕುಸ್ತಿ ಪಟುಗಳು

Wrestling India: Top wrestlers who withdrew from Egypt wrestling tournament

Wrestling India: Top wrestlers who withdrew from Egypt wrestling tournament

ನವದೆಹಲಿ: ಬ್ರಿಜ್​ ಭೂಷಣ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಭಾರತದ(Wrestling India) ಪ್ರಮುಖ ಕುಸ್ತಿಪಟುಗಳಾದ ವಿನೇಶ್​ ಪೋಗಟ್‌, ಬಜರಂಗ್ ಪೂನಿಯಾ ಸೇರಿದಂತೆ ಪ್ರಮುಖ ಕುಸ್ತಿ ಪಟುಗಳು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿ ನಡೆಯಲಿರುವ ಕುಸ್ತಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿ ಫೆ. 23ರಿಂದ 26ರ ವರೆಗೆ ನಡೆಯಲಿರುವ ಇಬ್ರಾಹಿಂ ಮುಸ್ತಫಾ ರ‍್ಯಾಂಕಿಂಗ್‌ ಸಿರೀಸ್‌ ಟೂರ್ನಿಯಲ್ಲಿ ಪ್ರಮುಖ ಕುಸ್ತಿಪಟುಗಳು ಪಾಲ್ಗೊಳ್ಳುತ್ತಿಲ್ಲ ಎಂದು ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಬಾಕ್ಸರ್ ಮೇರಿ ಕೋಮ್‌ ಖಚಿತಪಡಿಸಿದ್ದಾರೆ.

ಇದನ್ನೂ ಓದಿ Wrestlers Row: ಮೇಲುಸ್ತುವಾರಿ ಸಮಿತಿಗೆ ಬಬಿತಾ ಪೋಗಟ್‌ ಆಯ್ಕೆ

ವಿನೇಶ್​ ಫೋಗಟ್​, ಬಜರಂಗ್‌ ಪೂನಿಯಾ, ರವಿ ದಹಿಯಾ, ದೀಪಕ್ ಪೂನಿಯಾ, ಅನ್ಶು ಮಲಿಕ್‌, ಸಂಗೀತಾ ಪೋಗಟ್‌ ಈ ತಿಂಗಳಲ್ಲಿ 2ನೇ ಬಾರಿ ಪ್ರಮುಖ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ತಾವು ಸಂಪೂರ್ಣ ಸಿದ್ಧರಾಗಿಲ್ಲವೆಂದು ಜಾಗ್ರೆಬ್‌ ಓಪನ್‌ನಲ್ಲಿ ಕಣಕ್ಕಿಳಿದಿರಲಿಲ್ಲ. ಸದ್ಯ ಇವರ ಅನುಪಸ್ಥಿಯಲ್ಲಿಯೂ ಮೇರಿ ಕೋಮ್‌ ನೇತೃತ್ವದ ಮೇಲುಸ್ತುವಾರಿ ಸಮಿತಿ 27 ಕುಸ್ತಿಪಟುಗಳ ಭಾರತ ತಂಡವನ್ನು ಪ್ರಕಟಿಸಿದೆ.

Exit mobile version