Site icon Vistara News

WTC Final 2023 : ವೃದ್ಧಿಮಾನ್​​ಗೆ ಡಬ್ಲ್ಯುಟಿಸಿ ಫೈನಲ್​ನಲ್ಲಿ ಅವಕಾಶ ಕೊಡಬೇಕಿತ್ತು ಎಂದ ಮಾಜಿ ಆಟಗಾರ್ತಿ

Wriddhiman Saha at IPL

#image_title

ಮುಂಬಯಿ: ಓವಲ್​​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​ (WTC inal 2023) ಪಂದ್ಯಕ್ಕೆ ಅನುಭವಿ ವಿಕೆಟ್​ಕೀಪ್​ ವೃದ್ಧಿಮಾನ್ ಸಾಹ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಭಾರತ ಮಹಿಳೆಯರ ತಂಡ ಮಾಜಿ ಆಟಗಾರ್ತಿ ಅಂಜುಮ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ತಂಡದಲ್ಲಿ ಇದೀಗ ಅವಕಾಶ ಪಡೆದಿರುವ ಕೆ.ಎಸ್​ ಭರತ್​ ಹಾಗೂ ಇಶಾನ್​ ಕಿಶನ್ ಅವರಿಗಿಂತ ಸಾಹಾ ಅವರೇ ಅತ್ಯುತ್ತ ಆಯ್ಕೆ ಎಂಬುದಾಗಿ ಅವರು ಹೇಳಿದ್ದಾರೆ.

ರಿಷಭ್ ಪಂತ್​ ಗಾಯಗೊಂಡ ಕಾರಣ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡುವರೆಂಬ ಕಾರಣಕ್ಕೆ ಕೆ. ಎಲ್​ ರಾಹುಲ್ ಅವರನ್ನು ಮೊದಲ ಆಯ್ಕೆಯಾಗಿ ಇಡಲಾಗಿತ್ತು ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ಅವರನ್ನು ಏಕೈಕ ಟೆಸ್ಟ್​ ಪಂದ್ಯದ ವಿಕೆಟ್​ಕೀಪಿಂಗ್​ಗೆ ಆಯ್ಕೆ ಮಾಡಲಾಗಿದೆ. ಏತನ್ಮಧ್ಯೆ, ಕಿಶನ್ ಇನ್ನೂ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡದ ಕಾರಣ ಭರತ್ ಅವಕಾಶ ಪಡೆಯುವ ಸಾಧ್ಯತೆಯಿಗಳಿವೆ. ಆದರೆ, ಇವರಿಬ್ಬರಿಗಿಂತ ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್​ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿರುವ ವೃದ್ಧಿಮಾನ್​ ಸಾಹ ಅವರಿಗೆ ಅವಕಾಶ ನೀಡಬೇಕಾಗಿತ್ತು ಎಂದು ಚೋಪ್ರಾ ಹೇಳಿದ್ದಾರೆ.

ಇಶಾನ್ ಕಿಶನ್ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಏಕೆಂದರೆ ಅವರು ಇತ್ತೀಚೆಗೆ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಟೀಮ್​ ಮ್ಯಾನೇಜ್ಮೆಂಟ್​ ಅಂತಿಮ ಹನ್ನೊಂದರ ಆಯ್ಕೆಯನ್ನು ಸಮರ್ಥವಾಗಿ ಮಾಡಬಹುದು. ಆದರೂ, ಇದು ಏಕೈಕ ಟೆಸ್ಟ್ ಪಂದ್ಯವಾಗಿರುವ ಕಾರಣ ಅನುಭವಿ ವ್ಯಕ್ತಿ ಆಟಗಾರ ಇರಬೇಕು ಎಂಬುದೇ ನನ್ನ ಉದ್ದೇಶ” ಎಂದು ಅಂಜುಮ್ ಚೋಪ್ರಾ ಮೈಖೇಲ್​ ಜತೆ ಮಾತನಾಡುತ್ತಾ ಹೇಳಿದ್ದಾರೆ.

ವಯಸ್ಸಿಗಿಂತ ಅನುಭವ ಅಗತ್ಯ

ಸಹಾ ಅವರಗೆ ಹೆಚ್ಚು ವಯಸ್ಸಾಗಿರುವು ಹಾಗೂ ಪಂತ್ ಅವರ ಬೆಳವಣಿಗೆಯಿಂದಾಗಿ 2021 ರ ಕೊನೆಯಲ್ಲಿ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ರಣಜಿ ಟ್ರೋಫಿ 2022-23 ರಲ್ಲಿ ಸಾಹ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಆಡಿದ್ದಾರೆ. ಅಲ್ಲಿ ಅವರು ತ್ರಿಪುರಾ ಪರ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಒಳಗೊಂಡಂತೆ 52.16 ಸರಾಸರಿಯಲ್ಲಿ 313 ರನ್ ಗಳಿಸಿದ್ದಾರೆ.

ಇದನ್ನೂ ಓದಿ : WTC Final 2023 : ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್: ತಂಡದ ಪಟ್ಟಿ ಸಲ್ಲಿಸಿದ ಭಾರತ, ಆಸ್ಟ್ರೇಲಿಯಾ

ತಂಡದ ಮ್ಯಾನೇಜ್ಮೆಂಟ್ ಯವ ಪ್ರತಿಭೆಗಳ ಹುಡುಕಾಟ ಮಾಡುತ್ತಿದೆ ಎಂಬ ವಿಷಯ ಸಾಹಗೂ ಗೊತ್ತಿದೆ. ಆದರೆ ಇದು ಏಕೈಕ ಪಂದ್ಯ ಹಾಗೂ ಅನುಭವ ಹೆಚ್ಚು ಅಗತ್ಯವಿದೆ. ಇಶಾನ್ ಮತ್ತು ಶ್ರೀಕರ್ ಭರತ್ ಅವರಿಗೆ ಇಲ್ಲಿ ಒತ್ತಡ ಹೆಚ್ಚಾಗಬಹುದು. ಯುವ ಆಟಗಾರಿಗೆ ಇದು ಸತ್ವ ಪರೀಕ್ಷೆ ಎನಿಸಿಕೊಳ್ಳಬಹುದು ಎಂದು ಅಂಜುಂ ಚೋಪ್ರಾ ಅವರು ಹೇಳದಿದ್ದಾರೆ.

Exit mobile version