Site icon Vistara News

ICC Test Ranking : ಮತ್ತೆ ಮತ್ತೆ ಎಡವಟ್ಟು, ಟೆಸ್ಟ್​​ ರ‍್ಯಾಂಕಿಂಗ್​​ನಲ್ಲಿ ಭಾರತವನ್ನು ಮೇಲಕ್ಕೇರಿಸಿ, ಕೆಳಕ್ಕಿಳಿಸಿದ ಐಸಿಸಿ

ICC ODI Ranking

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ ತನ್ನ ರ‍್ಯಾಂಕ್‌ ಪಟ್ಟಿ (ICC Test Ranking) ಸಿದ್ದಪಡಿಸುವ ವೇಳೆ ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದೆ. ಕಳೆದ ಬಾರಿ ರ‍್ಯಾಂಕ್‌ ಪಟ್ಟಿ ತಯಾರಿಸುವ ವೇಳೆ ಭಾರತ ತಂಡವನ್ನು ಮೊದಲ ಸ್ಥಾನಕ್ಕೆ ಏರಿಸಿ ಬಳಿಕ ಎರಡನೇ ಸ್ಥಾನಕ್ಕೆ ಇಳಿಸಿತ್ತು. ಈ ಬಾರಿಯೂ ಮತ್ತದೇ ಮಾದರಿಯ ತಪ್ಪು ಮಾಡುವ ಮೂಲಕ ಟೀಕೆಗೆ ಒಳಗಾಗಿದೆ. ಅಂಕಿ ಅಂಶಗಳ ದಾಖಲೆ ಮಾಡುವಲ್ಲಿ ಐಸಿಸಿ ಸೋತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಬುಧವಾರ ಮಧ್ಯಾಹ್ನ (ಫೆಬ್ರವರಿ 15ರಂದು) ಐಸಿಸಿ ತನ್ನ ಟೆಸ್ಟ್​ ರ‍್ಯಾಂಕ್‌ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಭಾರತ ತಂಡಕ್ಕೆ 116 ರೇಟಿಂಗ್ ಅಂಕಗಳನ್ನು ನೀಡಿ ಮೊದಲ ಸ್ಥಾನಕ್ಕೆ ಏರಿಸಿತ್ತು. ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ 11 ರೇಟಿಂಗ್ಸ್​ ಅಂಕಗಳನ್ನು ಕೊಟ್ಟು ಎರಡನೇ ಸ್ಥಾನಕ್ಕೆ ಇಳಿಸಿತ್ತು. ವಾಸ್ತವದಲ್ಲಿ ಅದು ತಪ್ಪು ಲೆಕ್ಕಾಚಾರ. ಆಸೀಸ್ ಪಡೆ ಭಾರತಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದೆ. 126 ರೇಟಿಂಗ್​ ಅಂಕಗಳು ಆ ತಂಡಕ್ಕಿದೆ. ಆದರೆ, ಮಾಹಿತಿ ಅಪ್​ಡೇಟ್​ ಮಾಡುವ ವೇಳೆ ಐಸಿಸಿ ಎಡವಟ್ಟು ಮಾಡಿಕೊಂಡಿದೆ. ವಿಷಯ ಗೊತ್ತಾದ ತಕ್ಷಣವೇ ತಪ್ಪು ಸರಿಪಡಿಸಿಕೊಂಡಿದೆ.

ಭಾರತ ತಂಡದ ಮೊದಲ ಸ್ಥಾನಕ್ಕೆ ಏರಿದೆ ಎಂದು ತಿಳಿದುಕೊಂಡ ಭಾರತದ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದ್ದರು. ಭಾರತ ತಂಡ ಈಗಾಗಲೇ ಟಿ20 ಹಾಗೂ ಏಕ ದಿನ ಮಾದರಿಯಲ್ಲಿ ಮೊದಲ ಸ್ಥಾನದಲ್ಲಿರುವ ಕಾರಣ ಮೂರು ಮಾದರಿಯಲ್ಲಿ ಭಾರತದ್ದೇ ಪಾರುಪತ್ಯ ಎಂದು ಹೇಳಿಕೊಂಡಿದ್ದರು. ಆದರೆ, ಸಂಭ್ರಮ ಎರಡು ಗಂಟೆ ಅವಧಿಯೊಳಗೆ ಕೊನೆಗೊಂಡಿದೆ.

ಇದನ್ನೂ ಓದಿ : David Warner | ನಾನು ಕ್ರಿಮಿನಲ್‌ ಅಲ್ಲ, ನನ್ನ ಮೇಲಿನ ನಿಷೇಧ ಹಿಂದಕ್ಕೆ ಪಡೆಯಿರಿ ಎಂದ ಆಸೀಸ್‌ ಬ್ಯಾಟರ್‌

ಐಸಿಸಿ ಈ ರೀತಿಯ ಎಡವಟ್ಟು ಮಾಡುವುದು ಇದೇ ಮೊದಲಲ್ಲ. ಈ ಹಿಂದೆಯೂ ಟೆಸ್ಟ್​ ರ‍್ಯಾಂಕ್‌ ಪಟ್ಟಿ ಬಿಡುಗಡೆ ಮಾಡುವಾಗ ತಪ್ಪು ಮಾಡಿತ್ತು. ಕ್ರಿಕೆಟ್​ನ ಅಂತಾರಾಷ್ಟ್ರೀಯ ಸಂಸ್ಥೆಯೊಂದರ ನಿರಂತರ ತಪ್ಪಿಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version