Site icon Vistara News

WTC 2025: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಬೇಕಿದ್ದರೆ ಭಾರತಕ್ಕೆ ಇನೆಷ್ಟು ಗೆಲುವು ಬೇಕು?

WTC 2025: How many more wins do India need to enter the World Test Championship final?

ಮುಂಬಯಿ: ಮುಂದಿನ ವರ್ಷ ನಡೆಯುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್(WTC 2025)​ ಟೂರ್ನಿಯ ಫೈನಲ್​ ಪ್ರವೇಶಿಸಲು ಎಲ್ಲ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಎರಡು ಬಾರಿ ಟೆಸ್ಟ್​ ವಿಶ್ವಕಪ್​ ಫೈನಲ್‌ ತಲುಪಿರುವ ಭಾರತ ತಂಡ(Team India) ಈ ಬಾರಿ ಫೈನಲ್​ ಪ್ರವೇಶಿಸಬೇಕಿದ್ದರೆ ಎಷ್ಟು ಗೆಲುವು ಅಗತ್ಯ ಎನ್ನುವ ಮಾಹಿತಿ ಇಲ್ಲಿದೆ.

10 ಪಂದ್ಯ ಆಡಲಿದೆ ಭಾರತ


ಪೂರ್ವ ವೇಳಾಪಟ್ಟಿಯ ಪ್ರಕಾರ ಭಾರತ ಇನ್ನು 10 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇದರಲ್ಲಿ ತವರಿನಲ್ಲಿ ಬಾಂಗ್ಲಾ ವಿರುದ್ಧ 2, ನ್ಯೂಜಿಲ್ಯಾಂಡ್ ವಿರುದ್ಧ 3, ಆಸ್ಟ್ರೇಲಿಯಾ ಪ್ರವಾಸದಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಈ 10 ಟೆಸ್ಟ್​ ಪಂದ್ಯಗಳ ಪೈಕಿ ಭಾರತ ಕನಿಷ್ಠ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ನೇರವಾಗಿ ಫೈನಲ್​ ಪ್ರವೇಶಿಸಲಿದೆ. ಓ ಮೂಲಕ ಸತತ ಮೂರನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದ ಸಾಧನೆ ಮಾಡಲಿದೆ.

ಸದ್ಯ ಭಾರತ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇದುವರೆಗೆ ಆಡಿದ 9 ಪಂದ್ಯಗಲ್ಲಿ 6 ಜಯ, 2 ಸೋಲು, 1 ಡ್ರಾ ಸಾಧಿಸಿ 68.51 ಗೆಲುವಿನ ಸರಾಸರಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಜಯ ದಾಖಲಿಸಿ, 62.5 ಗೆಲುವಿನ ಸರಾಸರಿಯನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಉಳಿದ ಏಳು ಪಂದ್ಯಗಳಲ್ಲಿ 4 ಪಂದ್ಯ ಗೆದ್ದರೂ ಫೈನಲ್‌ ಪ್ರವೇಶಿಸಲಿದೆ. ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್​ ಪ್ರವೇಶದ ತೀವ್ರ ಪೈಪೋಟಿ ಏರ್ಪಟ್ಟಿದೆ.

ಮೂರನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್​ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 36 ಅಂಕ ಗಳಿಸಿದೆ. ಶ್ರೀಲಂಕಾ 4, ದಕ್ಷಿಣ ಆಫ್ರಿಕಾ ಐದನೇ ಸ್ಥಾನದಲ್ಲಿದೆ. ಈ ತಂಡಗಳಿಗೆ ಫೈನಲ್​ ಪ್ರವೇಶಿಸಬೇಕಿದ್ದರೆ, ಕಿವೀಸ್​ 8 ರಲ್ಲಿ 6, ಪಾಕಿಸ್ತಾನ 9 ರಲ್ಲಿ 7, ಶ್ರೀಲಂಕಾ 9 ರಲ್ಲಿ 6, ಬಾಂಗ್ಲಾದೇಶ 9 ರಲ್ಲಿ 7, ದಕ್ಷಿಣ ಆಫ್ರಿಕಾ 8 ರಲ್ಲಿ 7 ಪಂದ್ಯಗಳನ್ನು ಗೆಲ್ಲಲೇ ಬೇಕು. ಆಗ ಮಾತ್ರ ಫೈನಲ್​ ಪ್ರವೇಶಿಸುವ ಅವಕಾಶ ಲಭಿಸಲಿದೆ.

ಇದನ್ನೂ ಓದಿ Team India: ಆಸೀಸ್​ ಪ್ರವಾಸದಲ್ಲಿ 2 ದಿನಗಳ ಪಿಂಕ್‌ ಬಾಲ್‌ ಅಭ್ಯಾಸ ಪಂದ್ಯ ಆಡಲಿದೆ ಭಾರತ ತಂಡ

ಭಾರತ ಟೆಸ್ಟ್​ ಸರಣಿ ವೇಳಾಪಟ್ಟಿ


ಭಾರತ ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್​ ಪಂದ್ಯವನ್ನಾಡುವ ಮೂಲಕ ಟೆಸ್ಟ್​ ಸರಣಿ ಆರಂಭಿಸಲಿದೆ. ಇದಾದ ಬಳಿಕ ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನಾಡಲಿದೆ.


ಬಾಂಗ್ಲಾದೇಶ ವಿರುದ್ಧ


ಸೆಪ್ಟೆಂಬರ್​-19 ಮೊದಲ ಟೆಸ್ಟ್​ ಪಂದ್ಯ. ತಾಣ: ಚೆನ್ನೈ

ಸೆಪ್ಟೆಂಬರ್​​-27 ದ್ವಿತೀಯ ಟೆಸ್ಟ್​. ತಾಣ; ಕಾನ್ಪುರ

ನ್ಯೂಜಿಲ್ಯಾಂಡ್​ ವಿರುದ್ಧ


ಅಕ್ಟೋಬರ್​-16 ಮೊದಲ ಟಿ20. ತಾಣ: ಬೆಂಗಳೂರು

ಅಕ್ಟೋಬರ್-24 ದ್ವಿತೀಯ ಟಿ20. ತಾಣ: ಪುಣೆ

ನವೆಂಬರ್​-1 ಮೂರನೇ ಟಿ20. ತಾಣ: ಮುಂಬಯಿ

ಆಸ್ಟ್ರೇಲಿಯಾ ವಿರುದ್ಧ


ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್

ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಪಿಂಕ್​ ಬಾಲ್​ ಟೆಸ್ಟ್​)

ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್

ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್

ಐದನೇ ಟೆಸ್ಟ್: ಜನವರಿ 3-7, ಸಿಡ್ನಿ

Exit mobile version