Site icon Vistara News

WTC Final 2023: ಗಾಯದ ಕುರಿತು ಮಹತ್ವದ ಮಾಹಿತಿ ನೀಡಿದ ಅಜಿಂಕ್ಯ ರಹಾನೆ

ajinkya rahane injury update

ಲಂಡನ್​: ನಂಬುಗೆಯ ಬ್ಯಾಟರ್​ಗಳೆಲ್ಲ ವಿಕೆಟ್​ ಕೈ ಚೆಲ್ಲಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದಾಗ ಗಾಯವನ್ನೂ ಲೆಕ್ಕಿಸದೆ ಆಪದ್ಬಾಂಧವನಂತೆ ತಂಡಕ್ಕೆ ಆಸರೆಯಾಗಿ ನಿಂತ ಅಜಿಂಕ್ಯ ರಹಾನೆ(ajinkya rahane) ತಮ್ಮ ಗಾಯದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್(WTC Final 2023)​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್​ಗಳೆಲ್ಲ ಅಗ್ಗಕ್ಕೆ ಔಟಾಗಿ ಇನ್ನೇನು 100 ರನ್ ಕೂಡ ದಾಟುವುದು ಕಷ್ಟ ಎಂಬ ಪರಿಸ್ಥಿತಿ ಎದುರಿಸಿದ ವೇಳೆ ದಿಟ್ಟ ರೀತಿಯಲ್ಲಿಯಲ್ಲಿ ಹೋರಾಟದಿದ ರಹಾನೆ ತಮ್ಮ ಕೈ ಬೆರಳಿನ ಗಾಯಕ್ಕೆ ಬ್ಯಾಡೆಂಜ್​ ಸುತ್ತಿಕೊಂಡು ಎಲ್ಲ ನೋವನ್ನು ಸಹಿಸಿಕೊಳ್ಳುತ್ತಾ ರನ್​ ಗಳಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. 129 ಎಸೆತ ಎದುರಿಸಿದ ಅವರು 89 ರನ್​ ಗಳಿಸಿ ಔಟಾದರು. ಶಾರ್ದೂಲ್ ಠಾಕೂರ್​ ಜತೆ 7ನೇ ವಿಕೆಟ್​ಗೆ 109 ರನ್​ಗಳ ಜತೆಯಾಟ ಕೂಡ ನಡೆಸಿದರು.

ಪಂದ್ಯದ ಬಳಿಕ ಮಾತನಾಡಿದ ಅವರು “ಬೆರಳಿನ ನೋವಿದೆ, ಆದರೆ ಇದನ್ನೂ ಸಾಕಷ್ಟು ನಿರ್ವಹಿಸಬಲ್ಲೆ. ಇದು ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಬೇಡಿ. ಮೊದಲ ಇನಿಂಗ್ಸ್​ನಲ್ಲಿ ನಾನು ಬ್ಯಾಟಿಂಗ್ ಮಾಡಿದ ರೀತಿ ನನಗೆ ಸಂತೋಷವಿದೆ. ನೋವು ಇದ್ದರೂ ದ್ವಿತೀಯ ಇನಿಂಗ್ಸ್​ನಲ್ಲಿಯೂ ಬ್ಯಾಟಿಂಗ್​ ನಡೆಸಲಿದ್ದೇನೆ” ಎಂದು ಅಜಿಂಕ್ಯ ರಹಾನೆ ತಿಳಿಸಿದರು.

ಇದನ್ನೂ ಓದಿ WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್​ ಫೈನಲ್​ ಪಂದ್ಯ!

ಸುದೀರ್ಘ ಅವಧಿಯ ಬಳಿಕ ಟೆಸ್ಟ್ ಆಡಿದ ರಹಾನೆ ಬ್ಯಾಟಿಂಗ್​ ಕಂಡು ಎದುರಾಳಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​ ಕಮಿನ್ಸ್​ ಮತ್ತು ಸ್ಟೀವನ್​ ಸ್ಮಿತ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಹಾನೆ ಎಂದಿಗೂ ಸ್ಟಾರ್​ ಆಟಗಾರ. ತಂಡದ ಸಂಕಷ್ಟದಲ್ಲಿ ಅವರು ಯಾವತ್ತು ಆಡುತ್ತಾರೆ. ಕಳೆದ ಆಸೀಸ್​ ಪ್ರವಾಸದಲ್ಲಿಯೂ ಭಾರತ ತಂಡ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದರೂ ಆ ಬಳಿಕ ನಾಯಕತ್ವ ವಹಿಸಿದ ರಹಾನೆ ದ್ವಿತೀಯ ಪಂದ್ಯದಲ್ಲಿ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಜತೆಗೆ ಸರಣಿಯನ್ನೂ ಗೆದ್ದು ಬೀಗಿದ್ದರು ಎಂದು ಕಮಿನ್ಸ್​ ಅವರು ರಹಾನೆಯನ್ನು ಹಾಡಿ ಹೊಗಳಿದ್ದಾರೆ.

Exit mobile version