ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ದ್ವಿತೀಯ ದಿನದಾಟದ ಮುಕ್ತಾಯ ಕಂಡಿದೆ. ಭಾರತ ತಂಡ 5 ವಿಕೆಟ್ಗೆ 151 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.
174 ಎಸೆತ ಎದುರಿಸಿದ ಟ್ರಾವಿಸ್ ಹೆಡ್ ಅವರು 25 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 163 ರನ್ ಗಳಿಸಿ ಔಟಾದರು. ಇದೀಗ ಕ್ಯಾಮರೂನ್ ಗ್ರೀನ್ ಅವರು ಆಡಲಿಳಿದಿದ್ದಾರೆ.
ಅಪಾಯಕಾರಿ ಟ್ರಾವಿಸ್ ಹೆಡ್ ವಿಕೆಟ್ ಕಿತ್ತ ಮೊಹಮ್ಮದ್ ಸಿರಾಜ್
ಭಾರತ ವಿರುದ್ಧ ಸ್ಟೀವನ್ ಸ್ಮಿತ್ ಬಾರಿಸಿದ 9ನೇ ಟೆಸ್ಟ್ ಶತಕ ಇದಾಗಿದೆ. ಜೋ ರೂಟ್ ಕೂಡ 9 ಶತಕ ಬಾರಿಸಿದ್ದಾರೆ.
ಶತಕ ಬಾರಿಸುವ ಮೂಲಕ ಸ್ಮಿತ್ ಅವರು ನೂತನ ಮೈಲುಗಲ್ಲೊಂದನ್ನು ನಿರ್ಮಿಸಿದರು. ಆಸ್ಟ್ರೇಲಿಯಾ ಪರ ಅತ್ಯಧಿಕ ಟೆಸ್ಟ್ ಶತಕ ಬಾರಿಸಿದ ಯಾದಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಮೂರನೇ ಸ್ಥಾನದಲ್ಲಿದ ಮ್ಯಾಥ್ಯು ಹೇಡನ್ 4ನೇ ಸ್ಥಾನಕ್ಕೆ ಕುಸಿದರು. ಅತಿ ಹೆಚ್ಚು ಶತಕ ಬಾರಿಸಿದ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 41 ಶತಕ ಬಾರಿಸಿದ್ದಾರೆ.
ಕ್ರೀಸ್ಗೆ ಇಳಿದ ಮೊದಲ ಓವರ್ನಲ್ಲಿಯೇ ಸತತ ಬೌಂಡರಿ ಬಾರಿಸಿ ಶತಕ ಪೂರ್ತಿಗೊಳಿಸಿದ ಸ್ಟೀವನ್ ಸ್ಮಿತ್