Site icon Vistara News

WTC Final 2023: ದ್ವಿತೀಯ ದಿನದಾಟ ಅಂತ್ಯ; ಸಂಕಷ್ಟದಲ್ಲಿ ಭಾರತ ತಂಡ

Kennington Oval

ಲಂಡನ್​: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ದ್ವಿತೀಯ ದಿನದಾಟದ ಮುಕ್ತಾಯ ಕಂಡಿದೆ. ಭಾರತ ತಂಡ 5 ವಿಕೆಟ್​ಗೆ 151 ರನ್​ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

Abhilash B C

ದ್ವಿತೀಯ ದಿನದಾಟದಲ್ಲಿ ಭಾರತೀಯ ಬೌಲರ್​ಗಳು ಆಸೀಸ್​ ಆಟಗಾರರನ್ನು ಬೇಗನೆ ಔಟ್​ ಮಾಡದೇ ಹೋದರೆ ಭಾರತಕ್ಕೆ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಶಮಿ, ಸಿರಾಜ್​, ಉಮೇಶ್​ ಯಾದವ್​ ಮತ್ತು ಶಾರ್ದೂಲ್​ ಠಾಕೂರ್​ ಅವರು ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ. ಅದರಲ್ಲೂ ಶಾರ್ದೂಲ್​ ಅವರು ನೋ ಬಾಲ್​ ಎಸೆಯುವುದನ್ನು ಕಡಿಮೆ ಮಾಡಬೇಕಿದೆ. ಮೊದಲ ದಿನ ಅವರು 4 ನೋ ಬಾಲ್​ ಎಸೆದಿದ್ದರು.

Abhilash B C

ಮೊದಲ ದಿನ ಆಸ್ಟ್ರೇಲಿಯಾ ತಂಡ 3 ವಿಕೆಟ್​ಗೆ 327 ರನ್​ ಗಳಿಸಿತ್ತು. ಸ್ಮಿತ್​ 95* ಮತ್ತು ಹೆಡ್​ 146* ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದರು. ಗುರುವಾರ ಸ್ಮಿತ್​ 5 ರನ್​ ಗಳಿಸಿದರೆ ಶತಕ ಪೂರ್ತಿಗೊಳಿಸಲಿದ್ದಾರೆ.

Abhilash B C

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ದ್ವಿತೀಯ ದಿನದಾಟ ಇನ್ನೇನು ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ.

Exit mobile version