Site icon Vistara News

WTC Final 2023: ಭಾರತ-ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಹೈಲೆಟ್ಸ್​

WTC Final 2023

ಲಂಡನ್​: ರೋಚಕ ಘಟ್ಟ ತಲುಪಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯ ನಾಲ್ಕನೇ ದಿನದಾಟಕ್ಕೆ ಬಂದು ನಿಂತಿದೆ. ಈ ಪಂದ್ಯದ ಹೈಲೆಟ್ಸ್​ ಇಲ್ಲಿದೆ.

Sukhesha Padibagilu

ಭಾರತ ತಂಡದ ಮೂರನೇ ವಿಕೆಟ್ ಪತನ. ರೋಹಿತ್​ ಪೆವಿಲಿಯನ್​ಗೆ ಮರಳಿದ ಬೆನ್ನಲ್ಲೇ ಸುಲಭ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದ ಚೇತೇಶ್ವರ್​ ಪೂಜಾರ. 27 ರನ್​ ಬಾರಿಸಿದ್ದ ಅವರು ಎದುರಾಳಿ ತಂಡದ ನಾಯಕ ಪ್ಯಾಟ್​ ಕಮಿನ್ಸ್ ಅವರ ಎಸೆತವನ್ನು ಅನವಶ್ಯಕ ಕೆಣಕಲು ಮುಂದಾಗಿ ವಿಕೆಟ್​ಕೀಪರ್​ ಅಲೆಕ್ಸ್​ ಕ್ಯೇರಿಗೆ ಕ್ಯಾಚ್ ನೀಡಿದರು. ಭಾರತ ತಂಡದ ಮೊತ್ತ 93 ರನ್​ಗೆ 3 ವಿಕೆಟ್​. ಬಾಕಿ ಇರುವ 7 ವಿಕೆಟ್​ಗಳ ಜತೆ 351 ರನ್​ಗಳ ಗುರಿಯನ್ನು ಬೆನ್ನಟ್ಟಬೇಕಾಗಿದೆ.

Sukhesha Padibagilu

ಭಾರತ ತಂಡದ ಎರಡನೇ ವಿಕೆಟ್​ ಪತನ. ಅತ್ಯುತ್ತಮವಾಗಿ ಅಡುತ್ತಿದ್ದ ನಾಯಕ ರೋಹಿತ್​ ಶರ್ಮಾ 43 ರನ್​ ಬಾರಿಸಿ ಔಟ್​. 444 ರನ್​ಗಳ ವಿಜಯದ ಗುರಿಯನ್ನು ಬೆನ್ನಟ್ಟುತ್ತಿರುವ ಭಾರತ ತಂಡ 19.5 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 92 ರನ್​ ಬಾರಿಸಿದೆ. ಎರಡನೇ ಇನಿಂಗ್ಸ್​ನಲ್ಲಿ ತಮ್ಮ ಮೊದಲ ಓವರ್​ನಲ್ಲಿಯೇ ವಿಕೆಟ್​ ಪಡೆದ ಸ್ಪಿನ್ನರ್ ನೇಥನ್ ಲಯಾನ್​. ಎಂಟು ವಿಕೆಟ್​ಗಳಿಗೆ ಭಾರತದ ಬಳಿ. 352 ರನ್​ಗಳ ಬೃಹತ್ ಗುರಿಯೂ ಮುಂದಿದೆ. ದಿನದಾಟ ಮುಗಿಯಲು ಇನ್ನೂ 20 ಓವರ್​ಗಳು ಬಾಕಿ ಇವೆ.

Sukhesha Padibagilu

ಚಹಾ ವಿರಾಮದ ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ. ಮೂರನೇ ಕ್ರಮಾಂಕದಲ್ಲಿ ಆಡಲು ಕ್ರೀಸ್​ಗೆ ಇಳಿದ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರ.

Sukhesha Padibagilu

ನಾಲ್ಕನೇ ದಿನದ ಟಿ ವಿರಾಟ್​ ಘೋಷಿಸಿದ ಅಂಪೈರ್​. ಭಾರತ ತಂಡ 41 ರನ್​ಗಳಿಗೆ ಒಂದು ವಿಕೆಟ್​ ಕಳೆದುಕೊಂಡಿದೆ.

Sukhesha Padibagilu

್ಬೋದರಲ್ಯಾಂಡ್​ಗೆ ಎರಡನೇ ಇನಿಂಗ್ಸ್​​ನಲ್ಲಿ ಮೊದಲ ಯಶಸ್ಸು. ಶುಬ್ಮನ್ ಗಿಲ್ ಕ್ಯಾಚ್​ ಹಿಡಿದ ಗ್ರೀನ್. ಗಲ್ಲಿ ಪ್ರದೇಶದಲ್ಲಿ ಗ್ರೀನ್ ಅವರಿಿಂದ ಮತ್ತೊಂದು ಅದ್ಭುತ ಕ್ಯಾಚ್​? ಮೊದಲ ನೋಟಕ್ಕೆ ಕ್ಯಾಚ್​ ನೆಲಕ್ಕೆ ಚೆಲ್ಲಿದಂತಿತ್ತು. ಆದರೆ ಮೂರನೇ ಅಂಪೈರ್ “ಚೆಂಡಿನ ಕೆಳಗೆ ಬೆರಳುಗಳು” ಎಂದು ಹೇಳುವ ಮೂಲಕ ಔಟ್​ ನೀಡುತ್ತಾರೆ.

Exit mobile version