ಲಂಡನ್: ರೋಚಕ ಘಟ್ಟ ತಲುಪಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಾಲ್ಕನೇ ದಿನದಾಟಕ್ಕೆ ಬಂದು ನಿಂತಿದೆ. ಈ ಪಂದ್ಯದ ಹೈಲೆಟ್ಸ್ ಇಲ್ಲಿದೆ.
ಭಾರತ ತಂಡದ ಮೂರನೇ ವಿಕೆಟ್ ಪತನ. ರೋಹಿತ್ ಪೆವಿಲಿಯನ್ಗೆ ಮರಳಿದ ಬೆನ್ನಲ್ಲೇ ಸುಲಭ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ ಚೇತೇಶ್ವರ್ ಪೂಜಾರ. 27 ರನ್ ಬಾರಿಸಿದ್ದ ಅವರು ಎದುರಾಳಿ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರ ಎಸೆತವನ್ನು ಅನವಶ್ಯಕ ಕೆಣಕಲು ಮುಂದಾಗಿ ವಿಕೆಟ್ಕೀಪರ್ ಅಲೆಕ್ಸ್ ಕ್ಯೇರಿಗೆ ಕ್ಯಾಚ್ ನೀಡಿದರು. ಭಾರತ ತಂಡದ ಮೊತ್ತ 93 ರನ್ಗೆ 3 ವಿಕೆಟ್. ಬಾಕಿ ಇರುವ 7 ವಿಕೆಟ್ಗಳ ಜತೆ 351 ರನ್ಗಳ ಗುರಿಯನ್ನು ಬೆನ್ನಟ್ಟಬೇಕಾಗಿದೆ.
ಭಾರತ ತಂಡದ ಎರಡನೇ ವಿಕೆಟ್ ಪತನ. ಅತ್ಯುತ್ತಮವಾಗಿ ಅಡುತ್ತಿದ್ದ ನಾಯಕ ರೋಹಿತ್ ಶರ್ಮಾ 43 ರನ್ ಬಾರಿಸಿ ಔಟ್. 444 ರನ್ಗಳ ವಿಜಯದ ಗುರಿಯನ್ನು ಬೆನ್ನಟ್ಟುತ್ತಿರುವ ಭಾರತ ತಂಡ 19.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 92 ರನ್ ಬಾರಿಸಿದೆ. ಎರಡನೇ ಇನಿಂಗ್ಸ್ನಲ್ಲಿ ತಮ್ಮ ಮೊದಲ ಓವರ್ನಲ್ಲಿಯೇ ವಿಕೆಟ್ ಪಡೆದ ಸ್ಪಿನ್ನರ್ ನೇಥನ್ ಲಯಾನ್. ಎಂಟು ವಿಕೆಟ್ಗಳಿಗೆ ಭಾರತದ ಬಳಿ. 352 ರನ್ಗಳ ಬೃಹತ್ ಗುರಿಯೂ ಮುಂದಿದೆ. ದಿನದಾಟ ಮುಗಿಯಲು ಇನ್ನೂ 20 ಓವರ್ಗಳು ಬಾಕಿ ಇವೆ.
ಚಹಾ ವಿರಾಮದ ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ. ಮೂರನೇ ಕ್ರಮಾಂಕದಲ್ಲಿ ಆಡಲು ಕ್ರೀಸ್ಗೆ ಇಳಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ.
ನಾಲ್ಕನೇ ದಿನದ ಟಿ ವಿರಾಟ್ ಘೋಷಿಸಿದ ಅಂಪೈರ್. ಭಾರತ ತಂಡ 41 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ.
್ಬೋದರಲ್ಯಾಂಡ್ಗೆ ಎರಡನೇ ಇನಿಂಗ್ಸ್ನಲ್ಲಿ ಮೊದಲ ಯಶಸ್ಸು. ಶುಬ್ಮನ್ ಗಿಲ್ ಕ್ಯಾಚ್ ಹಿಡಿದ ಗ್ರೀನ್. ಗಲ್ಲಿ ಪ್ರದೇಶದಲ್ಲಿ ಗ್ರೀನ್ ಅವರಿಿಂದ ಮತ್ತೊಂದು ಅದ್ಭುತ ಕ್ಯಾಚ್? ಮೊದಲ ನೋಟಕ್ಕೆ ಕ್ಯಾಚ್ ನೆಲಕ್ಕೆ ಚೆಲ್ಲಿದಂತಿತ್ತು. ಆದರೆ ಮೂರನೇ ಅಂಪೈರ್ “ಚೆಂಡಿನ ಕೆಳಗೆ ಬೆರಳುಗಳು” ಎಂದು ಹೇಳುವ ಮೂಲಕ ಔಟ್ ನೀಡುತ್ತಾರೆ.