ಲಂಡನ್: ಪ್ರತಿಷ್ಠಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮಾಹಿತಿ ಇಲ್ಲಿದೆ.
ಆರಂಭಿಕ ಆಘಾತದಿಂದ ಚೇತರಿಕೆ ಕಂಡಿರುವ ಆಸ್ಟ್ರೇಲಿಯಾ ತಂಡ ಉತ್ತಮ ರನ್ ಕಲೆಹಾಕುತ್ತಿದೆ. ಸದ್ಯ 19 ಓವರ್ ಮುಕ್ತಾಯಕ್ಕೆ ಒಂದು ವಿಕೆಟ್ಗೆ 60 ರನ್ ಗಳಿಸಿದೆ.
ಭಾರತಕ್ಕೆ ಮೊದಲ ಯಶಸ್ಸು ಆಸೀಸ್ ತಂಡದ ಮೊದಲ ವಿಕೆಟ್ ಪತನ. ಖವಾಜಾ ವಿಕೆಟ್ ಕಿತ್ತ ಮೊಹಮ್ಮದ್ ಸಿರಾಜ್
2 ಓವರ್ ಮುಕ್ತಾಯಗೊಂಡರೂ ಖಾತೆ ತೆರೆಯದ ಆಸ್ಟ್ರೇಲಿಯಾ
ಮೊಹಮ್ಮದ್ ಶಮಿ ಮತ್ತು ಸಿರಾಜ್ ಅವರ ಬೆಂಕಿ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡುತ್ತಿರುವ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್
ಈ ಸ್ಟೇಡಿಯಂನಲ್ಲಿ ಒಟ್ಟು 104 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ 38 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯಭೇರಿ ಮೊಳಗಿಸಿದೆ. 29 ಬಾರಿ ಚೇಸಿಂಗ್ ನಡೆಸಿದ ತಂಡಗಳು ಮೇಲುಗೈ ಸಾಧಿಸಿದೆ.