Site icon Vistara News

WTC Final 2023: ವಿಶೇಷ ದಾಖಲೆ ಬರೆದ ಮೊಹಮ್ಮದ್ ಸಿರಾಜ್​

WTC Final 2023

ಲಂಡನ್​: ಟೀಮ್​ ಇಂಡಿಯಾದ ಪ್ರಮುಖ ವಿಕೆಟ್​ ಟೇಕರ್​ ಬೌಲರ್​ ಮೊಹಮ್ಮದ್​ ಸಿರಾಜ್​ ಅವರು ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ನಾಲ್ಕು ವಿಕೆಟ್​ ಕಬಳಿಸಿದ್ದಾರೆ. ಈ ಮೂಲಕ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ.

ಲಂಡನ್‌ನ ಐತಿಹಾಸಿಕ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ನಲ್ಲಿ 469 ರನ್​ ಗಳಿಸಿ ಸವಾಲೊಡ್ಡಿದೆ. ಗುರಿ ಬೆನ್ನಟ್ಟುತ್ತಿರುವ ಭಾರತ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮೊಹಮ್ಮದ್​ ಸಿರಾಜ್​ ಅವರು ಈ ಪಂದ್ಯದಲ್ಲಿ 28.3 ಓವರ್​ ಎಸೆದು 4 ಮೇಡನ್​ ಸಹಿತ 108 ರನ್​ ವೆಚ್ಚದಲ್ಲಿ ಪ್ರಮುಕ 4 ವಿಕೆಟ್​ ಉರುಳಿಸಿದರು. ಈ ಮೂಲಕ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ 50ನೇ ವಿಕೆಟ್​ ಪೂರ್ತಿಗೊಳಿಸಿದರು. ಒಟ್ಟಾರೆ ಅವರ ಖಾತೆಯಲ್ಲಿ ಇದೀಗ 51 ವಿಕೆಟ್​ಗಳಿವೆ. ವಿಶೇಷ ಎಂದರೆ ಈ ವಿಕೆಟ್​ಗಳಲ್ಲಿ 21 ವಿಕೆಟ್​ಗಳು ಇಂಗ್ಲೆಂಡ್​ ನೆಲದಲ್ಲಿಯೇ ದಾಖಲಾಗಿದೆ. ಟೆಸ್ಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದ ಭಾರತದ 42ನೇ ಬೌಲರ್​ ಎಂಬ ಹಿರಿಮೆಗೂ ಪಾತ್ರರಾದರು.

ಇದನ್ನೂ ಓದಿ WTC Final 2023: 87 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಮಿತ್​-ಹೆಡ್​ ಜೋಡಿ

ಪ್ರತಿ ಪಂದ್ಯದಲ್ಲಿಯೂ ಮೊದಲ ವಿಕೆಟ್​ ಕೆಡವಿ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಡುತ್ತಿರುವ ಸಿರಾಜ್​ ಅವರು ಇದೇ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ನಲ್ಲಿಯೂ ಸ್ಥಾನ ಪಡೆದು ಭಾರತಕ್ಕೆ ಯಶಸ್ಸು ತಂದುಕೊಡುವ ವಿಶ್ವಾಸದಲ್ಲಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿಯೂ ಅವರು ಆರ್​ಸಿಬಿ ಪರ ಅತ್ಯಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

Exit mobile version