ಲಂಡನ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ(WTC Final 2023) ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆಡುವ ಅವಕಾಶ ಪಡೆದಿದ್ದರು ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಈ ಪಂದ್ಯದ ಕಾಮೆಂಟ್ರಿ ಮಾಡುತ್ತಿದ್ದ ವೇಳೆ ರಿಕಿ ಪಾಂಟಿಂಗ್ ಮತ್ತು ನಾಸಿರ್ ಹುಸೇನ್ ಅವರು ಹಾರ್ದಿಕ್ ಪಾಂಡ್ಯ ವಿಚಾರವಾಗಿ ಮಾತನಾಡಿದ್ದಾರೆ. ಇದೇ ವೇಳೆ ಪಾಂಟಿಂಗ್ ಅವರು ಹಾರ್ದಿಕ್ ಪಾಂಡ್ಯ ಅವರು ಈ ಪಂದ್ಯಕ್ಕೆ ಶೇ.10ರಷ್ಟು ಆಯ್ಕೆ ಆಗಿದ್ದರು. ಆದರೆ ಪಾಂಡ್ಯ ಸೀಮಿತ ಓವರ್ಗಳ ಪಂದ್ಯದತ್ತ ಹೆಚ್ಚಿನ ಗಮನ ಹರಿಸುತ್ತಿರುವ ಕಾರಣ ಅವರು ಈ ಪಂದ್ಯದಿಂದ ಹಿಂದೆ ಸರಿದಂತೆ ಕಾಣುತ್ತಿದೆ ಎಂದರು.
ಹಾರ್ದಿಕ್ ಪಾಂಡ್ಯ ಅವರು ಇದುವರೆಗೆ 11 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಒಂದು ಶತಕ ಮತ್ತು ನಾಲ್ಕು ಅರ್ಧ ಶತಕವನ್ನು ಅವರು ದಾಖಲಿಸಿದ್ದಾರೆ. ಬೆನ್ನು ನೋವಿನ ಚೇತರಿಕೆ ಬಳಿಕ ಅವರು ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಒಂದೊಮ್ಮೆ ಅವರು ಈ ಪಂದ್ಯದಲ್ಲಿ ಆಡಿದರೆ ಕೇವಲ ಬ್ಯಾಟಿಂಗ್ಗೆ ಮಾತ್ರ ನಿರ್ವಹಿಸಿದರೆ ತಂಡಕ್ಕೆ ನಷ್ಟವಾಗಲಿದೆ. ಹೀಗಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ನಡೆಸಬಲ್ಲ ಶಾರ್ದೂಲ್ ಠಾಕೂರ್ ಅವರು ಅಂತಿಮವಾಗಿ ಆಯ್ಕೆಯಾದರು ಎಂದರು. ಪಾಂಡ್ಯ ಅವರ ಈ ನಿರ್ಧಾರವೂ ನನಗೆ ಸರಿ ಎನಿಸಿದೆ ಎಂದರು.
ಇದನ್ನೂ ಓದಿ WTC Final 2023: ಒಂದೇ ಶತಕದ ಮೂಲಕ ಹಲವು ದಿಗ್ಗಜರ ದಾಖಲೆ ಪುಡಿಗಟ್ಟಿದ ಸ್ಟೀವನ್ ಸ್ಮಿತ್
ಆಸ್ಟ್ರೇಲಿಯಾ ತಂಡ ಸೂಕ್ತ ಆಲ್‌ರೌಂಡರ್ ಆದ ಕ್ಯಾಮರೂನ್ ಗ್ರೀನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದು ತಂಡಕ್ಕೆ ನೆರವಾಗುವ ಎಲ್ಲ ಸಾಧ್ಯತೆ ಇದೆ. ಒಂದೊಮ್ಮೆ ಪಾಂಡ್ಯ ಅವರು ಈ ಪಂದ್ಯದಲ್ಲಿ ಅವಕಾಶ ಪಡೆಯುತ್ತಿದ್ದರೆ ಭಾರತಕ್ಕೆ ಹೆಚ್ಚಿನ ಲಾಭವಾಗುತ್ತಿತ್ತು. ಪಾಂಡ್ಯ ಅವರ ಇತ್ತೀಚಿನ ಆಟವನ್ನು ಗಮನಿಸುವಾಗ ಅವರು ಆಟದಲ್ಲಿ ಹೆಚ್ಚಿನ ಪ್ರಬುದ್ಧತೆ ಹೊಂದಿರುವಂತೆ ಕಾಣುತ್ತಿದೆ ಎಂದು ಪಾಂಟಿಂಗ್ ಹೇಳಿದರು.