ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC Final 2023) ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಪ್ರಮುಖ 2 ವಿಕೆಟ್ ಪಡೆಯುವ ಮೂಲಕ 44 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ.
ದ್ವಿತೀಯ ಇನಿಂಗ್ಸ್‌ನಲ್ಲಿ ಆಸೀಸ್ ಪ್ರಮುಖ ಬ್ಯಾಟರ್ಗಳಾದ ಸ್ಟೀವನ್ ಸ್ಮಿತ್(Steven Smith) ಹಾಗೂ ಟ್ರಾವಿಸ್ ಹೆಡ್(Travis Head) ಅವರ ವಿಕೆಟ್ ಪಡೆಯುವಯುವ ಮೂಲಕ ಭಾರತದ ಮಾಜಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿಯವರ ದಾಖಲೆಯನ್ನು ಮರಿದಿದ್ದಾರೆ. ಎಡಗೈ ಬೌಲರ್ ಆಗಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕು ಮೊದಲು ಈ ದಾಖಲೆ 266 ವಿಕೆಟ್ ಕಿತ್ತ ಬಿಷನ್ ಸಿಂಗ್ ಬೇಡಿ(Bishan Singh Bedi) ಅವರ ಹೆಸರಿನಲ್ಲಿತ್ತು. ಇದೀಗ ಜಡೇಜಾ 267 ವಿಕೆಟ್ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಆದರೆ ವಿಶ್ವ ಟೆಸ್ಟ್ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರನಾಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಸ್ಪಿನ್ನರ್‌ಗಳು
ರಂಗನ ಹೆರಾತ್- ಶ್ರೀಲಂಕಾ (433 ವಿಕೆಟ್)
ಡೇನಿಯಲ್ ವೆಟೋರಿ-ನ್ಯೂಜಿಲ್ಯಾಂಡ್ (362 ವಿಕೆಟ್)
ಡೆರಿಕ್ ಅಂಡರ್‌ವುಡ್- ಇಂಗ್ಲೆಂಡ್ (297 ವಿಕೆಟ್)
ರವೀಂದ್ರ ಜಡೇಜಾ- ಭಾರತ (267 ವಿಕೆಟ್)
ಬಿಷನ್ ಸಿಂಗ್ ಬೇಡಿ- ಭಾರತ (266 ವಿಕೆಟ್)
ಇದನ್ನೂ ಓದಿ WTC Final 2023: ಗಾಯದ ಕುರಿತು ಮಹತ್ವದ ಮಾಹಿತಿ ನೀಡಿದ ಅಜಿಂಕ್ಯ ರಹಾನೆ
ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ನಲ್ಲಿಯೂ ಉತ್ತಮ ಪ್ರದರ್ಶನ ತೋರಿದ ಜಡೇಜಾ 48 ಬಾರಿಸಿದ್ದರು. ಇತ್ತೀಚೆಗೆ ಮುಕ್ತಾಯ ಕಂಟ 16ನೇ ಆವೃತ್ತಿಯ ಐಪಿಎಲ್ ಫೈನಲ್ನಲ್ಲಿ ಅಂತಿಮ ಎರಡು ಎಸೆತಗಳಲ್ಲಿ 10 ರನ್ ಬೇಕಿದ್ದಾಗ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವುವನ್ನು ತಂದು ಕೊಟ್ಟು ಹೀರೋ ಆಗಿ ಹೊರಮೊಮ್ಮಿದ್ದರು. ಸದ್ಯ ಆಲ್‌ರೌಂಡರ್ ಪ್ರದರ್ಶನ ತೋರುವ ಮೂಲಕ ಮಿಂಚುತ್ತಿರುವ ಅವರು ಏಕದಿನ ವಿಶ್ವಕಪ್ನಲ್ಲಿಯೂ ಭಾರತ ತಂಡಕ್ಕೆ ನೆರವಾಗುವ ವಿಶ್ವಾಸವೊಂದನ್ನು ಬಿಸಿಸಿಐ ಇರಿಸಿಕೊಂಡಿದೆ.