ಲಂಡನ್: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(WTC Final 2023) ಪಂದ್ಯದಲ್ಲಿ ಭಾರತ ತಂಡ ನೂತನ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಹೊಸ ಜೆರ್ಸಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆಟಗಾರರ ಫೋಟೊಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಲೈಟ್ಸ್, ಕ್ಯಾಮೆರಾ, ಹೆಟ್ಶಾಟ್ ಎಂದು ಬರೆದುಕೊಂಡಿದೆ. ಈ ಫೋಟೊಗಳು ವೈರಲ್ ಆಗಿವೆ. ಮಹತ್ವದ ಪಂದ್ಯಕ್ಕೂ ಮುನ್ನ ಆಟಗಾರರಿಗೆ ಅಡಿಡಾಸ್ ಸಂಸ್ಥೆ ಹೊಸ ಜೆರ್ಸಿ ಕಿಟ್ಗಳನ್ನು ಒದಗಿಸಿದೆ.
ಭಾರತ ತಂಡದ ಆಟಗಾರರು ಈ ಜೆರ್ಸಿಯಲ್ಲಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ ಮತ್ತು ಇತರ ಆಟಗಾರರ ಫೋಟೋಗಳನ್ನು ಬಿಸಿಸಿಐ ಮತ್ತು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇತ್ತೀಚೆಗೆ ಭಾರತ ಕ್ರಿಕೆಟ್ ತಂಡ ಆಟಗಾರರ ಕಿಟ್ ಪ್ರಾಯೋಜಕ್ವವನ್ನು ಅಡಿಡಾಸ್ ವಹಿಸಿಕೊಂಡಿತ್ತು. ಮೂರು ಮಾದರಿಯ ಕ್ರಿಕೆಟ್ಗೆ ಹೊಸ ಜರ್ಸಿ ಸಿದ್ಧಪಡಿಸಲಾಗಿದೆ. ಟೆಸ್ಟ್ಗೆ ಸಾಂಪ್ರದಾಯಿಕ ಬಿಳಿ ಮತ್ತು ಏಕದಿನಕ್ಕೆ ನೀಲಿ ಬಣ್ಣದ ಡ್ರೆಸ್ನಲ್ಲಿ ಭಾರತ ಇನ್ನು ಮುಂದೆ ಕಣಕ್ಕಿಳಿಯಲಿದೆ.
Lights 💡
— BCCI (@BCCI) June 5, 2023
Camera 📸
Headshots ✅#TeamIndia | #WTC23 pic.twitter.com/9G34bFfg78
ಈ ಮಹತ್ವದ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರು ಈಗಾಗಲೇ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಐಪಿಎಲ್ನಲ್ಲಿ ಮಿಂಚಿದ್ದ ಶುಭಮನ್ ಗಿಲ್ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಮತ್ತು ಸಿರಾಜ್ ಈ ಪಂದ್ಯದಲ್ಲಿ ಯಾವ ರೀತಿಯ ಫಾರ್ಮ್ ತೋರ್ಪಡಿಸಲಿದ್ದಾರೆ ಎಂದು ಕಾದು ನೋಡಬೇಕಿದೆ. ಒಂದೊಮ್ಮೆ ಇವರಲ್ಲಿ ಇಬ್ಬರು ಆಟಗಾರರು ಮಿಂಚಿದರೂ ಭಾರತಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ.
ಈ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಯಾರು ಮಾಡಲಿದ್ದಾರೆ ಎಂಬ ಅನುಮಾನ ಎಲ್ಲರಲ್ಲಿಯೂ ಮೂಡಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ ಶ್ರೀಕರ್ ಭರತ್ ಅವರು ಕೀಪಿಂಗ್ ಗ್ಲೌಸ್ ತೊಡುವುದು ಪಕ್ಕಾ ಎಂಬಂತಿದೆ. ಇಶಾನ್ ಕಿಶನ್ ಅವರು 5 ದಿನಗಳ ಕಾಲ ಕೀಪಿಂಗ್ ನಡೆಸುವಷ್ಟು ಸಾಮರ್ಥ್ಯ ಇಲ್ಲದ ಕಾರಣ ಅವರಿಗೆ ಅವಕಾಶ ಸಿಗುವುದು ಅನುಮಾನ.
ಇದನ್ನೂ ಓದಿ WTC Final 2023: ಫೈನಲ್ಗೂ ಮುನ್ನವೇ ಮೈಂಡ್ ಗೇಮ್ ಆರಂಭಿಸಿದ ಆಸೀಸ್ ಆಟಗಾರರು; ಕೊಹ್ಲಿ ಬಗ್ಗೆ ಹೇಳಿದ್ದೇನು?
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್ ಕೀಪರ್). ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.