Site icon Vistara News

WTC Final 2023: ಭಾರತ-ಆಸೀಸ್​ ಮೂರನೇ ದಿನದಾಟದ ಅಂತ್ಯ

ICC World Test Championship Final 2023

ಲಂಡನ್​: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೂರನೇ ದಿನದಾಟದ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್​ನಲ್ಲಿ 4 ವಿಕೆಟ್​ಗೆ 123 ರನ್​ ಗಳಿಸಿ ಒಟ್ಟಾರೆ 296 ರನ್​ಗಳ ಮುನ್ನಡೆ ಸಾಧಿಸಿದೆ.

Abhilash B C

ಕಮಿನ್ಸ್​ ಓವರ್​ನಲ್ಲಿ ಎರಡು ಬೌಂಡರಿ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದ ಶಾರ್ದೂಲ್​. ಈ ಮೂಲಕ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಅರ್ಧಶತಕ ಬಾರಿಸಿದ ಎರಡನೇ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದರು. ರಹಾನೆ ಮೊದಲಿಗ.

Abhilash B C

ಅರ್ಧಶತಕ ಬಾರಿಸಿ ಮಿಂಚಿದ ಶಾರ್ದೂಲ್​ ಠಾಕೂರ್​. 288 ರನ್​ ಗಳಿಸಿದ ಭಾರತ

Abhilash B C

8 ವಿಕೆಟ್​ ಕಳೆದುಕೊಂಡ ಭಾರತ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಉಮೇಶ್​ ಯಾದವ್​ ಅವರು 5 ರನ್​ ಗಳಿಸಿ ಕ್ಲೀನ್​ ಬೌಲ್ಡ್​ ಆದರು. ಈ ವಿಕೆಟ್​ ಕಮಿನ್ಸ್​ ಪಾಲಾಯಿತು.

Abhilash B C

ಅಜಿಂಕ್ಯ ರಹಾನೆ ವಿಕೆಟ್​ ಪತನ. 89 ರನ್​ ಗಳಿಸಿದ ಅವರು ಪ್ಯಾಟ್​ ಕಮಿನ್ಸ್​ ಎಸೆತದಲ್ಲಿ ಕ್ಯಾಮರೂನ್​ ಗ್ರೀನ್​ಗೆ ಕ್ಯಾಚ್​ ನೀಡಿ ವಿಕೆಟ್​ ಕೈ ಚೆಲ್ಲಿದರು. ಅವರ ಈ ಹೋರಾಟದಿಂದ ಭಾರತ ಮೊದಲ ಇನಿಂಗ್ಸ್​ನಲ್ಲಿ ಭಾರಿ ಅಂತರದ ಹಿನ್ನಡೆಯಿಂದ ಪಾರಾಗಿದೆ.

Abhilash B C

ಫಾಲೋಆನ್‌ ತಪ್ಪಿಸಿಕೊಂಡು ಮುನ್ನಗುತ್ತಿರುವ ಭಾರತ ತಂಡ. ಅರ್ಧಶತಕ ಬಾರಿಸಿದ ಅಜಿಂಕ್ಯ ರಹಾನೆ ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಅರ್ಧಶತಕ ಬಾರಿಸಿದ ವೇಳೆ ರಹಾನೆ ಅವರು ತಮ್ಮ ಹೆಸರಿಗೆ ನೂತನ ದಾಖಲೆಯೊಂದನ್ನು ಬರೆದರು. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಸದ್ಯ ರಹಾನೆ 89 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

Exit mobile version