Site icon Vistara News

WTC Final 2023: ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ ವಿರಾಟ್​,ರೋಹಿತ್​

team india started practice

WTC Final 2023: Virat, Rohit started batting practice

ಲಂಡನ್​: ಪ್ರತಿಷ್ಠಿತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ಟೀಮ್​ ಇಂಡಿಯಾ ಆಟಗಾರರು ಓವಲ್​ ಮೈದಾನದಲ್ಲಿ ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಪ್ರಮುಖ ಆಟಗಾರರು ನೆಟ್ಸ್​​ನಲ್ಲಿ ಬ್ಯಾಟಿಂಗ್​ ಅಭ್ಯಾಸದಲ್ಲಿ ನಿರತರಾಗಿರುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಬುಧವಾರ ಭಾರತ ತಂಡದ ಆಟಗಾರರೆಲ್ಲ ಕೋಚ್​​ ರಾಹುಲ್​ ದ್ರಾವಿಡ್​ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದರು. ವಿಶೇಷವಾಗಿ ರೋಹಿತ್​ ಅವರ ಬ್ಯಾಟಿಂಗ್​ ಮೇಲೆ ದ್ರಾವಿಡ್​ ನಿಗಾ ವಹಿಸಿದ್ದರು. ಏಕೆಂದರೆ ಅವರು ಐಪಿಎಲ್​ನಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಹೀಗಾಗಿ ಅವರಿಗೆ ಹೆಚ್ಚಿನ ಬ್ಯಾಟಿಂಗ್​ ಸಲಹೆಯನ್ನು ದ್ರಾವಿಡ್​ ನೀಡಿದ್ದಾರೆ.

ಈಗಾಗಲೇ ಮೂರು ಹಂತದಲ್ಲಿ ಭಾರತೀಯ ಆಟಗಾರರು ಲಂಡನ್​ಗೆ ತಲುಪಿದ್ದಾರೆ. ಐಪಿಎಲ್​ ಫೈನಲ್ ಪಂದ್ಯ ಮಳೆಯಿಂದ ಒಂದು ದಿನ ವಿಳಂಬವಾದ ಕಾರಣ ಫೈನಲ್​ ಪಂದ್ಯದಲ್ಲಿ ಆಡಿದ್ದ ರಹಾನೆ, ಜಡೇಜಾ, ಗಿಲ್​, ಮೊಹಮ್ಮದ್​ ಶಮಿ ಮತ್ತು ಶ್ರೀಕರ್​ ಭರತ್​ ಅವರು ಬುಧವಾರ ಲಂಡನ್​ ತಲುಪುವ ಸಾಧ್ಯತೆ ಇದೆ. ಗುರುವಾರದಿಂದ ಈ ಆಟಗಾರರು ಅಭ್ಯಾಸದಲ್ಲಿ ತೊಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೀಗೀತೇ ಐಸಿಸಿ ಟ್ರೋಫಿ ಬರ

ಭಾರತ ತಂಡಕ್ಕೆ ಕಳೆದ ಕೆಲವು ವರ್ಷಗಳಿಂದ ಐಸಿಸಿ ಟ್ರೋಫಿ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ತಂಡ ಎಷ್ಟೇ ಬಲಿಷ್ಠವಾಗಿದ್ದರೂ. ಪ್ರಮುಖ ಪಂದ್ಯದಲ್ಲಿ ತೀರಾ ಕಳಪೆ ಪ್ರದರ್ಶನ ತೋರುವ ಮೂಲಕ ಪ್ರತಿ ಬಾರಿಯೂ ಕಪ್​ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಕಳೆದ ಬಾರಿಯೂ ಭಾರತ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಅರ್ಹತೆ ಪಡೆದಿತ್ತು. ಆದರೆ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋತು ನಿರಾಸೆ ಮೂಡಿಸಿತ್ತು. ಇದೀಗ ಈ ಬಾರಿಯಾದರೂ ಗೆದ್ದು ಐಸಿಸಿ ಟ್ರೋಫಿಯ ಬರವನ್ನು ನೀಗಿಸಬೇಕಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಈ ಪ್ರಶಸ್ತಿ ಸಮರ ಜೂನ್‌ 7 ರಿಂದ 11ರವರೆಗೆ ಲಂಡನ್​ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ WTC Final 2023: ಲಂಡನ್​ನ ಬಸ್​ನಲ್ಲೇ ಐಪಿಎಲ್​ ಫೈನಲ್​ ವೀಕ್ಷಿಸಿದ ಟೀಮ್​ ಇಂಡಿಯಾ

ವಿಶ್ವ ಟೆಸ್ಟ್​ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್ ಭರತ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯ್​ದೇವ್​ ಉನಾದ್ಕತ್, ಇಶಾನ್ ಕಿಶನ್ (ವಿಕೆಟ್​ ಕೀಪರ್​). ಸ್ಟ್ಯಾಂಡ್‌ ಬೈ ಆಟಗಾರರು: ಯಶಸ್ವಿ ಜೈಸ್ವಾಲ್​, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

Exit mobile version