Site icon Vistara News

WTC Final 2023 : ಚೆಂಡು ಬದಲಿಸಿ ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲ ಮಾಡಿಕೊಟ್ಟ ಐಸಿಸಿ!

Duke Ball

#image_title

ಲಂಡನ್​: ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ (ಡಬ್ಲ್ಯುಟಿಸಿ) ಫೈನಲ್ 2023 (WTC Final 2023) ಜೂನ್​ 7ರಂದು ಆರಂಭವಾಗಲಿದ. ಜೂನ್​ 11ರವರೆಗೆ ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ವಿಶ್ವದ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಮತ್ತು ಭಾರತ ಮುಖಾಮುಖಿಯಾಗಲಿವೆ. ಈ ಹಣಾಹಣಿಗೆ ಬಳಸುವ ಚೆಂಡಿನ ಮಾದರಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ. ಡ್ಯೂಕ್ ಕಂಪನಿ ನಿರ್ಮಿಸಿದ ಚೆಂಡನ್ನು ಈ ಪಂದ್ಯಕ್ಕೆ ಬಳಸಲಾಗುತ್ತಿದೆ. ಈ ಮೂಲಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ ಎನ್ನಲಾಗಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​​ಷಿಪ್​​ನ ಅಂತಿಮ ಕದನಕ್ಕೆ ಇಂಗ್ಲೆಂಡ್​ನ ವಾತಾವರಣಕ್ಕೆ ಬಳಸುವ ಚೆಂಡನ್ನು ಆಯ್ಕೆ ಮಾಡಿದೆ. ಇಂಗ್ಲೆಂಡ್​ನ್ಲ್ಲಿ ಟೆಸ್ಟ್ ಪಂದ್ಯಗಳಿಗೆ ಬಳಸುವ ಡ್ಯೂಕ್​ ಚೆಂಡುಗಳನ್ನು ಬಳಸಲಾಗುತ್ತಿದೆ. ಇಂಗ್ಲೆಂಡ್ ಪಿಚ್ ಹಾಗೂ ಮತ್ತು ಡ್ಯೂಕ್ ಚೆಂಡು ಸ್ವಿಂಗ್​ ಆಗುವುದಕ್ಕೆ ನೆರವು ನೀಡುತ್ತದೆ. ಹೀಗಾಗಿ ಭಾರತಕ್ಕೆ ಹೆಚ್ಚು ಸವಾಲು ಎನ್ನಲಾಗಿದೆ. ಯಾಕೆಂದರೆ ಭಾರತ ತಂಡ ತವರಿನಲ್ಲಿ ಎಸ್​ಜಿ ಕಂಪನಿ ತಯಾರಿಸುವ ಚೆಂಡಿನೊಂದಿಗೆ ಆಡುತ್ತದೆ. ಹೀಗಾಗಿ ಮೋಡ ಕವಿದ ವಾತಾವರಣ ಹಾಗೂ ಡ್ಯೂಕ್​ ಚೆಂಡು ಭಾರತಕ್ಕೆ ಮಾರಕವಾಗಲಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಆಸ್ಟ್ರೇಲಿಯಾ ತನ್ನ ತವರಿನಲ್ಲಿ ಡ್ಯೂಕ್ ಚೆಂಡನ್ನು ಬಳಸುವ ಕಾರಣ ಆ ತಂಡಕ್ಕೆ ಹೆಚ್ಚಿನ ಅನುಕೂಲಕ ಸಿಗಲಿದೆ ಎಂದು ಹೇಳಲಾಗಿದೆ.

ಈ ಕೆಳಗೆ ಡ್ಯೂಕ್, ಕೂಕಬುರಾ ಮತ್ತು ಎಸ್​ಜಿ ಚೆಂಡುಗಳ ನಡುವಿನ ವ್ಯತ್ಯಾಸವನ್ನು ವಿವರಿಸಲಾಗಿದೆ.

1) ಡ್ಯೂಕ್ ಬಾಲ್

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ನಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಡ್ಯೂಕ್ ಚೆಂಡುಗಳನ್ನು ಆಯ್ಕೆ ಮಾಡಲಾಗುತ್ತದೆ. ಬ್ರಿಟಿಷ್ ಕ್ರಿಕೆಟ್ ಬಾಲ್ಸ್ ಲಿಮಿಟೆಡ್ ತಯಾರಿಸಿದ ಇವು ಕೈಯಿಂದ ಹೊಲಿಯಲ್ಪಟ್ಟಿವೆ . ಹೀಗಾಗಿ ಉಳಿದೆರಡು ಚೆಂಡಿನ ಪ್ರಕಾರಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ. ವಿಶಿಷ್ಟವಾದ ಹೊಲಿಗೆಯು ಚೆಂಡಿನ ಗಡಸುತನಕ್ಕೆ ಕೊಡುಗೆ ನೀಡುತ್ತದೆ, ಇದು ದೀರ್ಘಕಾಲದವರೆಗೆ ಸೀಮ್ ಆಗಲ ಅನುವು ಮಾಡಿಕೊಡುತ್ತದೆ. ಇಂಗ್ಲೆಂಡ್​​ನಲ್ಲಿ ಈ ಚೆಂಡುಗಳನ್ನು ಬಳಸುವುದರ ಹಿಂದಿನ ಕಾರಣವೆಂದರೆ ಮೋಡ ಕವಿದ ಹವಾಮಾನ ಪರಿಸ್ಥಿತಿಗಳು. ಅದೇ ರೀತಿ ಸ್ವಿಂಗ್​ ಪಿಚ್​​ಗಳು. ಡ್ಯೂಕ್ ಚೆಂಡುಗಳು ವೇಗದ ಬೌಲರ್​​ಗಳಿಗೆ ಆಟದುದ್ದಕ್ಕೂ ಪರಿಣಾಮಕಾರಿಯಾಗಿರಲು ಸಹಾಯ ಮಾಡುತ್ತವೆ.‘

2) ಎಸ್​​ಜಿ ಬಾಲ್

ಸ್ಯಾನ್​ಸ್ಪರೇಲ್ ಗ್ರೀನ್​​ಲ್ಯಾಂಡ್ಸ್ (ಎಸ್​​ಜಿ 1931ರಲ್ಲಿ ಸ್ಥಾಪನೆಯಾದ ಭಾರತೀಯ ಕಂಪನಿಯಾಗಿದೆ. ಮೀರತ್​ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಎಸ್​ಜಿ ಉತ್ಪಾದಿಸುವ ಚೆಂಡುಗಳನ್ನು ಮುಖ್ಯವಾಗಿ ಭಾರತದೊಳಗಿನ ಟೆಸ್ಟ್ ಮತ್ತು ದೇಶೀಯ ಕ್ರಿಕೆಟ್​​ ಪಂದ್ಯಗಳಲ್ಲಿ ಬಳಸಲಾಗುತ್ತದೆ. ಎಸ್​​ಜಿ ಚೆಂಡುಗಳು ಕರಕುಶಲತೆ ಮತ್ತು ಬಾಳಿಕೆಗೆ ಹೆಸರುವಾಸಿಯಾಗಿದ್ದರೂ, ಇತರ ಚೆಂಡುಗಳಿಗಿಂತ ಭಿನ್ನವಾಗಿದೆ. ಅಂದರೆ ಬೇಗ ಸವೆಯುವ ಮೂಲಕ ಸ್ಪಿನ್ನರ್​​ಗಳಿಗೆ ಅನುಕೂಲಕರವಾಗಿರುತ್ತದೆ. ಒಂದು ಬಾರಿ ಚೆಂಡಿನ ಮೇಲಿನ ಆರಂಭಿಕ ಹೊಳಪು ಕಡಿಮೆಯಾದರೆ, ತಿರುವು ಪಡೆಯಲು ಹೆಚ್ಚು ಅನುಕೂಲಕವಾಗುತ್ತದೆ.

ಇದನ್ನೂ ಓದಿ : WTC Final 2023: ಓವಲ್​ ಮೈದಾನದಲ್ಲಿ ಭಾರತ, ಆಸ್ಟ್ರೇಲಿಯಾ ತಂಡಗಳ ಟೆಸ್ಟ್​ ಇತಿಹಾಸ ಹೇಗಿದೆ? ಇಲ್ಲಿದೆ ಮಾಹಿತಿ

3) ಕೂಕಬುರಾ ಬಾಲ್

ಕೂಕಬುರ್ರಾ ಸ್ಪೋರ್ಟ್ ಎಂಬ ಆಸ್ಟ್ರೇಲಿಯಾದ ಕಂಪನಿ ಈ ಚೆಂಡನ್ನು ತಯಾರಿಸುತ್ತದೆ. ಸಾಮಾನ್ಯವಾಗಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಜಿಂಬಾಬ್ವೆ ಸೇರಿದಂತೆ ಬಹುತೇಕ ಕ್ರಿಕೆಟ್ ಆಡುವ ದೇಶಗಳಲ್ಲಿ ಬಳಸಲಾಗುತ್ತದೆ. ಡ್ಯೂಕ್ ಮತ್ತು ಎಸ್ ಜಿ ಚೆಂಡುಗಳಿಗೆ ವ್ಯತಿರಿಕ್ತವಾಗಿದೆ ಕೂಕಬುರಾ. ಈ ಚೆಂಡುಗಳನ್ನು ಯಂತ್ರದಿಂದ ಹೊಲಿಯಲಾಗಿದೆ. ಒಳಗಿನ ಎರಡು ಎರಡು ಹಂತವನ್ನು ಕೈಯಿಂದ ಹೊಲಿಯಲಾಗಿದ್ದರೆ, ಹೊರಗಿನ ಎರಡು ಪದರವನ್ನು ಯಂತ್ರ ಬಳಸಿ ಹೊಲಿಯಲಾಗುತ್ತದೆ. ಇದರ ಪರಿಣಾಮವಾಗಿ ಬೌಲರ್ ಹೆಚ್ಚಿನ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಈ ಚೆಂಡುಗಳು ಡ್ಯೂಕ್ ಚೆಂಡುಗಳಂತೆ ಸ್ವಿಂಗ್ ಆಗುವುದಿಲ್ಲ. ಕೂಕಬುರ್ರಾ ಚೆಂಡುಗಳು ಹೆಚ್ಚಿನ ಬೌನ್ಸ್ ಹೊಂದಿರುವ ಪಿಚ್​​ಗಳಿಗೆ ಸೂಕ್ತವಾಗಿವೆ.

Exit mobile version