Site icon Vistara News

WTT Contender | ಡಬ್ಲ್ಯುಟಿಟಿ ಕಂಟೆಂಡರ್‌ ಟೂರ್ನಿ; ಸೆಮಿಫೈನಲ್ ಪ್ರವೇಶಿಸಿದ ​ಮಣಿಕಾ ಬಾತ್ರಾ

Manika Batra

ದೋಹಾ: ಭಾರತದ ಸ್ಟಾರ್​ ಟೇಬಲ್​ ಟೆನಿಸ್​ ಆಟಗಾರ್ತಿ ಮಣಿಕಾ ಬಾತ್ರಾ ಡಬ್ಲ್ಯುಟಿಟಿ ಕಂಟೆಂಡರ್‌(WTT Contender) ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್ ತಲು‍ಪಿದ್ದಾರೆ. ಈ ಮೂಲಕ ಪದಕ ಭರವಸೆ ಮೂಡಿಸಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಮಣಿಕಾ ಅವರು ಕೊರಿಯಾದ ಹೊಜೊ ವಿರುದ್ಧ 11-6, 11-9, 4-11, 5-11, 11-7 ಅಂಕಗಳಿಂದ ಗೆದ್ದು ಸೆಮಿಫೈನಲ್​ಗೆ ಲಗ್ಗೆ ಇಟ್ಟರು. ಅವರು ಮುಂದಿನ ಪಂದ್ಯದಲ್ಲಿ ಚೀನಾದ ಜಾಂಗ್‌ ರುಯಿ ಅವರನ್ನು ಸವಾಲು ಎದುರಿಸಲಿದ್ದಾರೆ.

ಮೊದಲ ಎರಡು ಗೇಮ್‌ಗಳನ್ನು ಗೆದ್ದ ಮಣಿಕಾ ಬಳಿಕದ ಎರಡು ಗೇಮ್‌ಗಳಲ್ಲಿ ಕೆಲ ತಪ್ಪುಗಳಿಂದ ಹಿನ್ನಡೆ ಅನುಭವಿಸಿದರು. ಆದರೆ ಮುಂದಿನ ಗೇಮ್​ನಲ್ಲಿ ಎಚ್ಚೆತ್ತು ಕೊಂಡು ಪಂದ್ಯದಲ್ಲಿ ಹಿಡಿತ ಸಾಧಿಸಿದರು.
ಪಂದ್ಯದ ಬಳಿಕ ಮಾತನಾಡಿದ ಮಣಿಕಾ ಈ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಾಗಿದೆ. ಮುಂದಿನ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ | WTTC Finals | ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಶಿಪ್​; ಶರತ್‌, ಶ್ರೀಜಾ, ಮಣಿಕಾಗೆ ಅರ್ಹತೆ

Exit mobile version