Site icon Vistara News

WTTC Finals | ವಿಶ್ವ ಟೇಬಲ್ ಟೆನಿಸ್‌ ಚಾಂಪಿಯನ್‌ಶಿಪ್​; ಶರತ್‌, ಶ್ರೀಜಾ, ಮಣಿಕಾಗೆ ಅರ್ಹತೆ

sharath kamal

ಲುಸೈಲ್‌ (ಕತಾರ್‌): ಭಾರತದ ಸ್ಟಾರ್ ​ಟೇಬಲ್‌ ಟೆನಿಸ್‌ ಆಟಗಾರರಾದ ಅಚಂತಾ ಶರತ್‌ ಕಮಲ್‌ ಮತ್ತು ಮಣಿಕಾ ಬಾತ್ರಾ ಸೇರಿ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಮಿಕ್ಸೆಡ್‌ ಡಬಲ್ಸ್‌ ಚಿನ್ನ ವಿಜೇತೆ ಶ್ರೀಜಾ ಅಕುಲಾ ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಡರ್ಬಾನ್‌ ವಿಶ್ವ ಟೇಬಲ್‌(WTTC Finals) ಟೆನಿಸ್‌ ಚಾಂಪಿಯನ್‌ಶಿಪ್‌ (ಡಬ್ಲ್ಯುಟಿಟಿಸಿ) ಫೈನಲ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದಾರೆ.

ಕತಾರ್‌ನಲ್ಲಿ ಸಾಗುತ್ತಿರುವ ಏಷ್ಯನ್‌ ಡಬ್ಲ್ಯುಟಿಟಿಸಿ ಕಾಂಟಿನೆಂಟಲ್‌ ಹಂತದ ಟೂರ್ನಿಯಲ್ಲಿ ಈ ಮೂವರು ಆಟಗಾರರು 16ರ ಸುತ್ತಿನ ಹೋರಾಟದಲ್ಲಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿದರು.

ಅಚಂತಾ ಶರತ್‌ ಕಮಲ್‌ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಇದೀಗ ಡಬ್ಲ್ಯುಟಿಟಿಸಿ ಫೈನಲ್‌ನಲ್ಲಿಯೂ ಇವರ ಮೇಲೆ ಪದಕ ಭರವಸೆ ಇರಿಸಲಾಗಿದೆ.

ಶ್ರೀಜಾ ವಿಶ್ವದ 21ನೇ ರ್‍ಯಾಂಕಿನ ಚೈನೀಸ್‌ ತೈಪೆಯ ಚೆನ್‌ ಅವರನ್ನು 4-3 ಅಂತರದಿಂದ ಉರುಳಿಸಿದರೆ ಶರತ್‌ ಕಮಾಲ್‌ ಇರಾನಿನ ಅಹ್ಮದಿಯನ್‌ ಅಮಿನ್‌ ಅವರನ್ನು ಸುಲಭವಾಗಿ ಮಣಿಸಿ ಅರ್ಹತೆ ಗಳಿಸಿದರು.

ಇದನ್ನೂ ಓದಿ | Asian Cup Table Tennis | ಐತಿಹಾಸಿಕ ಪದಕ ಗೆದ್ದ ಮಣಿಕಾ ಬಾತ್ರಾ; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ

Exit mobile version