Site icon Vistara News

Virat kohli | ಕೊಹ್ಲಿಯ ಆಟಕ್ಕೆ ಮನಸೋತ ಡಬ್ಲ್ಯುಡಬ್ಲ್ಯುಇ ಚಾಂಪಿಯನ್​ ಡ್ರೂ ಮ್ಯಾಕ್​ಇಂಟೈರ್

drew

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (Virat kohli ) ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಹೀಗಾಗಿ ಅತಿ ಹೆಚ್ಚು ಫ್ಯಾನ್ಸ್​ಗಳನ್ನು ಹೊಂದಿರುವ ಅಥ್ಲೀಟ್​ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರಲ್ಲಿ ಕ್ರೀಡಾಪಟುಗಳು ಕೂಡ ಸೇರಿಕೊಂಡಿದ್ದು, ಸ್ಕಾಟ್ಲೆಂಡ್​ನ ಡಬ್ಲ್ಯುಡಬ್ಲ್ಯುಇ ಚಾಂಪಿಯನ್​ ಡ್ರೂ ಮ್ಯಾಕ್​ಇಂಟೈರ್ ಕೂಡ ಒಬ್ಬರು. ಶ್ರೀಲಂಕಾ ತಂಡದ ವಿರುದ್ಧ ವಿರಾಟ್​ ಕೊಹ್ಲಿ ಬಾರಿಸುವ ಎರಡು ಶತಕಗಳ ಆಟವನ್ನು ನೋಡಿ ಮೆಚ್ಚಿದ ಅವರೀಗ 100 ಶತಕಗಳ ವಿಶ್ವ ದಾಖಲೆ ಖಚಿತ ಎಂದು ಹೇಳಿದ್ದಾರೆ.

ಮೈಕ್ರೊ ಬ್ಲಾಗಿಂಗ್​ ತಾಣ ಟ್ವಿಟರ್​ನಲ್ಲಿ ಅವರು ವಿರಾಟ್​ ಕೊಹ್ಲಿಯ ಚಿತ್ರ ಸಮೇತ ಪೋಸ್ಟ್​ ಮಾಡಿದ್ದಾರೆ. ವಿರಾಟ್​ ಕೊಹ್ಲಿ ಶ್ರೀಲಂಕಾ ವಿರುದ್ಧ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದ್ದಾರೆ. ವಿರಾಟ್​ ಕೊಹ್ಲಿ ಒಬ್ಬ ವಿಶೇಷ ವ್ಯಕ್ತಿತ್ವದ ಆಟಗಾರ. ಖಂಡಿತವಾಗಿಯೂ ಅವರು ಸಚಿನ್​ ತೆಂಡೂಲ್ಕರ್ ಅವರ ದಾಖಲೆ ಮುರಿಯಲಿದ್ದಾರೆ ಎಂಬುದಾಗಿ ಬರೆದುಕೊಂಡಿದ್ದಾರೆ.

ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಅಪ್ಪಟ ಕ್ರಿಕೆಟ್ ಪ್ರೇಮಿ. ಈ ಹಿಂದೆಯೂ ಹಲವು ಬಾರಿ ಅವರು ಟೀಮ್​ ಇಂಡಿಯಾದ ಆಟಗಾರರನ್ನು ಹೊಗಳಿ ಟ್ವೀಟ್​ ಮಾಡಿದ್ದರು. ಇತ್ತೀಚೆಗೆ ಅವರು ಸೂರ್ಯಕುಮಾರ್ ಯಾದವ್​ ಟಿ20 ಮಾದರಿಯಲ್ಲಿ ಮೂರನೇ ಶತಕ ಬಾರಿಸಿದ್ದ ವೇಳೆ ಹೊಗಳಿ ಪೋಸ್ಟ್​ ಮಾಡಿದ್ದರು. ಸೂರ್ಯಕುಮಾರ್ ಅವರನ್ನು ಸಿಕ್ಸರ್ ಬಾರಿಸುವ ಮಷಿನ್ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ | Virat Kohli | ಕಿವೀಸ್​​ ವಿರುದ್ಧದ ಸರಣಿಯಲ್ಲೂ ವಿರಾಟ್​ ಕೊಹ್ಲಿಗಿದೆ ಹಲವು ದಾಖಲೆ ನಿರ್ಮಿಸುವ ಅವಕಾಶ!

Exit mobile version