Site icon Vistara News

ICC Player Of The Month: ಐಸಿಸಿ ತಿಂಗಳ ಆಟಗಾರರ ಯಾದಿಯಲ್ಲಿ ಜೈಸ್ವಾಲ್​,ವಿಲಿಯಮ್ಸನ್​, ನಿಸ್ಸಾಂಕ

Yashasvi Jaiswal, Kane Williamson,Pathum Nissanka

ದುಬೈ: ಫೆಬ್ರವರಿ ತಿಂಗಳ ಐಸಿಸಿ ಪುರುಷರ ತಿಂಗಳ ಆಟಗಾರ(ICC Player Of The Month) ಪ್ರಶಸ್ತಿಗೆ ಭಾರತದ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್(Yashasvi Jaiswal)​ ಅವರು ನಿರ್ದೇಶನಗೊಂಡಿದ್ದಾರೆ. ಇವರ ಜತೆ ನ್ಯೂಜಿಲ್ಯಾಂಡ್​ನ ಕೇನ್​ ವಿಲಿಯಮ್ಸನ್(Kane Williamson)​ ಮತ್ತು ಶ್ರೀಲಂಕಾದ ಪಾಥುಮ್ ನಿಸ್ಸಾಂಕ(Pathum Nissanka) ಕೂಡ ರೇಸ್​ನಲ್ಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಯುಎಇ ಆಟಗಾರ್ತಿಯರಾದ ಕವಿಶಾ ಎಗೊಡಗೆ, ಇಶಾ ಓಜಾ ಮತ್ತು ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಅವರನ್ನು ಫೆಬ್ರವರಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.

ಜೈಸ್ವಾಲ್ ಅವರು ಇದೇ ಮೊದಲ ಬಾರಿಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು. ಪ್ರಸಕ್ತ ಸಾಗುತ್ತಿರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಜೈಸ್ವಾಲ್​ 2 ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಒಟ್ಟಾರೆಯಾಗಿ ಅವರು ಆಡಿರುವ ನಾಲ್ಕು ಟೆಸ್ಟ್​ನಿಂದ 655 ರನ್ ಗಳಿಸಿದ್ದಾರೆ. ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಅಂತಿಮ ಟೆಸ್ಟ್​ನಲ್ಲಿಯೂ ಜೈಸ್ವಾಲ್ ಉತ್ತಮ ರನ್​ ಕಲೆಹಾಕುವ ನಿರೀಕ್ಷೆಯಲ್ಲಿದ್ದಾರೆ.

ಕೊಹ್ಲಿ, ಗವಾಸ್ಕರ್​ ದಾಖಲೆ ಮೇಲೆ ಕಣ್ಣಿಟ್ಟ ಜೈಸ್ವಾಲ್​


ಅಂತಿಮ ಟೆಸ್ಟ್​ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್​ ​ಅವರು ಹಲವು ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಇದರಲ್ಲಿ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ಮತ್ತು ದಿಗ್ಗಜ ಆಟಗಾರ ಸುನೀಲ್​ ಗವಾಸ್ಕರ್(Sunil Gavaskar)​ ದಾಖಲೆಯೂ ಕೂಡ ಒಳಗೊಂಡಿದೆ. ಭಾರತದ ಭವಿಷ್ಯದ ಕ್ರಿಕೆಟ್​ ತಾರೆ ಎಂದು ಗುರುತಿಸಲ್ಪಟ್ಟಿರುವ ಯಶಸ್ವಿ 120 ರನ್ ಬಾರಿಸಿದರೆ ಗವಾಸ್ಕರ್ ಅವರ ಸಾರ್ವಕಾಲಿಕ ದಾಖಲೆಯೊಂದು ಪತನಗೊಳ್ಳಲಿದೆ. ಟೆಸ್ಟ್​ ಸರಣಿಯೊಂದರಲ್ಲಿ ಅತ್ಯಧಿಕ ರನ್​ ಗಳಿಸಿದ ಭಾರತೀಯ ದಾಖಲೆ ಸುನೀಲ್​ ಗವಾಸ್ಕರ್​ ಹೆಸರಿನಲ್ಲಿದೆ. ಗವಾಸ್ಕರ್ ಅವರು 1970ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ 774 ರನ್​ ಬಾರಿಸಿದ್ದರು. ಇದು ಸದ್ಯ ದಾಖಲೆಯಾಗಿಯೇ ಉಳಿದಿದೆ. ಈ ದಾಖಲೆಯನ್ನು ಮುರಿಯಲು ಜೈಸ್ವಾಲ್​ಗೆ ಸುವರ್ಣಾವಕಾಶವಿದೆ.​

ಇದನ್ನೂ ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್​ ಆಟಗಾರ

ಗವಾಸ್ಕರ್​ ಮಾತ್ರವಲ್ಲದೆ ವಿರಾಟ್​ ಕೊಹ್ಲಿಯ ದಾಖಲೆಯೂ ಕೂಡ ಪತನಗೊಳ್ಳಲಿದೆ. ವಿರಾಟ್​ ಕೊಹ್ಲಿ 2014ರಲ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ 692 ರನ್​ ಬಾರಿಸಿದ್ದರು. ಟೆಸ್ಟ್​ ಸರಣಿಯೊಂದರಲ್ಲಿ ಅತ್ಯಧಿಕ ರನ್​ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಅವರಿಗೆ 2ನೇ ಸ್ಥಾನ. ಜೈಸ್ವಾಲ್​ 38 ರನ್​ ಬಾರಿಸಿದರೆ ಕೊಹ್ಲಿಯ ದಾಖಲೆ ಪತನಗೊಳ್ಳಲಿದೆ. 

ಕೇನ್​ ವಿಲಿಯಮ್ಸನ್​ ಕೂಡ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್​ನಲ್ಲಿ ಒಂದೇ ಟೆಸ್ಟ್​ನ 2 ಇನಿಂಗ್ಸ್​ನಲ್ಲಿ ಶತಕ ಬಾರಿಸಿದ್ದರು. ಶ್ರೀಲಂಕಾದ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕ ಅವರು ಕಳೆದ ಅಫಘಾನಿಸ್ತಾನ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ ದ್ವಿಶತಕ ಬಾರಿಸಿದ್ದರು. 139 ಎಸೆತಗಳಲ್ಲಿ ಅಜೇಯ 210 ಹೊಡೆದು ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Exit mobile version