ಮುಂಬಯಿ: ಭಾರತ ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal) ಒಂದು ಕಾಲದಲ್ಲಿ ಮನೆ ಇಲ್ಲದ ಕಾರಣಕ್ಕೆ ಮೈದಾನದಲ್ಲೇ ಮಲಗುತ್ತಿದ್ದರು. ಇಂದು ದಿಗ್ಗಜ ಆಟಗಾರರ ಜತೆ ಮೈದನಾದಲ್ಲಿ ಆಡುತ್ತಿದ್ದಾರೆ. ತನ್ನ ಬ್ಯಾಟಿಂಗ್ ಬಲದ ಮೂಲಕ ಹಿರಿಯ ಆಟಗಾರರನ್ನೇ ಮೈದಾನ ತುಂಬ ಓಡಾಡುವಂತೆ ಮಾಡಿ ಎದುರಾಳಿಗಳ ನಿದ್ರೆ ಕೆಡಿಸುತ್ತಿದ್ದಾರೆ. ಈಗಾಗಲೇ ಹಲವು ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದಿದ್ದಾರೆ. ಕಷ್ಟದ ದಿನಗಳನ್ನು ಕಂಡ ಜೈಸ್ವಾಲ್ ಇದೀಗ ಮುಂಬೈನಲ್ಲಿ 5.38 ಕೋಟಿ ರೂ. ಬೆಲೆಯ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದಾರೆ.
ಜೈಸ್ವಾಲ್ ಅವರು ಮುಂಬೈ ಬಾಂದ್ರಾ ಪೂರ್ವದಲ್ಲಿ 1,110 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ. ಈ ಮನೆಯನ್ನು ಯುರೋಪಿಯನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಜನವರಿ 7ರಂದು ಈ ಅಪಾರ್ಟ್ಮೆಂಟನ್ನು ಖರೀದಿ ಮಾಡಿದ್ದರು.
Stepping into my new minimalistic haven, where every detail reflects my unique personality!Thanks to @NesterraHome, the curtains and upholstery here are an extension of my style, making this house truly mine. #nesterra #nesterrahomedecor #nesterrafeaturingyou #youniquelynesterra pic.twitter.com/AhCMBQEP4F
— Yashasvi Jaiswal (@ybj_19) September 10, 2023
ಮನೆಯ ಫೋಟೋಗಳನ್ನು ಖುದ್ದು ಯಶಸ್ವಿ ಅವರೇ ಹಂಚಿಕೊಂಡಿದ್ದಾರೆ. ಇಂಟೀರಿಯರ್ ಬಹಳ ಸುಂದರವಾಗಿದ್ದು ಐಷಾರಾಮಿ ಬದುಕಿಗೆ ಬೇಕಾದ ಎಲ್ಲಾ ಸೌಲಭ್ಯಗಳೂ ಇಲ್ಲಿವೆ. ಕಷ್ಟದಲ್ಲಿ ಬೆಳೆದ ಜೈಸ್ವಾಲ್ ಇದೀಗ ತನ್ನ ತಂದೆ ಮತ್ತು ತಾಯಿಯನ್ನು ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ಜೀವಿಸುವಂತೆ ಮಾಡಿದ್ದಾರೆ.
ಪಾನಿಪುರಿ ಮಾರುತ್ತಿದ್ದ ಜೈಸ್ವಾಲ್
ಊಟಕ್ಕೆ ದುಡ್ಡಿಲ್ಲದೆ, ಮಲಗಲು ಜಾಗವಿಲ್ಲದೇ ಅನಾಥವಾಗಿದ್ದ ಜೈಸ್ವಾಲ್‌ಗೆ, ಮುಸ್ಲಿಂ ಯುನೈಟೆಡ್ ಕ್ಲಬ್ ಪರ ಆಡಲು ಅವಕಾಶ ದೊರೆಯಿತು. ಅಲ್ಲೇ ಮಲಗಲು ಜಾಗವೂ ಸಿಕ್ಕಿತು. ಆದರೆ, ಕ್ರಿಕೆಟ್ ಕಿಟ್, ಊಟದ ವ್ಯವಸ್ಥೆ ಈತನೇ ನೋಡಿಕೊಳ್ಳಬೇಕಿತ್ತು. ಹಾಗಾಗಿ ಬಿಡುವಿನ ವೇಳೆ ಪಾನಿಪುರಿ ಮಾರಾಟ ಮಾಡಲು ಶುರುಮಾಡಿದ್ದ. ಬಡಕುಟುಂಬದಿಂದ ಬಂದು ಇದೇ ರೀತಿಯ ಕ್ಷಣಗಳನ್ನು ಎದುರಿಸಿದ್ದ ಕೋಚ್ ಜ್ವಾಲಾ ಸಿಂಗ್, ಯುವಕನ ಪ್ರತಿಭೆಯನ್ನು ಗುರುತಿಸಿ, ಪ್ರತಿದಿನ ಬೆಳಗ್ಗೆ, ಸಂಜೆ ಕೋಚಿಂಗ್ ನೀಡಿ ಹಾಗೂ ಆತನಿಗೆ ಅಗತ್ಯವಿದ್ದ ಕಿಟ್ ಕೊಡಿಸಿ, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್‌ಗೆ 12 ನೇ ವರ್ಷ ವಯಸ್ಸಿದ್ದಾಗಲೇ ಜೈಸ್ವಾಲ್ ಕುಟುಂಬ ಉತ್ತರ ಪ್ರದೇಶದ ಬದೋಹಿಯಿಂದ ಮುಂಬೈಗೆ ಶಿಫ್ಟ್ ಆಗಿತ್ತು.
ಇದನ್ನೂ ಓದಿ Yashasvi Jaiswal : ಒಟ್ಟು ರನ್ಗಳ ಪಟ್ಟಿಯಲ್ಲಿ ಆಸೀಸ್ ಆಟಗಾರನನ್ನು ಹಿಂದಿಕ್ಕಿದ ಯಶಸ್ವಿ ಜೈಸ್ವಾಲ್
ಸದ್ಯ ಇಂಗ್ಲೆಂಡ್ ವಿರುದ್ಧ ಸಾಗುತ್ತಿರುವ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ ಸತತ 2 ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಬ್ಯಾಟಿಂಗ್ ಶ್ರೇಯಾಂಕದಲ್ಲಿಯೂ ಜೀವನಶ್ರೇಷ್ಠ ಪ್ರಗತಿ ಸಾಧಿಸಿದ್ದಾರೆ. 14 ಸ್ಥಾನ ಮೇಲೇರಿ 15ನೇ ಸ್ಥಾನಕ್ಕೆ ತಲುಪಿದ್ದಾರೆ.
Top 5 Highest Ranked Indian Batter in ICC Test Batting rankings:
— CricketMAN2 (@ImTanujSingh) February 21, 2024
1. Virat Kohli (7).
2. Rohit Sharma (12).
3. Rishabh Pant (14).
4. Yashasvi Jaiswal (15).
5. Ravindra Jadeja (34).
– Yashasvi Jaiswal moves to No.15 position in the rankings…!!!! ⭐ pic.twitter.com/Zkjq0MU4sE