ನವ ದೆಹಲಿ : ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಹಲ್ (Yuzvendra Chahal) ಅವರ ಪತ್ನಿ ಧನಶ್ರೀ ಅವರು ಕಾಲು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪತ್ನಿ ಆಸ್ಪತ್ರೆ ಸೇರಿರುವ ಹೊರತಾಗಿಯೂ, ಯಜ್ವೇಂದ್ರ ಚಹಲ್ ಅವರಿಗೆ ಜತೆಗಿರಲು ಸಾಧ್ಯವಾಗಿಲ್ಲ. ಅವರು ಏಷ್ಯಾ ಕಪ್‌ಗಾಗಿ ಭಾರತ ತಂಡದ ಜತೆ ದುಬೈನಲ್ಲಿದ್ದಾರೆ. ಹೀಗಾಗಿ ದುಬೈನಿಂದಲೇ ಶುಭಾಶಯ ತಿಳಿಸಿದ್ದಾರೆ.
ಧನಶ್ರೀ ವರ್ಮ ಅವರು ಈ ಕೊರಿಯೊಗ್ರಾಫರ್. ಅವರು ಈ ಹಿಂದೊಮ್ಮೆ ಡಾನ್ಸ್ ಮಾಡುವ ವೇಳೆ ಮೊಣಕಾಲಿನ ಅಸ್ಥಿ ರಜ್ಜಿನ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹಲವು ದಿನಗಳ ಕಾಲ ಚಿಕಿತ್ಸೆ ಪಡೆದ ಹೊರತಾಗಿಯೂ ಅವರು ಸಂಪೂರ್ಣ ಗುಣಮುಖರಾಗಿಲ್ಲ. ಹೀಗಾಗಿ ಅವರು ಅನಿವಾರ್ಯವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ತಮಗೆ ಮಾನಸಿಕವಾಗಿ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಪತ್ನಿಯ ಇನ್‌ಸ್ಟಾ ಪೋಸ್ಟ್‌ಗೆ ಯಜ್ವೇಂದ್ರ ಪ್ರತಿಕ್ರಿಯಿಸಿದ್ದು, ಪ್ರೀತಿ, ತೋಳ್ಬಲ ಹಾಗೂ ಗುರಿಯ ಚಿಹ್ನೆಯನ್ನು ಹಾಕಿಕೊಂಡಿದ್ದಾರೆ. ಭಾರತದ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಅಶ್ವಿನ್ ಪತ್ನಿ ಪ್ರೀತಿ ನಾರಾಯಣ್, ಯಶಸ್ವಿ ಜೈಸ್ವಾಲ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ | Yuzvendra Chahal | ನಮ್ಮ ದಾಂಪತ್ಯ ಜೀವನದಲ್ಲಿ ಒಡಕು ಮೂಡಿಲ್ಲ, ವದಂತಿ ಹಬ್ಬಿಸಬೇಡಿ ಎಂದ ಚಹಲ್