Site icon Vistara News

IPL 2024: ಪ್ರತಿ ಸೀಸನ್​ನ ಐಪಿಎಲ್​ನಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರರು

ಬೆಂಗಳೂರು: ಒನ್ನೊಂದು ವಾರ ಕಳೆದರೆ ದೇಶಾದ್ಯಂತ ಐಪಿಎಲ್(IPL 2024)​ ಕ್ರಿಕೆಟ್​ ಕಾವು ಶುರುವಾಗಲಿದೆ. ಕಳೆದ 16 ಆವೃತ್ತಿಯ ಐಪಿಎಲ್​ ಇತಿಹಾಸದಲ್ಲಿ ಹಲವು ದಾಖಲೆಗಳು ನಿರ್ಮಾಣಗೊಂಡಿದೆ. ಈ ಪೈಕಿ ಇದುವರೆಗಿನ ಎಲ್ಲ ಆವೃತ್ತಿಯಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಆಟಗಾರರು ಯಾರು?, ಅವರು ಪಡೆದ ಮೊತ್ತವೆಷ್ಟು? ಎನ್ನುವ ಸಂಪೂರ್ಣ ಮಾಹಿತಿ ಇಂತಿದೆ.

ಎಂ.ಎಸ್ ಧೋನಿ(2008)


ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೊಚ್ಚಲ ಐಪಿಎಲ್​ ಬಿಡ್ಡಿಂಗ್​ನಲ್ಲಿ ಅತೀ ಹೆಚ್ಚು ಹಣ ಪಡೆದ ಆಟಗಾರ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅವರನ್ನು 9.50 ಕೋಟಿ ರೂ. ಗೆ ಖರೀದಿ ಮಾಡಿತ್ತು. ಈಗಲೂ ಕೂಡ ಅವರು ಚೆನ್ನೈ ಪರವೇ ಆಡುತ್ತಿದ್ದಾರೆ.


ಆ್ಯಂಡ್ರ್ಯೂ ಪ್ಲಿಂಟಾಫ್ ಮತ್ತು ಕೆವಿನ್ ಪೀಟರ್ಸನ್(2009)


2009ರಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಇಂಗ್ಲೆಂಡ್​ ತಂಡದ ಆಟಗಾರರಾಗಿದ್ದ ಆ್ಯಂಡ್ರ್ಯೂ ಪ್ಲಿಂಟಾಫ್ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​, ಕೆವಿನ್ ಪೀಟರ್ಸನ್ ಅವರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತಲಾ 9.8 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.


ಶೇನ್ ಬಾಂಡ್ ಮತ್ತು ಕೈರನ್ ಪೊಲಾರ್ಡ್(2010)


ಐಪಿಎಲ್​ ಆವೃತ್ತಿಯಲ್ಲಿ ಅತಿ ಕಡಿಮೆ ಬಿಡ್ಡಿಂಗ್​ ನಡೆದದ್ದು ಮೂರನೇ ಆವೃತ್ತಿಯಲ್ಲಿ. ವೆಸ್ಟ್​ ಇಂಡೀಸ್​ನ ಕೈರನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್​ 4.8 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಶೇನ್ ಬಾಂಡ್ ಅವರನ್ನು ಕೂಡ 4.8 ಕೋಟಿ ರೂ. ನೀಡಿ ಕೆಕೆಆರ್ ತನ್ನ ತೆಕ್ಕೆಗೆ ಹಾಕಿತ್ತು.


ಗೌತಮ್ ಗಂಭೀರ್(2011)


2011ರಲ್ಲಿ ಕೆಕೆಆರ್ ತಂಡವು ಟೀಮ್​ ಇಂಡಿಯಾದ ಎಡಗೈ ಬ್ಯಾಟರ್​ ಆಗಿದ್ದ ಗೌತಮ್ ಗಂಭೀರ್ ಅವರನ್ನು 14.90 ಕೋಟಿ ರೂ. ನೀಡಿ ಖರೀದಿಸಿತ್ತು. ಐಪಿಎಲ್​ ಇತಿಹಾಸದಲ್ಲಿ 10 ಕೋಟಿ ಗಡಿ ದಾಟಿದ ಮೊದಲ ಆಟಗಾರ ಎಂಬ ಹಿರಿಗೆ ಪಾತ್ರರಾದರು.


ರವೀಂದ್ರ ಜಡೇಜಾ(2012)


ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿದ್ದ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಟ್ರೇಡಿಂಗ್​ ಮೂಲಕ 12.8 ಕೋಟಿ ರೂ. ನೀಡಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಖರೀದಿ ಮಾಡಿತ್ತು. ಸದ್ಯ ಜಡೇಜಾ ಚೆನ್ನೈ ಪರವೇ ಆಡುತ್ತಿದ್ದಾರೆ. ಕಳೆದ ಆವೃತ್ತಿಯ ಫೈನಲ್​ನಲ್ಲಿ ಅಂತಿಮ 2 ಎಸೆತಗಳಲ್ಲಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು.


ಗ್ಲೆನ್ ಮ್ಯಾಕ್ಸವೆಲ್(2013)


ಆಸ್ಟ್ರೇಲಿಯಾದ ಹೊಡಿಬಡಿ ಆಟಗಾರ, ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಅವರು 2013ರ ಆವೃತ್ತಿಯಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರ. ಮ್ಯಾಕ್ಸ್​ವೆಲ್​ ಅವರನ್ನು ಮುಂಬೈ ಇಂಡಿಯನ್ಸ್​ 6.3 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಪ್ರಸ್ತುತ ಮ್ಯಾಕ್ಸ್​ವೆಲ್​ ಆರ್​ಸಿಬಿ ಪರ ಆಡುತ್ತಿದ್ದಾರೆ.


ಯುವರಾಜ್​ ಸಿಂಗ್​​(2014-2015)


2014ರ ಹರಾಜಿನಲ್ಲಿ ಯುವರಾಜ್ ಸಿಂಗ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬರೋಬ್ಬರಿ 14 ಕೋಟಿ ರೂ ನೀಡಿ ಖರೀದಿಸಿತ್ತು. ಆದರೆ ಅವರು ಈ ಆವೃತ್ತಿಯಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಆದರೂ ಕೂಡ ಅವರ ಖ್ಯಾತಿ ಮಾತ್ರ ಕಮ್ಮಿಯಾಗಿರಲಿಲ್ಲ. ಮರು ವರ್ಷ 2015ರಲ್ಲಿ ನಡೆದ ಹರಾಜಿನಲ್ಲಿಯೂ ಅತ್ಯಧಿಕ ಮೊತ್ತಕ್ಕೆ ಸೇಲ್​ ಆದರು. ಡೆಲ್ಲಿ ಡೇರ್ ಡೆವಿಲ್ಸ್ ತಂಡವು 16 ಕೋಟಿ ರೂ ನೀಡಿ ಖರೀದಿಸಿತ್ತು.

ಇದನ್ನೂ ಓದಿ IPL 2024: ಸನ್​ರೈಸರ್ಸ್ ತಂಡಕ್ಕೆ ಪ್ಯಾಟ್​ ಕಮಿನ್ಸ್ ನೂತನ ನಾಯಕ


ಶೇನ್​ ವಾಟ್ಸನ್​(2016)


ಚೊಚ್ಚಲ ಐಪಿಎಲ್​ ಕಪ್​ ಗೆದ್ದ ರಾಜಸ್ಥಾನ್​ ರಾಯಲ್ಸ್​ ತಂಡದ ಆಟಗಾರನಾಗಿದ್ದ ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ಅವರನ್ನು 9.50 ಕೋಟಿ ರೂ. ಗೆ ಖರೀದಿಸಿತ್ತು. ಆದರೆ ಅವರು ಪಡೆದ ಮೊತ್ತಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.


ಬೆನ್​ ಸ್ಟೋಕ್ಸ್​ (2017-2018)


ಇಂಗ್ಲೆಂಡ್​ ತಂಡದ ಸ್ಟಾರ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ 2017ರ ಸಾಲಿನ ಐಪಿಎಲ್​ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ. ಅವರನ್ನು ರೈಸಿಂಗ್​ ಪುಣೆ ಸೂಪರ್​ಜೈಂಟ್ಸ್​ ತಂಡ 14.5 ಕೋಟಿ ರೂ. ನೀಡಿ ಖರೀದಿತ್ತು. ಬೆಟ್ಟಿಂಗ್​ ಆರೋಪದಲ್ಲಿ ಚೆನ್ನೈ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡ 2 ವರ್ಷ ಬ್ಯಾನ್​ ಆದಾಗ ಕಾಣಿಸಿಕೊಂಡ ತಂದ ಇದಾಗಿತ್ತು. ಮರು ವರ್ಷ ನಡೆದ ಹರಾಜಿನಲ್ಲಿಯೂ ಬೆನ್​ ಸ್ಟೋಕ್ಸ್​ ಮತ್ತೆ ದುಬಾರಿ ಬೆಲೆ ಪಡೆದರು. ರಾಜಸ್ಥಾನ್​ ರಾಯಲ್ಸ್​ ತಂಡ 12.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.


ಇದನ್ನೂ ಓದಿ IPL 2024 : ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್​​ಳು

ಜಯದೇವ್ ಉನಾದ್ಕತ್ – ವರುಣ್ ಚಕ್ರವರ್ತಿ(2019)


ಎಡಗೈ ವೇಗಿ ಜಯದೇವ್ ಉನಾದ್ಕತ್ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ 2019ರ ಆವೃತ್ತಿಯ ಐಪಿಎಲ್​ನಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರರು. ಉನಾದ್ಕತ್ ಅವರನ್ನು ರಾಜಸ್ಥಾನ ರಾಯಲ್ಸ್ 8.40 ಕೋಟಿ ರೂ, ಮಾಡಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ವರುಣ್ ಚಕ್ರವರ್ತಿ ಅವರಿಗೂ 8.40 ಕೋಟಿ ರೂ. ನೀಡಿತ್ತು.


ಪ್ಯಾಟ್​ ಕಮಿನ್ಸ್​ (2020)


ಆಸ್ಟ್ರೇಲಿಯಾದ ವೇಗಿ ಪ್ಯಾಟ್​ ಕಮಿನ್ಸ್​ ಅವರನ್ನು ಕೆಕೆಆರ್​ ತಂಡ 2020ರಲ್ಲಿ 15.5 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಈ ಬಾರಿಯ ಹರಾಜಿನಲ್ಲಿಯೂ ಅವರು ಅತಿ ಹೆಚ್ಚು ಹಣ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಬಾರಿ ಅವರನ್ನು ಸನ್​ರೈಸರ್ಸ್​ ಹೈದರಾಬಾದ್​ ತಂಡ 20.5 ಕೋಟಿ ಪಡೆದಿದ್ದಾರೆ.


ಕ್ರಿಸ್​ ಮಾರಿಸ್​ (2021)


ದಕ್ಷಿಣ ಆಫ್ರಿಕಾದ ವೇಗದ ಬೌಲರ್​ ಕ್ರಿಸ್​ ಮಾರಿಸ್​ ಅವರು 16.25 ಕೋಟಿ ಪಡೆದು ರಾಜಸ್ಥಾನ್​ ತಂಡದ ಪಾಲಾಗಿದ್ದರು. ಆದರೆ ಅವರು ಈ ಆವೃತ್ತಿಯಲ್ಲಿ ಅತಿ ಕಳಪೆ ಮಟ್ಟದ ಪ್ರದರ್ಶನ ತೋರಿದ್ದರು. ಸದ್ಯ ಅವರು ಎಲ್ಲ ಮಾದರಿಯ ಕ್ರಿಕೆಟ್​ನಿಂದಲೂ ನಿವೃತ್ತಿಯಾಗಿದ್ದಾರೆ.


ಇಶಾನ್​ ಕಿಶನ್​(2022)


ಟೀಮ್​ ಇಂಡಿಯಾದ ಯುವ ಬ್ಯಾಟರ್​ ಇಶಾನ್​ ಕಿಶನ್​ ಅವರು 2022ರಲ್ಲಿ ನಡೆದ ಐಪಿಎಲ್​ ಹರಾಜಿನಲ್ಲಿ ಅತ್ತಿ ಹೆಚ್ಚು ಹಣ ಪಡೆದ ಆಟಗಾರ. ಮುಂಬೈ ಇಂಡಿಯನ್ಸ್​ 15.25 ಕೋಟಿ ರೂ. ನೀಡಿ ಖರೀದಿಸಿತ್ತು. ಸದ್ಯ ಅವರು ಇದೇ ತಂಡದಲ್ಲಿ ಆಡುತ್ತಿದ್ದಾರೆ.


ಸ್ಯಾಮ್ ಕರ್ರನ್(2023)


2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್​ ತಂಡದ ಆಲ್​ರೌಂಡರ್​ ಸ್ಯಾಮ್​ ಕರನ್​ ಅವರನ್ನು 2023ರಲ್ಲಿ ನಡೆದ ಬಿಟ್ಟಿಂಗ್​ನಲ್ಲಿ ಪಂಜಾಬ್​ ಕಿಂಗ್ಸ್​ 18.5 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಅವರು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.

ಇದನ್ನೂ ಓದಿ IPL 2024 : ಅಂತಾರಾಷ್ಟ್ರೀಯ ಕ್ರಿಕೆಟ್​ ನಿವೃತ್ತಿ ಬಳಿಕ ಐಪಿಎಲ್​ನಲ್ಲಿ ಮಿಂಚಿದ ಆಟಗಾರರು ಇವರು


ಮಿಚೆಲ್​ ಸ್ಟಾರ್ಕ್​(2024)


2024ನೇ ಆವೃತ್ತಿಯ ಐಪಿಎಲ್​ನ ಹರಾಜಿನಲ್ಲಿ ಮಿಚೆಲ್​ ಸ್ಟಾರ್ಕ್​ ಅವರು 24.75 ಕೋಟಿ ರೂಪಾಯಿಗೆ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಸೇರುವ ಮೂಲಕ ಸಾರ್ವಕಾಲಿಕ ದಾಖಲೆಯೊಂದು ಸೃಷ್ಟಿಸಿದ್ದರು. ಮುಂದಿನ ಬಾರಿ ಮೆಗಾ ಹರಾಜು ನಡೆಯಲಿದೆ. ಇಲ್ಲಿ ಈ ಮೊತ್ತವನ್ನು ಮೀರಿಸುವ ಸಾಧ್ಯತೆ ಇದೆ.

Exit mobile version