Site icon Vistara News

Yoga Day 2023: ಯೋಗ ಮಾಡಿ ಮಿಂಚಿದ ಕ್ರಿಕೆಟ್​ ಆಟಗಾರರು

international yoga day

ಮುಂಬಯಿ: ಇಂದು ಅಂತಾರಾಷ್ಟ್ರೀಯ ಯೋಗ ದಿನ (International Yoga Day 2023)ವನ್ನು ವಿಶ್ವದಾದ್ಯಂತ ಆಚರಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಇಂದು ಯೋಗಾಸನಗಳನ್ನು ಮಾಡಿದ್ದಾರೆ. ಇದೀಗ ಕ್ರಿಕೆಟ್​ ಆಟಗಾರರು ಯೋಗ ಮಾಡಿದ ಫೋಟೊಗಳು ವೈರಲ್ ಆಗುತ್ತಿವೆ.

ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸಹವಾಗ್​,​ ವೆಂಕಟೇಶ್ ಪ್ರಸಾದ್ ಮತ್ತು ಪ್ರಗ್ಯಾನ್ ಓಜಾ ಯೋಗ ದಿನವನ್ನು ಉತ್ಸಾಹ ಹಾಗೂ ವಿಶಿಷ್ಟವಾಗಿ ಆಚರಿಸಿದ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ಹಾಗು ಜಿಜೆಪಿ ಸಂಸದ ಗೌತಮ್ ಗಂಭೀರ್ ಪ್ರಾಣಾಯಾಮ ಅಭ್ಯಾಸ ಮಾಡುತ್ತಿರುವ ಎರಡು ಫೋಟೊಗಳನ್ನು ಹಂಚಿಕೊಂಡು “ಯೋಗವು ದೇಹವನ್ನು ಮಾತ್ರವಲ್ಲ ಮನಸ್ಸು ಮತ್ತು ಆತ್ಮವನ್ನು ಸಮೃದ್ಧಗೊಳಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಕೆಲವು ಯೋಗಾಸನಗಳನ್ನು ಮಾಡುವ ಮೂಲಕ ಯೋಗದ ಮಹತ್ವವನ್ನು ಸಾರಿದರು. “ಯೋಗ ದೇಹ ಮತ್ತು ಮನಸ್ಸಿನ ನಡುವಿನ ಟೀಮ್ ವರ್ಕ್ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ನೆಚ್ಚಿನ ಯೋಗಾಸನ ಯಾವುದು ತಿಳಿಸಿ” ಎಂದು ವ್ಯಾಯಾಮದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ Vijayanagara News: ಕೂಡ್ಲಿಗಿ, ಕೊಟ್ಟೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಇದು ವಿಸ್ತಾರ ನ್ಯೂಸ್‌ ಅಭಿಯಾನ

ಟೀಮ್​ ಇಂಡಿಯಾದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರು ವಿಶಿಷ್ಟ ರೀತಿಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿದ್ದಾರೆ. ಚಕ್ರಾಸನ ಭಂಗಿಯನ್ನು ಪ್ರದರ್ಶಿಸುವ ವಿಡಿಯೋ ಪೋಸ್ಟ್ ಮಾಡಿ ಯೋಗದ ಮಹತ್ವವನ್ನು ತೀಳಿಸಿದ್ದಾರೆ. “ಇದು ಚಕ್ರಾಸನ, ಅಥವಾ ಪೂರ್ಣಚಕ್ರ ಭಂಗಿ ಎಂದೂ ಕರೆಯುತ್ತಾರೆ. ಚಕ್ರಾಸನ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ದೇಹದ ನಮ್ಯತೆ ಹೆಚ್ಚಿಸಲು ಆರೋಗ್ಯಕರ ಸ್ನಾಯುಗಳು ಮತ್ತು ಮೂಳೆಗಳನ್ನು ಕಾಪಾಡಿಕೊಳ್ಳಲು ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ವೆಂಕಟೇಶ್ ಪ್ರಸಾದ್ ಬರೆದುಕೊಂಡಿದ್ದಾರೆ.

ಡ್ಯಾಶಿಂಗ್​ ಓಪನರ್​ ಆಗಿದ್ದ ವೀರೇಂದ್ರ ಸೆಹವಾಗ್​ ಅವರು” ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಯೋಗಕ್ಕೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸುವ ಶಕ್ತಿ ಇದೆ” ಎಂದು ಬರೆದುಕೊಂಡಿದ್ದಾರೆ. ಪ್ರಗ್ಯಾನ್ ಓಜಾ ಕೂಡ ಯೋಗ ಮಾಡುತ್ತಿರುವ ಫೋಟೊ ಹಂಚಿಕೊಂಡು” ಒತ್ತಡವನ್ನು ದೂರ ಮಾಡುವ ಮತ್ತು ಮನಸ್ಸಿಗೆ ಶಾಂತಿ ಸಹನೆ ನೆಮ್ಮದಿಗಾಗಿ ಯೋಗ ತುಂಬಾ ಉಪಯುಕ್ತ. ಆರೋಗ್ಯವನ್ನು ಹೆಚ್ಚಿಸಲು ಯೋಗದ ಶಕ್ತಿಯನ್ನು ಬಳಸಿಕೊಳ್ಳಿ” ಎಂದು ಬರೆದುಕೊಂಡಿದ್ದಾರೆ. ಹೀಗೆ ಅನೇಕ ಕ್ರೀಡಾಪಟುಗಳು ಯೋಗ ಮಾಡುವ ಮೂಲಕ ಯೋಗದಿನವನ್ನು ಆಚರಿಸಿದ್ದಾರೆ.

Exit mobile version