ಹೈದರಾಬಾದ್: ಭಾರತದ ಏಕ ದಿನ ಕ್ರಿಕೆಟ್ನ ದ್ವಿ ಶತಕದ ಕ್ಲಬ್ಗೆ ಬುಧವಾರ ಇನ್ನೊಬ್ಬ ಆಟಗಾರ ಸೇರ್ಪಡೆಯಾಗಿದ್ದಾರೆ. ಅವರೇ ಶುಭ್ಮನ್ ಗಿಲ್. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅವರು 208 ರನ್ ಬಾರಿಸಿದ್ದರು. ಒಂದು ತಿಂಗಳ ಹಿಂದೆ ಇಶಾನ್ ಕಿಶನ್ ಕೂಡ ಇದೇ ಎಲೈಟ್ ಗುಂಪಿಗೆ ಸೇರ್ಪಡೆಗೊಂಡಿದ್ದರು. ಬಾಂಗ್ಲಾದೇಶ ವಿರುದ್ಧದ ಸರಣಿಯ ಸರಣಿಯ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅವರಿಬ್ಬರೂ ಆಡಿದ್ದರು. ಆದರೆ, ಕಿಶನ್ ಚೆನ್ನಾಗಿ ಬ್ಯಾಟ್ ಮಾಡಿರಲಿಲ್ಲ.
ಪಂದ್ಯ ಮುಕ್ತಾಯದ ಬಳಿಕ ನಾಯಕ ರೋಹಿತ್ ಶರ್ಮ 200 ಕ್ಲಬ್ಗೆ ಸೇರಿದ್ದ ಇಬ್ಬರನ್ನೂ ಮಾತನಾಡಿಸಿದ್ದರು. ಶುಬ್ಮನ್ ಗಿಲ್ ಅವರನ್ನು ಬಲಕ್ಕೆ ನಿಲ್ಲಿಸಿ ಇಶಾನ್ ಕಿಶನ್ ಅವರನ್ನು ಎಡಕ್ಕೆ ನಿಲ್ಲಿಸಿ, ಅವರಿಬ್ಬರ ದ್ವಿಶತಕದ ಸಾಧನೆಯನ್ನು ಕೊಂಡಾಡಿದ್ದರು. ಈ ವಿಡಿಯೊವನ್ನು ಬಿಸಿಸಿಐ ಟಿವಿ ಅಪ್ಲೋಡ್ ಮಾಡಿದೆ. ಈ ವಿಡಿಯೊದ ಕೊನೆಯಲ್ಲಿ, ಇಶಾನ್ ಕಿಶನ್ ಅವರು ನಾನು ದ್ವಿಶತಕ ಬಾರಿಸಿದ ಬಳಿಕ ಮೂರು ಪಂದ್ಯಗಳಲ್ಲಿ ಬೆಂಚು ಕಾಯುವಂತೆ ಮಾಡಿದ್ದೀರಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.
ವಿಡಿಯೊದಲ್ಲಿ ಇಬ್ಬರಿಗೂ ಶಹಬ್ಬಾಸ್ಗಿರಿ ಕೊಟ್ಟಿದ್ದ ರೋಹಿತ್ ಶರ್ಮ ಕೊನೆಯಲ್ಲಿ, ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ ಬಳಿಕ ಮೂರು ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಇದರ ಬಗ್ಗೆ ಏನು ಅನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದರು. ತಕ್ಷಣ ಇಶಾನ್ ಕಿಶನ್, ನೀವೇ ಕ್ಯಾಪ್ಟನ್, ನೀವೇ ನನ್ನನ್ನು ಬೆಂಚು ಕಾಯುವಂತೆ ಮಾಡಿದ್ದು ಎಂದು ಹೇಳುವ ಮೂಲಕ ಆಘಾತ ಕೊಟ್ಟರು. ಉತ್ತರ ಕೇಳಿದ ರೋಹಿತ್ ಜೋರಾಗಿ ನಗುವ ಮೂಲಕ ಸಂಭಾಷಣೆ ಕೊನೆಗೊಳಿಸುತ್ತಾರೆ.
ಇಶಾನ್ ಕಿಶನ್ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಕೊನೇ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಆದರೆ, ತವರಿನಲ್ಲಿ ನಡೆದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಅವರಿಗೆ ಅವಕಾಶ ಕೊಟ್ಟಿರಲಿಲ್ಲ. ಈ ನಿರ್ಧಾರಕ್ಕೆ ರೋಹಿತ್ ಶರ್ಮಾ ಕ್ರಿಕೆಟ್ ಕಾರಿಡಾರ್ನಿಂದ ಟೀಕೆ ಎದುರಿಸಿದ್ದರು.
ಇದನ್ನೂ ಓದಿ | INDvsNZ ODI | ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡವನ್ನು ಗೆಲ್ಲಿಸಿದ್ದು ನಾಯಕ ರೋಹಿತ್ ಶರ್ಮಾ ಅಲ್ಲ, ವಿರಾಟ್ ಕೊಹ್ಲಿ!