ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿ ಆಟೋಗ್ರಾಫ್ ನೀಡಿದ್ದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ವೇಳೆ ಭಾರತದ ಮಾಜಿ ನಾಯಕನಿಗೆ ಬಾಲಕಿಯೊಬ್ಬಳು ಕೈಯಿಂದಲೇ ತಯಾರಿಸಿದ ಬ್ರೇಸ್ಲೆಟ್ ಅನ್ನು ವಿಶೇಷ ಉಡುಗೊರೆಯಾಗಿ ನೀಡಿದರು. ಅದನ್ನು ಪಡೆದ ಕೊಹ್ಲಿ ಬಲ ಕೈಗೆ ಬ್ರೇಸ್ಲೆಟ್ ಧರಿಸಿದ್ದರು. ಅಭಿಮಾನಿಯ ಪಾಲಿಗೆ ಅದೊಂದು ಅಪರೂಪದ ಕ್ಷಣವಾಗಿತ್ತು. ಈ ಸುಂದರ ಕ್ಷಣದ ಸೆರೆಹಿಡಿಯುವ ಹೃದಯಸ್ಪರ್ಶಿ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿದೆ.
ಕೊಹ್ಲಿಯನ್ನು ನೋಡಿ, ಮಾತನಾಡಿಸಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಅಭಿಮಾನಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಕೊಹ್ಲಿ ಅವರಲ್ಲದೆ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಅಭಿಮಾನಿಗಳನ್ನು ಭೇಟಿ ಮಾಡಿ ಮಾತನಾಡಿದರಲ್ಲದೆ, ಆಟೋಗ್ರಾಫ್ ನೀಡಿದರು.
ಭಾರತಕ್ಕೆ ಸೋಲು
ಪಂದ್ಯದ ವಿಷಯಕ್ಕೆ ಬಂದರೆ, ರೋಹಿತ್ ಮತ್ತು ವಿರಾಟ್ ಅವರಿಗೆ ವಿಶ್ರಾಂತಿ ನೀಡುವ ಭಾರತೀಯ ತಂಡದ ನಿರ್ಧಾರವು ಅಪಾಯಕಾರಿ ಸಾಬೀತಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಪಿಚ್ನ ವೇಗ, ಬೌನ್ಸ್ ಮತ್ತು ತಿರುವನ್ನು ನಿಭಾಯಿಸಲು ಹೆಣಗಾಡಿದ್ದು ಕಂಡು ಬಂತು ಪರಿಣಾಮವಾಗಿ 40.5 ಓವರ್ಗಳಲ್ಲಿ ಭಾರತ 181 ರನ್ಗಳಿಗೆ ಆಲ್ಔಟ್ ಆಯಿತು. ಉತ್ತರವಾಗಿ ವಿಂಡೀಸ್ ತಂಡಕ್ಕೆ ಶಾರ್ದೂಲ್ ಠಾಕೂರ್ (8 ಓವರ್ಗಳಲ್ಲಿ 42ರನ್ ನೀಡಿ 3 ವಿಕೆಟ್ ) ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ (63) ಹಾಗೂ ಮತ್ತು ಕೀಸಿ ಕಾರ್ಟಿ (48) ಅವರ 91 ರನ್ಗಳ ಜತೆಯಾಟದ ನೆರವು ಪಡೆದು ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ 2019ರ ಡಿಸೆಂಬರ್ನಿಂದ ವೆಸ್ಟ್ ಇಂಡೀಸ್ ಸತತ ಭಾರತ ವಿರುದ್ಧ ಒಂಬತ್ತು ದ್ವಿಪಕ್ಷೀಯ ಪಂದ್ಯಗಳ ಸೋಲಿನ ಸರಣಿಯನ್ನು ಕಡಿದುಕೊಂಡಿತು. ಇಶಾನ್ ಕಿಶನ್ (55 ಎಸೆತಗಳಲ್ಲಿ 55 ರನ್) ಮತ್ತು ಶುಭ್ಮನ್ ಗಿಲ್ (49 ಎಸೆತಗಳಲ್ಲಿ 34 ರನ್) ಅವರ ಆರಂಭಿಕ ಜೊತೆಯಾಟದ ನಂತರ ಕೇವಲ 7.2 ಓವರ್ಗಳಲ್ಲಿ ಕೇವಲ 23 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡಿತು ಭಾರತ ತಂಡ. ಮಳೆಯ ಅಡಚಣೆಯ ಹೊರತಾಗಿಯೂ ವೆಸ್ಟ್ ಇಂಡೀಸ್ ಬೌಲರ್ಗಲು ಪಂದ್ಯದುದ್ದಕ್ಕೂ ಪ್ರಭಾವ ತೋರಿದರು.