ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಚೆಪಾಕ್ ಕ್ರೀಡಾಂಗಣದ ಸವಾಲಿನ ಟ್ರ್ಯಾಕ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿಯನ್ನು (Virat Kohli) ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ. ವಿರಾಟ್ ಕೊಹ್ಲಿಯ ಕಾಯಂ ಟೀಕಾಕಾರರಾಗಿರುವ ಗಂಭೀರ್ ಅವರೇ ಈ ಮಾತು ಹೇಳಿದ್ದು ವಿಶೇಷ ಎನಿಸಿದೆ.
ಚೆನ್ನೈನಲ್ಲಿ ಶುಕ್ರವಾರ (ಅಕ್ಟೋಬರ್ 8) ನಡೆದ ಪಂದ್ಯದಲ್ಲಿ ಕೊಹ್ಲಿ 85 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾವನ್ನು 6 ವಿಕೆಟ್ಗಳಿಂದ ಸೋಲಿಸಲು ಭಾರತಕ್ಕೆ ಸಹಾಯ ಮಾಡಿದರು. ವಿಶ್ವ ಕಪ್ 2023ರಲ್ಲಿ ಮೆನ್ ಇನ್ ಬ್ಲೂ ಗೆಲುವಿನ ಆರಂಭವನ್ನು ಪಡೆದ ನಂತರ, ಗಂಭೀರ್ ಅವರು ಏಕದಿನ ಅಂತಹ ಕಠಿಣ ಪಿಚ್ನಲ್ಲಿ ಚೇಸಿಂಗ್ ಮಾಡುವಾಗ ಆಟವನ್ನು ಅರಿತುಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಈ ವೇಳೆ ಕೊಹ್ಲಿಯಿಂದ ಒತ್ತಡವನ್ನು ಸಹಿಸಿಕೊಳ್ಳುವ ಕಲೆಯನ್ನು ಕಲಿಯುವಂತೆ ಯುವಕರಿಗೆ ಸಲಹೆ ನೀಡಿದರು.
ನಿಮ್ಮ ತಂಡಕ್ಕೆ ಭದ್ರ ಬುನಾದಿ ನಿರ್ಮಿಸಲು ಕೇವಲ ದೊಡ್ಡ ಶಾಟ್ಗಳಿಗಿಂತ ಒತ್ತಡವನ್ನು ನಿಭಾಯಿಸಿ, ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವ ಕ್ರಿಕೆಟ್ನತ್ತ ಗಮನ ಹರಿಸುವ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ.
ಸ್ಟಾರ್ ಸ್ಪೋಟ್ಸ್ನಲ್ಲಿ ಮಾತನಾಡಿದ ಗೌತಮ್ ಗಂಭೀರ್, “ಆಟಗಾರ ಆಟವನ್ನು ಅರಿತುಕೊಳ್ಳುವ ರೀತಿ ಪ್ರಮುಖವಾಗಿರುತ್ತದೆ ನಾನು ಭಾವಿಸುತ್ತೇನೆ. ಮೊದಲನೆಯದಾಗಿ, ನೀವು ಆ ದೊಡ್ಡ ಮೊತ್ತವನ್ನು ಬೆನ್ನಟ್ಟಬೇಕಾದಾಗ ನೀವು ಒತ್ತಡವನ್ನು ನಿಭಾಯಿಸಬೇಕಾಗುತ್ತದೆ. ನೀವು ಈ ಆತ್ಮವಿಶ್ವಾಸವನ್ನು ಹೊಂದಿರಬೇಕು, ನೀವು ಅದನ್ನು ಯಾವುದೇ ಪರಿಸ್ಥಿತಿ ಮತ್ತು ಸ್ಥಾನದಿಂದ ಬ್ಯಾಟಿಂಗ್ ಆರಂಭಿಸಬಹುದು. ಆದರೆ, ಏಕದಿನ ಕ್ರಿಕೆಟ್ನಲ್ಲಿ ಮೊದಲು ಒತ್ತಡವನ್ನು ನಿಭಾಯಿಸಬೇಕು. ದೊಡ್ಡ ಶಾಟ್ಗಳನ್ನು ಹೊಡೆಯುವುದಕ್ಕೆ ಅಲ್ಲ ಎಂಬುದಾಗಿ ಅವರು ಹೇಳಿದ್ದಾರೆ.
ವಿಕೆಟ್ಗಳ ನಡುವಿನ ಓಟವೂ ಮುಖ್ಯ
2011 ರ ವಿಶ್ವಕಪ್ ವಿಜೇತ ಗಂಭೀರ್ ಮಾತು ಮುಂದುವರಿಸಿ, ವಿಕೆಟ್ಗಳ ನಡುವೆ ಓಡುವ ಬಗ್ಗೆಯೂ ಅರಿತುಕೊಳ್ಳಬೇಕು. ಕಡಿಮೆ ಡಾಟ್ ಬಾಲ್ ಗಳನ್ನು ಆಡಿದಷ್ಟೂ, ಬ್ಯಾಟರ್ ವಿಶ್ವಾಸ ಹೆಚ್ಚುತ್ತದೆ. ಏಕೆಂದರೆ ಈ ಹೊಸ ನಿಯಮದಲ್ಲಿ 30 ಯಾರ್ಡ್ ಸರ್ಕಲ್ ಒಳಗೆ ಒಳಗೆ ಐದು ಫೀಲ್ಡರ್ ಗಳು ಇರುತ್ತದೆ. ಜತೆಗೆ ರನ್ ಗಳಿಗೆ ವೇಗ ಹೆಚ್ಚಿಸಲು ಹೊಸ ಚೆಂಡಿನ ಅನುಕೂಲವೂ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ICC World Cup 2023 : ಹಿಂದೂ ವಿರೋಧಿ ಹೇಳಿಕೆ; ಪಾಕ್ನ ಸುಂದರಿ ಆ್ಯಂಕರ್ಳನ್ನು ಒದ್ದೋಡಿಸಿದ ಭಾರತ
ತಂಡವು ತಂಡವು ಒತ್ತಡದಲ್ಲಿದ್ದಾಗ ಆಡಬೇಕಾಗುತ್ತದೆ. ಅದು ಕಡಿಮೆ ಅಪಾಯದ ಕ್ರಿಕೆಟ್ ಎನಿಸಿಕೊಳ್ಳುತ್ತದೆ. ತಂಡಕ್ಕೆ ರನ್ ಅಡಿಪಾಯ ನಿರ್ಮಿಸುವುವೂ ಮುಖ್ಯ. ವಿರಾಟ್ ಕೇವಲ 5 ಬೌಂಡರಿಗಳೊಂದಿಗೆ 70 ರನ್ ಗಳಿಸಿದ್ದಾರೆ. ಉಳಿದ ರನ್ಗಳು ವಿಕೆಟ್ಗಳ ನಡುವಿನ ಓಟದಿಂದ ಬಂದಿದೆ. ಸ್ಪಿನ್ ಬೌಲಿಂಗ್ಗೆ ಆಡುವ ಸಾಮರ್ಥ್ಯವನ್ನು ತೋರಿಸುತ್ತದೆ. ಸ್ಪಿನ್ ಬೌಲಿಂಗ್ ವಿರುದ್ಧ ಸ್ಟ್ರೈಕ್ ಬದಲಾಯಿಸಉವ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ಕಠಿಣ ಸಂದರ್ಭಗಳಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಯುವಕರು ಖಂಡಿತವಾಗಿಯೂ ಕೊಹ್ಲಿಯಿಂದ ಕಲಿಯಬೇಕಾಗಿದೆ ಎಂದು ಗಂಭೀರ್ ಹೇಳಿದರು.
ವಿರಾಟ್ ಕೊಹ್ಲಿ ತುಂಬಾ ಸ್ಥಿರವಾಗಿದ್ದಾರೆ. ಡ್ರೆಸ್ಸಿಂಗ್ ರೂಮ್ನಲ್ಲಿರುವ ಈ ಯುವ ಕ್ರಿಕೆಟಿಗರು ಫಿಟ್ನೆಸ್ ಮಹತ್ವ, ವಿಕೆಟ್ ನಡುವೆ ಓಡುವ ಪ್ರಾಮುಖ್ಯತೆ ಮತ್ತು ಮಧ್ಯದಲ್ಲಿ ಸ್ಟ್ರೈಕ್ ಅನ್ನು ಬದಲಾಯಿಸಬೇಕು ಎಂಬುದರ ಮಹತ್ವವನ್ನು ವಿರಾಟ್ ಕೊಹ್ಲಿಯಿಂದ ಕಲಿಯುತ್ತಾರೆ ಎಂದು ನನಗೆ ಖಾತ್ರಿಯಿದೆ, ಏಕೆಂದರೆ ಟಿ 20 ಕ್ರಿಕೆಟ್ನ ಜನಪ್ರಿಯತೆ ಬಳಿಕ ಹೊಸ ಹುಡುಗರು ಚೆಂಡನ್ನು ಮೈದಾನದಿಂದ ಹೊರಗೆ ಹೊಡೆಯಲು ಮಾತ್ರ ಬಯಸುತ್ತಾರೆ ಎಂಬುದಾಗಿ ಗಂಭೀರ್ ನುಡಿದರು.