Site icon Vistara News

Yuvraj Singh: ಯುವರಾಜ್​​ಗೆ ವಿಶೇಷವಾಗಿ ಜನ್ಮದಿನದ ಶುಭಾಶಯ ತಿಳಿಸಿದ ಗಂಭೀರ್​

yuvraj singh and gautam gambhir

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌, ಟಿ20 ಮತ್ತು ಏಕದಿನ ವಿಶ್ವಕಪ್​ ಹೀರೊ ಯುವರಾಜ್‌ ಸಿಂಗ್‌(Yuvraj Singh) ಮಂಗಳವಾರ 42ನೇ ವರ್ಷಕ್ಕೆ ಕಾಲಿಟ್ಟರು. ಭಾರತೀಯ ಕ್ರಿಕೆಟಿನ ಅಪ್ಪಟ ಹೋರಾಟಗಾರ ಯುವಿಗೆ ಮಾಜಿ ಸಹ ಆಟಗಾರರಾದ ತೆಂಡೂಲ್ಕರ್‌, ಲಕ್ಷ್ಮಣ್‌, ಸೆಹವಾಗ್‌, ರೈನಾ, ಮೊದಲಾದವರೆಲ್ಲ ಶುಭ ಹಾರೈಸಿದ್ದಾರೆ. ಆದರೆ ಗೌತಮ್​ ಗಂಭೀರ್‌(gautam gambhir) ಮಾಡಿರುವ ಹಾರೈಕೆಯ ಟ್ವಿಟ್​ ಮಾತ್ರ ವೈರಲ್​ ಆಗಿದೆ.

ಹಲವು ಬಾರಿ ಗಂಭೀರ್​ ಅವರು 2011ರ ಏಕದಿನ ಮತ್ತು 2007ರ ಟಿ20 ವಿಶ್ವಕಪ್​ ಜಯಿಸಿದ್ದು ಯುವರಾಜ್​ ಸಿಂಗ್​ ಅವರ ಆಲ್​ರೌಂಡರ್​ ಆಟದಿಂದ ಎಂದು ಬಹಿರಂಗವಾಗಿಯೇ ಹೇಳಿದ್ದರು. ಈ ಮೂಲಕ ಅವರ ಸಾಧನೆಯನ್ನು ನೆನಪಿಸುತ್ತಿದ್ದರು. ಇದೀಗ ಯುವರಾಜ್​ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಇಲ್ಲಿಯೂ ಅವರ ಸಾಧನೆಯನ್ನು ಎತ್ತಿ ಹಿಡಿದಿದ್ದಾರೆ.

“ಒಬ್ಬ ಮ್ಯಾಚ್ ವಿನ್ನರ್, ಸರ್ವಶ್ರೇಷ್ಠತೆಯ ವ್ಯಕ್ತಿ. ಪ್ರೀತಿಯ ಸ್ನೇಹಿತ! ನಿಮಗೆ ಜನ್ಮದಿನದ ಶುಭಾಶಯಗಳು. ವರ್ಷವು ಸಂತಸದಿಂದ ಕೂಡಿರಲಿ ಸಹೋದರ” ಎಂದು ಗಂಭೀರ್​ ಅವರು ಟ್ವೀಟ್​ ಮೂಲಕ ಯುವರಾಜ್​ಗೆ ಶುಭ ಹಾರೈಸಿದ್ದಾರೆ.

2011ರ ಏಕದಿನ ಮತ್ತು 2007ರ ಟಿ20 ವಿಶ್ವಕಪ್​ ಜಯಿಸಿದ್ದು ಧೋನಿ ಅವರ ನಾಯಕತ್ವದಿಂದ ಅಲ್ಲ ಅದು ಯುವರಾಜ್​ ಸಿಂಗ್​ ಅವರ ಶ್ರೇಷ್ಠ ಆಟದ ನೆರವಿನಿಂದ. ಆದರೆ ಅವರ ಈ ಪದರ್ಶನವನ್ನು ಯಾರು ಗುರಿತಿಸುವುದಿಲ್ಲ. ಧೋನಿಯಿಂದಲೇ ಇದು ಸಾಧ್ಯವಾಯಿತು ಎನ್ನುತ್ತಾರೆ. ಇದು ಸರಿಯಲ್ಲ ಎನ್ನುವುದು ಗಂಭೀರ್​ ಅವರ ತರ್ಕ.

“2011 ರ ವಿಶ್ವಕಪ್​ನಲ್ಲಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್ ಅವರಿಗೆ ಉತ್ತಮ ಪಿಆರ್ ಏಜೆನ್ಸಿ ಇರಲಿಲ್ಲ. ಹೀಗಾಗಿ ಅವರ ಸಾಧನೆ ನಗಣ್ಯವಾಯಿತು” ಎಂದು ಎಎನ್ಐ ಜತೆಗಿನ ಸಂಭಾಷಣೆಯಲ್ಲಿ ಗೌತಮ್ ಗಂಭೀರ್ ಹೇಳಿದ್ದರು. ಮೊದಲ ನೋಟದಲ್ಲಿ ಸರಿ ಎಂದು ತೋರುವ ಈ ಹೇಳಿಕೆಯು ಕೆಲವೊಂದು ಸೂಕ್ಷ್ಮತೆಗಳನ್ನು ಹೊಂದಿರುವುದಂತೂ ನಿಜ.

“ಯುವರಾಜ್ ಸಿಂಗ್ ಅವರಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವೇ” ಎಂದು ಪಾಡ್​ಕಾಸ್ಟ್​ ಮಾಡುತ್ತಿದ್ದ ಸ್ಮಿತಾ ಪ್ರಕಾಶ್ ಕೇಳಿದರು. ಇದಕ್ಕೆ ಉತ್ತರಿಸಿದ ಗಂಭೀರ್, “ನಿಮಗೆ ತಿಳಿದಿದೆ, ನೀವೇ ಹೇಳಿ. 2011 ರ ವಿಶ್ವಕಪ್​ನ ಮ್ಯಾನ್​ ಆಫ್​ ದಿ ಸೀರಿಸ್​ ಗೆದ್ದ ಆಟಗಾರ ಯುವರಾಜ್​. ಅವರ ಬಗ್ಗೆ ಎಷ್ಟು ಜನರು ಮಾತನಾಡುತ್ತಾರೆ? ಬಹುಶಃ ಅವರು ಉತ್ತಮ ಪಿಆರ್ ಏಜೆನ್ಸಿಯನ್ನು ಹೊಂದಿಲ್ಲದ ಕಾರಣ ಅವರ ಸಾಧನೆ ಮಂಕಾಯಿತು ಎಂದು ಹೇಳಿದ್ದರು. ಅಲ್ಲದೆ ಈ ಮಾತನ್ನು ಗಂಭೀರ್​ ಅವರು ಹಲವು ಬಾರಿ ಕ್ರೀಡಾ ಚರ್ಚೆಯ ವೇದಿಕೆಯಲ್ಲಿಯೂ ಹೇಳಿದ್ದರು.

ಇದನ್ನೂ ಓದಿ Gautam Gambhir : ಮೋದಿಯನ್ನು ಪನೌತಿ ಎಂದವರಿಗೆ ತಿರುಗೇಟು ಕೊಟ್ಟ ಗೌತಮ್​ ಗಂಭೀರ್​

ಕ್ಯಾನ್ಸರ್​ ಮಧ್ಯೆಯೂ ಹೋರಾಡಿದ್ದ ಯುವಿ

ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ತೋರಿದ ಯುವರಾಜ್​ ಸಿಂಗ್​ ತಮ್ಮ ಕ್ಯಾನ್ಸರ್​ ಕಾಯಿಲೆಯನ್ನು ಮರೆಮಾಚಿ ದೇಶಕ್ಕಾಗಿ ಹೋರಾಟ ನಡೆಸಿದ್ದರು. ಮೈದಾನದಲ್ಲೇ ಹಲವು ಬಾರಿ ರಕ್ತ ಕಾರಿದರೂ ಛಲ ಬಿಡದೆ ಆಟವಾಡಿದ್ದರು. ಅವರ ಅಸಾಮಾನ್ಯ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಒಂದು ಶತಕ, ನಾಲ್ಕು ಅರ್ಧಶತಕ ಸೇರಿ ಒಟ್ಟು 362 ರನ್​ ಬಾರಿಸಿದ್ದರು. ಬೌಲಿಂಗ್​ನಲ್ಲಿಯೂ ಮಿಂಚಿ 15 ವಿಕೆಟ್​ ಕೆಡವಿದ್ದರು.

Exit mobile version