ಬೆಂಗಳೂರು: ಕ್ರಿಕೆಟಿಗರಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಲು ಪ್ರಮುಖ ತಾಣವೇ ಕೌಂಟಿ ಕ್ರಿಕೆಟ್. ಈ ಹಿಂದೆಯೂ ಭಾರತದ ಹಲವಾರು ಕ್ರಿಕೆಟಿಗರು ಭಾರತ ತಂಡದಲ್ಲಿ ಅವಕಾಶ ನಷ್ಟವಾದಾಗ ಕೌಂಟಿ ದಾರಿ ಹಿಡಿದಿದ್ದರು. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಈ ಪಟ್ಟಿಯಲ್ಲಿನ ಇತ್ತೀಚಿನ ಹೆಸರು ಯಜ್ವೇಂದ್ರ ಚಹಲ್ (Yuzvendra Chahal). ಇದೀಗ ಏಷ್ಯಾ ಕಪ್ ಹಾಗೂ ವಿಶ್ವ ಕಪ್ನಲ್ಲಿ (Worlc Dup 2023) ಅವಕಾಶ ಪಡೆಯದ ಯಜ್ವೇಂದ್ರ ಚಹಲ್ ಅವರು ಕೌಂಟಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿಗಳ ಪ್ರಕಾರ, ಯಜುವೇಂದ್ರ ಚಹಲ್ ಕೌಂಟಿ ಕ್ರಿಕೆಟ್ನಲ್ಲಿ ಕೆಂಟ್ ಪರ ಆಡಲು ನಿರ್ಧರಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ನೀಡಲಿದೆ. ಚಹಲ್ ಅವರ ಒಟ್ಟು 4 ದಿನಗಳ ಪಂದ್ಯಗಳನ್ನು ಆಡಲಿದ್ದಾರೆ. ಕೌಂಟಿ ಕ್ರಿಕೆಟ್ ಆಡಲು ಬಿಸಿಸಿಐ ಅವರಿಗೆ ಎನ್ಒಸಿ ನೀಡಿದೆ. ಅವರು ಭಾರತ ತಂಡಕ್ಕೆ ಅಗತ್ಯವಿದ್ದರೆ, ಚಹಲ್ ತಕ್ಷಣವೇ ರಾಷ್ಟ್ರೀಯ ತಂಡವನ್ನು ಸೇರುತ್ತಾರೆ ಎಂದು ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.
ಅವಕಾಶ ವಂಚಿತ
ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಸುಮಾರು ಒಂದು ವರ್ಷ ಹೊರಕ್ಕಿದ್ದ ಚಹಲ್ 2023ರಲ್ಲಿ ಮರು ಅವಕಾಶ ಪಡೆದರು. ಆದರೆ ಅದು ಮುಂದುವರಿಯಲಿಲ್ಲ. ಯಾಕೆಂದರೆ ಅವರು ಸಿಕ್ಕ ಅವಕಾಶ ಅವರಿಗೆ ಪೂರಕವಾಗಿ ಇರಲಿಲ್ಲ. ಚಹಲ್ ಬಿಸಿಸಿಐ ಆಯ್ಕೆ ಸಮಿತಿಯನ್ನು ಮೆಚ್ಚಿಸಲು ಸಿಕ್ಕ ಅವಕಾಶವನ್ನು ವ್ಯರ್ಥ ಮಾಡಿದರು. ಒಂದು ತಿಂಗಳ ಹಿಂದೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಚಹಲ್, ಕೆರಿಬಿಯನ್ ಬ್ಯಾಟರ್ಗಳ ಅಬ್ಬರಕ್ಕೆ ಒಳಗಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ವೆಸ್ಟ್ ಇಂಡೀಸ್ ಪ್ರವಾಸವು ಚಹಲ್ ಪಾಲಿಗೆ ದುಃಸ್ವಲ್ಪ ಎನಿಸಿತು. 33 ವರ್ಷದ ಅವರು 2023 ರಲ್ಲಿ ಭಾರತಕ್ಕಾಗಿ ಕೇವಲ 2 ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡಿದ್ದರು. ಆ ಮೂಲಕವೇ ಆಯ್ಕೆದಾರರು ಅವರನ್ನು ದೂರವಿರಿಸಲು ನಿರ್ಧರಿಸಿದ್ದಾರೆ ಎಂಬುದು ಬಹಿರಂಗವಾಯಿತು. ಮರಳುವ ಬಗ್ಗೆ ಸ್ವಲ್ಪ ಭರವಸೆಗಳಿದ್ದರೂ, ಸೆಪ್ಟೆಂಬರ್ 5 ರಂದು ಭಾರತವು ವಿಶ್ವಕಪ್ ತಂಡವನ್ನು ಘೋಷಿಸಿದಾಗ ಅದು ಸುಳ್ಳಾಯಿತು.
ವಿಶ್ವಕಪ್ ಟಿಕೆಟ್ ಕೈತಪ್ಪಿದೆಯೇ? ಈ ಬಲೆಗಳಿಗೆ ಬೀಳಬೇಡಿ
ಸ್ವಾಭಾವಿಕವಾಗಿ, ಭಾರತ ತಂಡದ ಆಯ್ಕೆಯನ್ನು ತಪ್ಪಿಸಿಕೊಳ್ಳುವುದು ತುಂಬಾ ನಿರಾಶಾದಾಯಕ. ಕೆಲವು ವಿಷಯಗಳು ಯಾವಾಗಲೂ ನಮ್ಮ ಅಂದುಕೊಂಡಂತೆ ನಡೆಯುವುದಿಲ್ಲ ಎಂದು ಕ್ರಿಕೆಟಿಗನಾಗಿ ನಾವು ಒಪ್ಪಿಕೊಳ್ಳಬೇಕು. ನಾನು ಅತ್ಯುತ್ತಮ ಪ್ರಯತ್ನವನ್ನು ಮುಂದುವರಿಸಬೇಕು”ಎಂದು ಯಜುವೇಂದ್ರ ಚಾಹಲ್ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸರ್ ಕೌಂಟಿ ಕ್ರಿಕೆಟ್ನ ಬಗ್ಗೆ ಉತ್ತಮವಾಗಿ ಮಾತನಾಡಿದ್ದಾರೆ. ನಾನು ನಿಜವಾಗಿಯೂ ಕೌಂಟಿ ಕ್ರಿಕೆಟ್ನಲ್ಲಿ ಆಡಲು ಬಯಸಿದ್ದೆ. ಇಷ್ಟು ಕಡಿಮೆ ಸಮಯದಲ್ಲಿ ನನಗೆ ಸಹಾಯ ಮಾಡಿದ ನನ್ನ ಉತ್ತಮ ಸ್ನೇಹಿತ ಬ್ರಿಂಡನ್ಗೆ ನಾನು ಕೃತಜ್ಞನಾಗಿದ್ದೇನೆ “ಎಂದು ಚಹಲ್ ಹೇಳಿದ್ದಾರೆ.