ಜಗ್ರೆಬ್, (ಕ್ರೊವೇಷ್ಯಾ): ಭಾರತದ ಯುವ ಕುಸ್ತಿ ಪಟು ಅಮನ್ ಸೆಹ್ರಾವತ್(Aman Sehrawat) ಅವರು ಕ್ರೊವೇಷ್ಯಾದಲ್ಲಿ ನಡೆಯುತ್ತಿರುವ ಜಗ್ರೆಬ್ ಓಪನ್ ಕುಸ್ತಿ(Zagreb Open wrestling) ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಗುರುವಾರ ಇಲ್ಲಿ ನಡೆದ 57 ಕೆಜಿ ವಿಭಾಗದ ಕಂಚಿನ ಪದಕ ಸ್ಪರ್ಧೆಯಲ್ಲಿ 18 ವರ್ಷದ ಅಮನ್ ಸೆಹ್ರಾವತ್ 10-4 ಅಂಕಗಳ ಅಂತರದಲ್ಲಿ ಅಮೆರಿಕದ ರೋಡ್ಸ್ ರಿಚರ್ಡ್ಸ್ ಅವರನ್ನು ಮಗುಚಿ ಹಾಕಿದರು. ಅಜರ್‌ಬೈಜಾನ್‌ನ ಅಲಿಅಬ್ಬಾಸ್ ರಜಾಜೇದ್ ಫೈನಲ್‌ನಲ್ಲಿ 2-0 ಅಂತರದಲ್ಲಿ ಜಪಾನ್‌ನ ಯುಟೊ ನಿಶಿಯುಚಿ ಅವರನ್ನು ಮಣಿಸಿ ಚಿನ್ನ ಗೆದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಜಿಯದ ರಾಬರ್ಟಿ ದಿಂಗಶ್ವಿಲಿ ಅವರನ್ನು ಮಣಿಸಿದ್ದ ಅಮನ್, ಸೆಮಿಫೈನಲ್‌ನಲ್ಲಿ ನಿಶಿಯುಚಿ ವಿರುದ್ಧ ಸೋಲು ಕಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಉತ್ತಮ ಪ್ರದರ್ಶನ ತೋರುತ್ತಿರುವ ಅಮನ್ ಸೆಹ್ರಾವತ್ ಇದೇ ರೀತಿಯ ಪ್ರದರ್ಶನ ತೋರಿದರೆ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ Thailand Open: ಥಾಯ್ಲೆಂಡ್ ಓಪನ್; ಎರಡನೇ ಸುತ್ತಿಗೆ ಲಗ್ಗೆಯಿಟ್ಟಿ ಸಾಯಿ ಪ್ರಣೀತ್, ಕಿರಣ್ ಜಾರ್ಜ್
ಕಂಚು ಗೆದ್ದ ಅಮನ್ ಅವರಿಗೆ ಭಾರತೀಯ ಕುಸ್ತಿ ಒಕ್ಕೂಟ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಅಭಿನಂದನೆ ಸಲ್ಲಿಸಿದೆ.