ಮುಂಬಯಿ: ಟೀಮ್ ಇಂಡಿಯಾದ ಮಾಜಿ ವೇಗಿ, ವಿಶ್ವಕಪ್ ವಿಜೇತ ತಂಡದ ಆಟಗಾರ ಜಹೀರ್ ಖಾನ್(Zaheer Khan) ಅವರು ಇತ್ತೀಗೆಚೆ ತಮ್ಮ ಪತ್ನಿ ಸಾಗರಿಕಾ ಘಾಟ್ಗೆ(Sagarika Ghatge) ಜತೆಗೂಡಿ ಹಿಂದುಗಳ ಹೊಸ ವರ್ಷವಾದ ಯುಗಾದಿ ಹಬ್ಬವನ್ನು ಆಚರಿಸಿಕೊಂಡಿದ್ದರು. ಇದರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಕೆಲ ಮುಸ್ಲಿಂ ಮೂಲಭೂತವಾದಿಗಳು ಜಹೀರ್ ವಿರುದ್ಧ ಕೆಂಡಕಾರಿದ್ದಾರೆ.
ಅಂತರ್ ಧಮೀರ್ಯ ವಿವಾಹವಾಗಿರುವ ಜಹೀರ್ ಹಿಂದುಗಳ ಹಬ್ಬವನ್ನು ಆಚರಿಸಿದ್ದಕ್ಕೆ ಜಹೀರ್ ವಿರುದ್ಧ ದ್ವೇಷಪೂರಿತ ಕಾಮೆಂಟ್ಗಳ ಮೂಲಕ ನಿಂದನೆ ಮಾಡಲಾಗಿದೆ. ಜಹೀರ್ ಅವರನ್ನು ಮೂಲಭೂತವಾದಿಗಳು ಈ ರೀತಿ ನಿಂದನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ದೀಪಾವಳಿ ಹಬ್ಬವನ್ನು ಆಚರಿಸಿದಾಗಲೂ ಇಂಥದ್ದೇ ನಿಂದನೆಗಳಿಗೆ ಒಳಪಟ್ಟಿದ್ದರು. ಯಾರು ಏನೇ ಅಂದರೂ ಕೂಡ ಜಹೀರ್ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳ ತಮಗಿಷ್ಟದ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
Cricketer Zaheer Khan was abused by Islamist Radicals because
— Fringe Balsara (@TheMaleficiant) April 12, 2024
– He celebrated Gudi Padwa & Diwali.
– He didn’t convert his Hindu wife to his sick religion.
India needs more of such Zaheer Khan & Late President Dr. APJ Abdul Kalam….this is the transformation India severely… pic.twitter.com/BZVEmdC5xS
ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ ಅವರನ್ನು ಜಹೀರ್ ಅವರು 2017ರಲ್ಲಿ ವಿವಾಹವಾಗಿದ್ದರು. ಸಾಗರಿಕಾ ಘಾಟ್ಕೆ ಚಕ್ ದೇ ಇಂಡಿಯಾ ಸಿನಿಮಾ ಮೂಲಕ ಪ್ರಚಾರಕ್ಕೆ ಬಂದರು. ಅದಕ್ಕೂ ಮುನ್ನ ಅವರು ಭಾರತೀಯ ಹಾಕಿ ತಂಡದಲ್ಲಿ ಆಡಿದ್ದರು. ಮುಂದೆ ಬಾಲಿವುಡ್‌ನಲ್ಲಿ ಸಾಗರಿಕಾ ಹೆಸರು ಮಾಡಿದರು. ಇದೇ ಕಾರಣಕ್ಕೆ ಜಹೀರ್ ನಡುವೆ ಪ್ರೀತಿ ಬೆಳೆದಿತ್ತು.
ಇದನ್ನೂ ಓದಿ IPL 2024: ಆರ್ಸಿಬಿ ಪ್ಲೇ ಆಫ್ ಪ್ರವೇಶದ ಲೆಕ್ಕಾಚಾರ ಹೇಗಿದೆ?
ಕ್ರಿಕೆಟ್ ಸಾಧನೆ
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಆಗಿ ಜಹೀರ್ ಖಾನ್ ಅಪಾರ ಸಾಧನೆ ಮಾಡಿದ್ದಾರೆ. 2011ರ ಏಕದಿನ ವಿಶ್ವಕಪ್ನಲ್ಲಿ ಮಪದಲ ಓವರ್ ಮೇಡನ್ ಎಸೆದು ಎದುರಾಳಿ ಲಂಕಾ ತಂಡದ ಮೇಲೆ ಒತ್ತಡ ಹೇರಿದ್ದರು. ಭಾರತ ಪರ 200 ಏಕದಿನ ಪಂದ್ಯ ಆಡಿರುವ ಅವರು 282 ವಿಕೆಟ್ ಕಬಳಿಸಿದ್ದಾರೆ. 92 ಟೆಸ್ಟ್ಗಳಿಂದ 311 ವಿಕೆಟ್, 17 ಟಿ20 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ. ಐಪಿಎಲ್ನಲ್ಲಿ ಭರ್ತಿ 100 ಪಂದ್ಯ ಆಡಿ 102 ವಿಕೆಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 610 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.