Site icon Vistara News

Zaheer Khan: ಟೀಮ್​ ಇಂಡಿಯಾ ಇನ್ನೂ ಹಳೆಯ ಬೋಟ್​ನಲ್ಲೇ ಪ್ರಯಾಣಿಸುತ್ತಿದೆ; ಜಹೀರ್​ ಖಾನ್​ ಹೀಗೆ ಹೇಳಿದ್ದು ಏಕೆ?

Zaheer Khan: Team India is still sailing in an old boat; Why did Zaheer Khan say this?

Zaheer Khan: Team India is still sailing in an old boat; Why did Zaheer Khan say this?

ಮುಂಬಯಿ: ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಭಾರತ ಸೋಲು ಕಂಡ ಬಳಿಕ ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಪ್ರದರ್ಶನದ ಬಗ್ಗೆ ಹಲವು ಕ್ರಿಕೆಟ್​ ಪಂಡಿತರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿಲು ಆರಂಭಿಸಿದ್ದಾರೆ. ಇದೀಗ ಈ ಸಾಲಿಗೆ 2011ರ ವಿಶ್ವ ಕಪ್(2019 World Cup)​ ವಿಜೇತ ತಂಡ ವೇಗಿ ಜಹೀರ್ ಖಾನ್​​(Zaheer Khan) ಕೂಡ ಸೇರಿದ್ದಾರೆ. ಇದೇ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​ಗೆ ತಯಾರಿ ನಡೆಸುತ್ತಿರುವ ಟೀಮ್ ಇಂಡಿಯಾ ಇನ್ನೂ ಹಳೆಯ ಬೋಟ್​ನಲ್ಲೇ ಪ್ರಯಾಣಿಸುತ್ತಿದೆ ಎಂದು ಹೇಳಿದ್ದಾರೆ.

ಕ್ರಿಕ್​ ಬಝ್​ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಜಹೀರ್ ಖಾನ್​ , “ಟೀಮ್​ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಖಂಡಿತವಾಗಿಯೂ ಮತ್ತೊಮ್ಮೆ ಚಿಂತಿಸುವ ಅಗತ್ಯವಿದೆ. ನಾಲ್ಕನೇ ಕ್ರಮಾಂಕದ ಆಯ್ಕೆಯ ಲೆಕ್ಕಾಚಾರ ಇನ್ನೂ ಬಗೆಹರಿದಿಲ್ಲ. ಇದು 2019ರ ವಿಶ್ವಕಪ್​ನಲ್ಲೂ ಚರ್ಚೆಗೆ ಕಾರಣವಾಗಿತ್ತು. ನಾಲ್ಕು ವರ್ಷಗಳ ಬಳಿಕವೂ ನಾವು ಅದೇ ದೋಣಿಯಲ್ಲಿದ್ದೇವೆ. ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದ ಆಟಗಾರ ಎಂದು ನನಗೆ ಗೊತ್ತು. ಆದರೆ ಅವರು ಈಗ ದೀರ್ಘಕಾಲದವರೆಗೆ ಗಾಯಗೊಂಡಿದ್ದರೆ. ಹೀಗಾಗಿ ಇದಕ್ಕೆ ಶೀಘ್ರದಲ್ಲೇ ಉತ್ತರ ಕಂಡುಕೊಳ್ಳಬೇಕಾದ ಸಮಯ ಬಂದಿದೆ” ಎಂದು ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಜಹೀರ್​ ಸಲಹೆಯೊಂದನ್ನು ನೀಡಿದ್ದಾರೆ.

ಭಾರತದ ಏಕದಿನ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಲ್ಲಿದ್ದ ಸೂರ್ಯಕುಮಾರ್ ಯಾದವ್(Suryakumar Yadav) ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ಸತತ ಮೂರು ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿದರು. ಇದು ಅವರ ಏಕದಿನ ಭವಿಷ್ಯದ ಮೇಲೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡಿದೆ. ಇನ್ನೊಂದೆಡೆ ಗಾಯದ ಸಮಸ್ಯೆಯೂ ಕಾಡುತ್ತಿದೆ. ಒಟ್ಟಾರೆ ಭಾರತದಲ್ಲಿ ಸದ್ಯ ಕೊಹ್ಲಿ ಮತ್ತು ರೋಹಿತ್​ ಅವರನ್ನು ಹೊರತುಪಡಿಸಿ ಇನಿಂಗ್ಸ್​ ಕಟ್ಟುವ ಆಟಗಾರರ ಕೊರತೆ ಎದ್ದು ಕಾಣುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ World Cup 2023 : ಟೀಕೆ ನಿಲ್ಲಿಸಿ, ವಿಶ್ವ ಕಪ್ ಗೆಲ್ಲಲಿದೆ ಭಾರತ ತಂಡ ಎಂದಿದ್ದಾರೆ ಮಾಜಿ ಹೆಡ್​​ ಕೋಚ್​

ನಾವು ವಿಶ್ವ ಕಪ್ ಗೆಲ್ಲುವ ಸಮಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಧೋನಿ, ಯುವರಾಜ್​ ಸಿಂಗ್​, ಸುರೇಶ್​ ರೈನಾ ಅವರಂತರ ಶ್ರೇಷ್ಠ ಆಟಗಾರರನ್ನು ಹೊಂದಿದ್ದೆವು. ಆದರೆ ಈಗ ಭಾರತದಲ್ಲಿ ಇಂತಹ ಮ್ಯಾಚ್​ ವಿನ್ನಿಂಗ್​ ಮತ್ತು ಇನಿಂಗ್ಸ್​ ಬೆಳೆಸುವ ಆಟಗಾರರ ಕೊರತೆ ಎದ್ದು ಕಾಣುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಾಣದ ಹೊರತು ಭಾರತ ವಿಶ್ವ ಕಪ್​ ಗೆಲ್ಲುವುದು ಅನುಮಾನ ಎಂದು ಜಹೀರ್​ ಖಾನ್​ ಅಭಿಪ್ರಾಯಪಟ್ಟರು.

Exit mobile version