ಹರಾರೆ: ಜಿಂಬಾಬ್ವೆ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದ ಶಫರ್ಡ್ ಮಕನುರಾ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ದೀರ್ಘ ಕಾಲದ ಅಸೌಖ್ಯಕ್ಕೆ ತುತ್ತಾಗಿದ್ದ ಅವರು ಜಿಂಬಾಬ್ವೆ ರಾಜಧಾನಿ ಹರಾರೆಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಂಬಾಬ್ವೆ ಕ್ರಿಕೆಟ್ ಕ್ಷೇತ್ರದ ಮೂಲಗಳು ತಿಳಿಸಿವೆ.
“ಜಿಂಬಾಬ್ವೆ ಕ್ರಿಕೆಟ್ ಕ್ಷೇತ್ರದ ರಿಯಲ್ ಹೀರೊ ಹಾಗೂ ಹಲವಾರು ಪ್ರತಿಭಾವಂತ ಕ್ರಿಕೆಟರ್ಗಳ ಬೆಳವಣಿಗೆಗೆ ಕಾರಣರಾಗಿದ್ದ ಅತ್ಯುತ್ತಮ ಕೋಚ್ ಒಬ್ಬರನ್ನು ನಾವು ಕಳೆದುಕೊಂಡಿದ್ದೇವೆ,”ಎಂಬುದಾಗಿ ಜಿಂಬಾಬ್ವೆ ಕ್ರಿಕೆಟ್ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರವಾಗಿರುವ ಗಿವ್ಮೋರ್ ಮಕೋನಿ ಟ್ವೀಟ್ ಮಾಡಿದ್ದಾರೆ.
ಮಕುನುರಾ ಅವರು ಕ್ರೀಡಾಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ನಾವಿಲ್ಲಿ ಸ್ಮರಿಸುತ್ತೇವೆ ಎಂಬುದಾಗಿಯೂ ಮಕೋನಿ ಬರೆದುಕೊಂಡಿದ್ದಾರೆ.
ಮಕುನುರಾ ಅವರ ಪತ್ನಿ ಸಿನಿಕಿವೆ ಮೊಫು ಕೂಡ ಜಿಂಬಾಬ್ವೆ ವನಿತೆಯರ ತಂಡದ ಪರ ಆಡಿದ್ದರು. ಇದೀಗ ಅವರು ಮಹಿಳೆಯರ ತಂಡಕ್ಕೆ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ | Karun Nair | ಕ್ರಿಕೆಟ್ನಲ್ಲಿ ಒಂದು ಅವಕಾಶ ನೀಡಿ; ಕರುಣ್ ನಾಯರ್ ಹತಾಶೆಯ ಟ್ವೀಟ್