Site icon Vistara News

IND vs Pak | ಭಾರತ ವಿರುದ್ಧ ಸೋತ ಪಾಕ್ ತಂಡವನ್ನು ಕಿಚಾಯಿಸಿದ ಫುಡ್‌ ಡೆಲಿವರಿ ಆಪ್‌ ಜೊಮ್ಯಾಟೊ

ನವ ದೆಹಲಿ: ಸಮಯ ನೋಡಿ ಆಕರ್ಷಕ ಟ್ವೀಟ್‌ಗಳನ್ನು ಮಾಡಿ ಗ್ರಾಹಕರನ್ನು ಸೆಳೆಯವುದು ಫುಡ್‌ ಡೆಲಿವರಿ App ಜೊಮ್ಯಾಟೊದ ತಂತ್ರಗಾರಿಕೆ. ಅಂತೆಯೇ ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ (IND vs Pak) ನಡುವಿನ ವಿಶ್ವ ಕಪ್‌ ಪಂದ್ಯದ ಬಳಿಕವೂ ಜೊಮ್ಯಾಟೊ, ಸೃಜನಾತ್ಮಕವಾಗಿರುವ ಟ್ವೀಟ್‌ ಮಾಡಿದ ಪಾಕಿಸ್ತಾನ ತಂಡದ ಕಾಲೆಳೆದಿದೆ. ಭಾರತ ಕ್ರಿಕೆಟ್‌ ತಂಡದ ಅಭಿಮಾನಿಗಳೂ ಅದಕ್ಕೆ ಧ್ವನಿ ಗೂಡಿಸಿದ್ದು, ಸೋಲಿನ ಬೇಸರದಲ್ಲಿರುವ ಪಾಕಿಸ್ತಾನ ತಂಡದ ಅಭಿಮಾನಿಗಳಿಗೆ ಲೇವಡಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಪರಾಕ್ರಮದಿಂದ ಭಾರತ ತಂಡ ಗೆಲುವು ಸಾಧಿಸಿದ ತಕ್ಷಣ ಟ್ವೀಟ್‌ ಮಾಡಿದ ಜೊಮ್ಯಾಟೊ, ಪಾಕಿಸ್ತಾನ ಮಾಡಿದ ಸೋಲಿನ ಆರ್ಡರ್ ತಲುಪಿದೆ. ವಿರಾಟ್‌ ಕೊಹ್ಲಿಯ ಸರ್ವಿಸ್‌ ಇನ್ನು ಎಂದು ಬರೆದುಕೊಂಡಿದೆ. ಮೊದಲೇ ಸೋಲಿನ ಬೇಸರದಲ್ಲಿದ್ದ ಪಾಕಿಸ್ತಾನದ ಅಭಿಮಾನಿ ಕರೀಮ್‌ ಎಂಬುವರಿಗೆ ಈ ಟ್ವೀಟ್ ಹಿಡಿಸಿಲ್ಲ. ಅದಕ್ಕೆ ಪ್ರತಿಕ್ರಿಯಿಸಿ, ”ನಮಗೆ ಮೋಸದ ದಿನ ಬೇಕಾಗಿಲ್ಲ,” ಎಂದು ಬರೆದಿದ್ದಾನೆ. ಈ ಮೂಲಕ ಅವರು ಕೊನೇ ಓವರ್‌ನಲ್ಲಿ ಅಂಪೈರ್‌ಗಳು ನೀಡಿರುವ ನೋ ಬಾಲ್ ನಿರ್ಧಾರ ಸರಿಯಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾನೆ.

ಜೊಮ್ಯಾಟೊ ಟ್ವೀಟ್‌ಗೆ ಧ್ವನಿಗೂಡಿಸಿಇರುವ ಭಾರತದ ಅನೇಕ ಅಭಿಮಾನಿಗಳು, “ಈ ಸಮಯದಲ್ಲಿ ನಿವು ರುಚಿಯನ್ನು ಬದಲಾಯಿಸಲು ಮರೆಯಬೇಡಿ. ಏಕೆಂದರೆ, ಅವರಿಗೆ (ಪಾಕಿಸ್ತಾನ) ಈ ಊಟ ಇಷ್ಟವಾಗದೆ ಇರಬಹುದು ಎಂದು ಮರು ಟ್ವೀಟ್ ಮಾಡಿದ್ದಾರೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಿಗೆ ೧೫೯ ರನ್‌ ಬಾರಿಸಿದ್ದರೆ, ಗುರಿ ಬೆನ್ನಟ್ಟಿದ ಭಾರತ ತಂಡ ಇನಿಂಗ್ಸ್‌ನ ಕೊನೇ ಎಸೆತದಲ್ಲಿ ರನ್‌ ಬಾರಿಸುವ ವಿಜಯದ ರನ್ ಬಾರಿಸಿ ಸಂಭ್ರಮಿಸಿತ್ತು.

ಇದನ್ನೂ ಓದಿ | IND vs PAK | ಟ್ರೋಲ್‌ ಮಾಡಿದ ಪಾಕ್‌ ಕ್ರಿಕೆಟ್‌ ಅಭಿಮಾನಿ ಬಾಯ್ಮುಚ್ಚಿಸಿದ ಗೂಗಲ್‌ ಸಿಇಒ ಪಿಚೈ

Exit mobile version