Site icon Vistara News

Heavy Rain: ಗಂಗಾವತಿಯಲ್ಲಿ ಭಾರೀ ಬಿರುಗಾಳಿ ಮಳೆಗೆ ಬಾಳೆ, ಮಾವು, ಮನೆಗಳಿಗೆ ಹಾನಿ

Bananas mangoes crops and houses damaged due to heavy rain in Gangavathi

ಗಂಗಾವತಿ: ಬುಧವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ ಮತ್ತು ಮಳೆಗೆ (Heavy Rain) ತಾಲೂಕಿನಲ್ಲಿ ಅಪಾರ ಪ್ರಮಾಣದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವ ಘಟನೆ ಜರುಗಿದೆ. ತಾಲೂಕಿನ ಸಣಾಪುರ, ಆನೆಗೊಂದಿ, ಮಲ್ಲಾಪುರ ಸೀಮೆಯಲ್ಲಿ ಬೆಳೆಯಲಾಗಿದ್ದ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬಾಳೆ ಬೆಳೆಗೆ ಹಾನಿಯಾಗಿದೆ. ವೆಂಕಟಗಿರಿ ಹೋಬಳಿಯ ಬಸವಪಟ್ಟಣ, ವಡ್ಡರಹಟ್ಟಿ, ಬೆಣಕಲ್ ಸೇರಿದಂತೆ ನಾನಾ ಗ್ರಾಮಗಳಲ್ಲಿನ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿನ ಮಾವು ಬೆಳೆಗೆ ಹಾನಿಯಾಗಿದೆ.

ಬಾಳೆ- ಮಾವು ಹಾನಿ

ತಡರಾತ್ರಿ ಬೀಸಿದ ಭಾರೀ ಪ್ರಮಾಣದ ಬಿರುಗಾಳಿಗೆ ಆನೆಗೊಂದಿ ಭಾಗದಲ್ಲಿ ಬಾಳೆ ಗಿಡಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ. ಸಣಾಪುರ, ಆನೆಗೊಂದಿ, ಮಲ್ಲಾಪುರ ಸೀಮೆಯಲ್ಲಿ ಬೆಳೆಯಲಾಗಿದ್ದ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬಾಳೆಗೆ ಹಾನಿ ಉಂಟಾಗಿದೆ.

ಇದನ್ನೂ ಓದಿ: Pejawar Swamiji: ದೇವಾಲಯಗಳ ಆಡಳಿತ ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸಬೇಕು: ಪೇಜಾವರ ಶ್ರೀ

ವೆಂಕಟಗಿರಿ ಹೋಬಳಿಯ ಬಸವಪಟ್ಟಣ, ವಡ್ಡರಹಟ್ಟಿ, ಬೆಣಕಲ್ ಸೇರಿದಂತೆ ನಾನಾ ಗ್ರಾಮಗಳಲ್ಲಿನ ನೂರಾರು ಹೆಕ್ಟೇರು ಪ್ರದೇಶದಲ್ಲಿನ ಮಾವು ಬೆಳೆಗೆ ಹಾನಿಯಾಗಿದೆ. ಭಾರೀ ಬಿರುಗಾಳಿಗೆ ಗಿಡದಲ್ಲಿನ ಮಾವುಗಳು ಉದುರು ಬಿದ್ದಿದ್ದು ಲಕ್ಷಾಂತರ ರೂಪಾಯಿ ಮೊತ್ತದ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬುಧವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ ಸಮೇತ ಮಳೆಗೆ ಗಂಗಾವತಿ ನಗರದ ವಿವಿಧೆಡೆ ದೊಡ್ಡ ಮರಗಳ ಕೊಂಬೆಗಳು ತುಂಡಾಗಿ ರಸ್ತೆಗೆ ಬಿದ್ದ ಪರಿಣಾಮ ಕೆಲಕಾಲ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು.

ನಗರದ ಅಂಗಡಿ ಸಂಗಣ್ಣ ಕ್ಯಾಂಪ್, ಮಹೆಬೂಬನಗರ, ಗೌಸಿಯಾ ಕಾಲೋನಿ, ಎಚ್.ಆರ್.ಎಸ್. ಕ್ಯಾಂಪ್, ಅಣ್ಣೂರು ಗೌರಮ್ಮಕ್ಯಾಂಪ್, ಲಿಂಗರಾಜ ಕ್ಯಾಂಪ್ ಮತ್ತು ಶರಣಬಸವೇಶ್ವರ ನಗರದಲ್ಲಿ ಕೆಲ ತಗಡಿನ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

ಜಂಟಿ ಸಮೀಕ್ಷೆ

ಬುಧವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ, ಮಳೆಗೆ ಆನೆಗೊಂದಿ ಭಾಗದಲ್ಲಿ ಬಾಳೆ ನಾಶವಾಗಿರುವ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಕಂದಾಯ ಮತ್ತು ತೋಟಗಾರಿಕಾ ಇಲಾಖೆಯ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಹಾನಿಯ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಯು. ನಾಗರಾಜ್ ತಿಳಿಸಿದ್ದಾರೆ.

Exit mobile version