ದಾವಣಗೆರೆ: ರಾಜ್ಯಾದ್ಯಂತ ಮಳೆಯು (Karnataka Rain) ಅಬ್ಬರಿಸುತ್ತಿದ್ದರೂ, ಅದೊಂದು ಗ್ರಾಮಕ್ಕೆ ಮಾತ್ರ ಈವರೆಗೆ ಮಳೆಯೇ (No Rain) ಆಗಿಲ್ಲ. ಮುಂಗಾರು ಸಂಪೂರ್ಣವಾಗಿ ಆವರಿಸಿದ್ದರೂ, ದಾವಣಗೆರೆಯ ಆ ಗ್ರಾಮದಲ್ಲಿ (Davanagere News ) ಮಳೆ ಇಲ್ಲದೇ ಬರೆ ಎಳದಂತಾಗಿದೆ. ಮಳೆ ಇಲ್ಲದೆ ಜನರಲ್ಲಿ ಆತಂಕ ಶುರುವಾಗಿದ್ದು, ಇದೀಗ ಮುನಿಸಿಕೊಂಡಿರುವ ವರುಣ ದೇವನಿಗಾಗಿ ಕಂತೆ ಭಿಕ್ಷೆ ಎತ್ತುತ್ತಿದ್ದಾರೆ.
ಮಳೆ ಬಾರದೆ ಇದ್ದಾಗ ಹಿಂದಿನ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಮಳೆರಾಯ ನಾಪತ್ತೆಯಾಗಿದ್ದಾನೆ. ಹೀಗಾಗಿ ಮಳೆಗಾಗಿ ಕಂತೆ ಭಿಕ್ಷೆ ಎತ್ತುತ್ತಿದ್ದಾರೆ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮಳೆ ಬರುತ್ತಿದ್ದರೆ, ಈ ಗ್ರಾಮದಲ್ಲಿ ಮಳೆಯೇ ಆಗುತ್ತಿಲ್ಲ. ಬಾರದ ಮಳೆಯಿಂದಾಗಿ ರೈತರು ಸೇರಿ ಗ್ರಾಮದ ಜನರು ಕಂಗಲಾಗಿದ್ದಾರೆ.
ಮಳೆಗಾಗಿ ದೇವರ ಮೊರೆ ಹೋಗಿರುವ ಗ್ರಾಮಸ್ಥರು ಕಂತೆ ಭಿಕ್ಷೆ ಎತ್ತುತ್ತಿದ್ದಾರೆ. ಮನೆ ಮನೆಗೆ ತೆರಳಿ ಕಂತೆ ಭಿಕ್ಷೆ ಬೇಡಿ ಸಾಮೂಹಿಕ ಪ್ರಸಾದ ಮಾಡಲಿದ್ದಾರೆ. ಗ್ರಾಮದಿಂದ ದೀಕ್ಷೆ ಪಡೆದ ಮುರುಘಾಸ್ವಾಮಿಗಳ ನೇತೃತ್ವದಲ್ಲಿ ಸತತ ಐದು ದಿನಗಳ ಕಾಲ ಭಿಕ್ಷಾಟನೆ ಮಾಡಲಾಗುತ್ತದೆ. ನಂತರ ಸಾಮೂಹಿಕ ಪ್ರಸಾದ ಸೇವನೆ ಮಾಡಲಾಗುತ್ತದೆ. ಈ ರೀತಿ ಆಚರಣೆಯಿಂದ ಮಳೆ ಬರುತ್ತೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು
ಸಮುದ್ರಕ್ಕೆ ಇಳಿಯದಂತೆ ಸೂಚನೆ
ಉಡುಪಿ: ಜಿಲ್ಲೆಯಲ್ಲಿ 3 ದಿನ ನಿರಂತರವಾಗಿ ಸುರಿದ ಮಳೆಗೆ ಇಂದು ಕೊಂಚ ಬಿಡುವು ಸಿಕ್ಕಿದೆ. ಹೀಗಾಗಿ ವೀಕೆಂಡ್ ಎಂಜಾಯ್ ಮಾಡಲು ಪ್ರವಾಸಿಗರರ ದಂಡು ಬೀಚ್ ಕಡೆಗೆ ಮುಖ ಮಾಡಿದೆ. ಆದರೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಉಡುಪಿ ಜಿಲ್ಲೆಯ ಕಾಪು ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸಮುದ್ರ ದಡದಲ್ಲಿಯೇ ಸೆಲ್ಫಿ ತೆಗೆದು ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ. ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ಸ್ ಎಚ್ಚರಿಕೆ ನೀಡುತ್ತಿದ್ದು, ಬೀಚ್ ಉದ್ದಕ್ಕೂ ಕಣ್ಗಾವಲು ಇಟ್ಟಿದ್ದಾರೆ. ಹೀಗಾಗಿ ಪ್ರವಾಸಿಗರು ದೂರದಲ್ಲಿಯೇ ನಿಂತು ಕಡಲಬ್ಬರವನ್ನು ವೀಕ್ಷಿಸುತ್ತಿದ್ದಾರೆ. ಮಳೆ ನಿಂತ ಹಿನ್ನೆಲೆಯಲ್ಲಿ ಬೀಚ್‌ನಲ್ಲಿ ಸಮಯ ಕಳೆಯುವ ಉದ್ದೇಶದಿಂದ ಆಗಮಿಸಿದ ಪ್ರವಾಸಿಗರು ನಿರಾಸೆಯಿಂದ ವಾಪಸಾಗುತ್ತಿದ್ದಾರೆ.
ಸಮುದ್ರ ಪಾಲಾಗುತ್ತಿರುವ ಮೀನುಗಾರಿಕ ರಸ್ತೆ
ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಕಡಲು ಪ್ರಕ್ಷಬ್ಧಗೊಂಡಿದ್ದು, ಪಡುಕರೆ ಬೀಚ್‌ನಲ್ಲಿ ಅಬ್ಬರಿಸುತ್ತಿರುವ ರಕ್ಕಸಗಾತ್ರದ ಅಲೆಗಳಿಂದಾಗಿ ಮೀನುಗಾರಿಕ ರಸ್ತೆ ಸಮುದ್ರ ಪಾಲಾಗುತ್ತಿದೆ. ಸಮುದ್ರದ ಅಲೆಗಳ ಅಬ್ಬರ ಜಾಸ್ತಿಯಾದರೆ ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ. ಗಾಳಿ ಮಳೆಯಿಂದಾಗಿ ಅರಬ್ಬಿ ಸಮುದ್ರ ಅಬ್ಬರಿಸುತ್ತಿದೆ. ಈಗಾಗಲೇ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Rain News: ಭಾರಿ ಮಳೆ ಹಿನ್ನೆಲೆ, ಜಲಪಾತ ವೀಕ್ಷಣೆ- ಟ್ರೆಕ್ಕಿಂಗ್‌ಗೆ ನಿರ್ಬಂಧ; ಈ ತಾಣಗಳಿಗೆ ಹೋಗಬೇಡಿ!
ಕಲಬುರಗಿಯಲ್ಲೂ ಮಳೆಯ ಅಬ್ಬರ
ಇನ್ನು ಕಲಬುರಗಿಯಲ್ಲಿ ಶನಿವಾರ ರಾತ್ರಿಯಿಡಿ ವರ್ಷಧಾರೆಯಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಫಜಲಪುರ ತಾಲೂಕಿನಲ್ಲಿ ಸಿದ್ದನೂರ್‌ನಿಂದ ರೆವೂರ್‌ಗೆ ಹೋಗುವ ಮಾರ್ಗದ ಬಳಿ ಇರುವ ಹಳ್ಳದಲ್ಲಿ ನೀರಿನ ಪ್ರಮಾನ ಹೆಚ್ಚಾಗಿದ್ದು, ಪ್ರಯಾಣಿಕರ ಪರದಾಡುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ