ಬೆಂಗಳೂರು: ಗಡಿಯಾರದಲ್ಲಿ ದೊಡ್ಡ ಮುಳ್ಳು ಹತ್ತಕ್ಕೆ ಬಂದರೆ ಸಾಕು ಸೂರ್ಯ ಜನರ ನೆತ್ತಿ ಸುಡಲು ಶುರು ಮಾಡುತ್ತಾನೆ. ರಾಜ್ಯಾದ್ಯಂತ ಒಣ ಹವೆ (Dry weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.
ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಇದರಿಂದಾಗಿ ಬಿಸಿಲ ಧಗೆಯು ಹೆಚ್ಚಾಗಿ ಇರಲಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಸಿಲ ತೀವ್ರತೆ ಹೆಚ್ಚಿರಲಿದೆ. ಕೆಲವೊಮ್ಮೆ ಬಿಸಿ ಗಾಳಿಯು ಬೀಸಲಿದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Forced Conversion : ಆಪರೇಶನ್ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್ ವಾಶ್
ಬೆಳಗಾವಿಯಲ್ಲಿ ಕಡಿಮೆ ತಾಪಮಾನ
ರಾಜ್ಯದಲ್ಲಿ ಗುರುವಾರ ಒಣ ಹವೆ ಇತ್ತು. ಅತೀ ಕಡಿಮೆ ಕನಿಷ್ಠ ಉಷ್ಣಾಂಶ 14.6 ಡಿ.ಸೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿತ್ತು. ಹಾಸನ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 14.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 37.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇನ್ನೂ ಹಾಸನ, ಬೆಳಗಾವಿ, ಚಿಕ್ಕಮಗಳೂರಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ನಿಂದ 13 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ಹಾವೇರಿ, ಕಲಬುರಗಿ ಮತ್ತು ರಾಯಚೂರಿನ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ನಿಂದ 40 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: Road Accident : ಡಿವೈಡರ್‌ಗೆ ಕಾರು ಡಿಕ್ಕಿ; ದುಬೈನಲ್ಲಿ ನಡೆದ ಅಪಘಾತದಲ್ಲಿ ಉಳ್ಳಾಲದ ಯುವತಿ ಮೃತ್ಯು
ದಿನದ ಯಾವ ಸಮಯದಲ್ಲಿ ನಾವು ನೀರು ಕುಡಿಯಬೇಕು?
ಮಳೆಗಾಲ, ಚಳಿಗಾಲ, ಬೇಸಿಗೆಯೇ ಇರಲಿ, ನೀರು ಮಾತ್ರ ಕುಡಿಯುವುದು ಬಹಳ ಮುಖ್ಯ ಎಂಬ ಆರೋಗ್ಯ ಸಲಹೆಯನ್ನು ಎಲ್ಲರೂ ಕೇಳಿಯೇ ಇರುತೀರಿ. ನೀರು ಕುಡಿಯದಿದ್ದರೆ ನಮ್ಮ ದೇಹ ಅದನ್ನು ಬೇಡುತ್ತದೆ. ನೀರು ಕುಡಿದಿಲ್ಲ ಎಂಬುದನ್ನು ದೇಹ ನಾನಾ ವಿಧದಲ್ಲಿ ನಮಗೆ ಹೇಳಿ ತೋರಿಸುತ್ತದೆ. ದೇಹ ಸಮರ್ಪಕವಾಗಿ ಎಲ್ಲ ಕೆಲಸವನ್ನೂ ಮಾಡಲು ನೀರು ಬೇಕೇ ಬೇಕು. ಇಲ್ಲವಾದರೆ, ಏನಾದರೊಂದು ಆರೋಗ್ಯ ವ್ಯತ್ಯಯ ಕಾಣಿಸುತ್ತದೆ. ಹಾಗಂತ ಅತಿಯಾಗಿ ನೀರು ಕುಡಿಯುವುದೂ ಕೂಡಾ ಒಳ್ಳೆಯದಲ್ಲ. ಹಿತಮಿತವಾದ ಪ್ರಮಾಣದಲ್ಲಿ ನೀರು ಕುಡಿಯಲೇಬೇಕು. ಆದರೆ, ಬಹಳಷ್ಟು ಮಂದಿಯಲ್ಲಿ, ನೀರು ಕುಡಿಯುವ ಬಗೆಗೆ ಹಲವು ಗೊಂದಲಗಳಿವೆ. ಯಾವಾಗ ಕುಡಿದರೆ ಒಳ್ಳೆಯದು, ಯಾವಾಗ ಕುಡಿಯಬಾರದು ಎಂಬಿತ್ಯಾದಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರಕುವುದಿಲ್ಲ. ಬನ್ನಿ, ನೀರು ಯಾವೆಲ್ಲ ಸಮಯದಲ್ಲಿ ಕುಡಿಯುವುದು ಒಳ್ಳೆಯದು (Best Times To Drink Water) ಎಂಬುದನ್ನು ನೋಡೋಣ.
ಬೆಳಗ್ಗೆ ನೀರು ಕುಡಿಯುವುದು ಸೂಕ್ತ
ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದು ಒಳ್ಳೆಯದು. ನಮ್ಮ ಹೊಟ್ಟೆ ರಾತ್ರಿಯಿಡೀ ಖಾಲಿಯಿದ್ದು, ಮತ್ತೆ ಜೀರ್ಣಕ್ರಿಯೆಯನ್ನು ಚುರುಕಾಗಿಸಬೇಕೆಂದರೆ ಮೊದಲು ನೀರು ಕುಡಿಯುವುದು ಒಳ್ಳೆಯದು. ಹದ ಬಿಸಿಯಾದ ನೀರು ಕುಡಿಯುವುದು ಇನ್ನೂ ಒಳ್ಳೆಯದು. ಅಥವಾ, ಬಿಸಿನೀರಿಗೆ ಒಂದು ಚಮಚ ತುಪ್ಪ ಹಾಕಿ ಕುಡಿಯಬಹುದು. ಅಥವಾ ನಿಂಬೆಹಣ್ಣು ಹಿಂಡಿ ಕುಡಿಯಬಹುದು. ಜೀರಿಗೆ ಹಾಕಿದ ನೀರು, ಜೇನುತುಪ್ಪ ಹಾಕಿದ ನೀರು ಹೀಗೆ ಬಗೆಬಗೆಯ ನೀರನ್ನು ಬೆಳಗ್ಗೆ ಸೇವಿಸಬಹುದು. ಚಕ್ಕೆ ಪುಡಿ ಸೇರಿಸಿದ ನೀರು ಕುಡಿಯುವುದೂ ಕೂಡಾ ಒಳ್ಳೆಯದೇ. ಎದ್ದ ಕೂಡಲೇ ಚಹಾ ಕುಡಿಯುವ ಮೊದಲು ಹೀಗೆ ನೀರು ಕುಡಿಯುವ ಮೂಲಕ ಜೀರ್ಣಕ್ರಿಯೆ ಚುರುಕಾಗಿಸಿ, ಮಲವಿಸರ್ಜನೆ ಸರಾಗವಾಗಿ ಆಗುವಂತೆ ಮಾಡಬಹುದು.
ಊಟಕ್ಕೆ ಮೊದಲು ನೀರು ಕುಡಿಯಿರಿ
ಊಟಕ್ಕೆ ಮೊದಲು ಅಂದರೆ ಸುಮಾರು ಅರ್ಧ ಗಂಟೆ ಮೊದಲು ನೀರು ಕುಡಿಯುವುದು ಒಳ್ಳೆಯದು. ಇದು ಜೀರ್ಣಾಂಗವ್ಯೂಹವನ್ನು ಮುಂದಿನ ಜೀರ್ಣಕ್ರಿಯೆಗೆ ತಯಾರು ಮಾಡುತ್ತದೆ. ಆದರೆ, ಊಟಕ್ಕೆ ತಕ್ಷಣ ಮೊದಲು ನೀರು ಕುಡಿಯಬೇಡಿ. ಊಟಕ್ಕೆ ಕನಿಷ್ಟ 30 ನಿಮಿಷ ಮೊದಲು ನೀರು ಕುಡಿದು ಆಮೇಲೆ ಖಾಲಿ ಬಿಡಿ. ಕೆಲವು ಸಂಶೋಧನೆಗಳ ಪ್ರಕಾರ ಊಟಕ್ಕೆ ಸುಮಾರು ಅರ್ಧ ಗಂಟೆ ಮೊದಲು ಅರ್ಧ ಲೀಟರ್ ನೀರನ್ನು ಸುಮಾರು 12 ವಾರಗಳ ಕಾಲ ಸತತವಾಗಿ ಮಾಡಿದ ಮಂದಿಗೆ ತಮ್ಮ ತೂಕದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆಯಂತೆ. ಕೊಬ್ಬು ಕರಗಿಸಲು ಇದು ಅತ್ಯುತ್ತಮ ವಿಧಾನ.
ಮಲಗುವ ಮೊದಲು ನೀರು ಕುಡಿಯಿರಿ
ಮಲಗುವ ಮೊದಲು ನೀರು ಕುಡಿಯಿರಿ. ಮಲಗುವ ಸಂದರ್ಭ ನೀರು ಕುಡಿದರೆ, ಇಡೀ ರಾತ್ರಿ ದೇಹದ ಚಯಾಪಚಯ ಕ್ರಿಯೆಗೆ ಬೇಕಾದ ನೀರು ಸಿಗುತ್ತದೆ. ಇದರಿಂದ ಹೃದಯಾಘಾತದಂತಹ ಅಪಾಯವೂ ತಪ್ಪುವ ಸಾಧ್ಯತೆಗಳಿವೆ. ಇದು ರಾತ್ರಯಿಡೀ ದೇಹಕ್ಕೆ ಬೇಕಾದ ತೇವಾಂಶವನ್ನು ನೀಡುವುದಲ್ಲದೆ, ದೇಹಕ್ಕೆ ಬೇಡವಾದ ಕಶ್ಮಲಗಳನ್ನು ಹೊರಕ್ಕೆ ಕಳಿಸುತ್ತದೆ.
ಸ್ನಾನಕ್ಕೆ ಮೊದಲು ನೀರು ಕುಡಿಯಿರಿ
ಸ್ನಾನಕ್ಕೆ ಮೊದಲು ಬಿಸಿನೀರು ಕುಡಿಯುವುದು ಅತ್ಯಂತ ಒಳ್ಳೆಯದು. ತಮಾಷೆಯಾಗಿ ಕಂಡರೂ ಇದು ಸತ್ಯ. ವೈದ್ಯರು ಹೇಳುವಂತೆ, ಸ್ನಾನದ ಸಮಯದಲ್ಲಿ ದೇಹದಲ್ಲಿ ರಕ್ತದೊತ್ತಡ ಇಳಿಯುತ್ತದೆ. ಬಿಸಿನೀರು ಕುಡಿದರೆ ದೇಹದ ಒಳಗೆ ಬೆಚ್ಚಗೆ ಇರುತ್ತದೆ. ಇದರಿಂದ ಇದೇ ಉಷ್ಣತೆಯು ಚರ್ಮದ ಮೇಲೂ ಇರಲು ಸಹಾಯವಾಗುತ್ತದೆ. ಹೀಗಾಗಿ ರಕ್ತದೊತ್ತಡದ ಅಸಮತೋಲನದಂತಹ ಸಮಸ್ಯೆ ಬರುವುದಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ