ಬೆಂಗಳೂರು: ಒಂದು ತಿಂಗಳಿಗೂ ಮೊದಲೇ ಬಿರುಬೇಸಿಗೆಯ ಬಿಸಿಲಿನ ಅನುಭವ (Karnataka Weather Forecast) ಕಾಡುತ್ತಿದೆ. ರಾಜ್ಯಾದ್ಯಂತ ಶುಷ್ಕ ವಾತಾವರಣ (Dry Weather) ಮುಂದುವರಿದಿದೆ. ತಂಪು ವಾತಾವರಣ ಮಾಯವಾಗಿ, ಬಿಸಿಲ ಧಗೆ ಹೆಚ್ಚಾಗುತ್ತಿದೆ.
ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಮನಾರ್ಹವಾಗಿ ಕನಿಷ್ಠ ಉಷ್ಣಾಂಶವು 5 ಡಿ.ಸೆಕ್ಕಿಂತ ಹೆಚ್ಚು ಇದ್ದರೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3 ಡಿ.ಸೆ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ರಾಜಧಾನಿ ಬೆಂಗಳೂರಲ್ಲಿ ಆಕಾಶವು ನಿರ್ಮಲವಾಗಿರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 17 ಡಿ.ಸೆ ಇರಲಿದೆ. ಮುಂಜಾನೆ ಮಂಜಿನಿಂದ ವಾತಾವರಣ ಇದ್ದರೆ, ಮಧ್ಯಾಹ್ನ ಬಿಸಿಲ ತಾಪ ಹೆಚ್ಚಾಗಿರಲಿದೆ. ರಾತ್ರಿಯಂದು ಬಿಸಿ ಗಾಳಿ ಬೀಸಲಿದೆ.
ತಾಪಮಾನದಲ್ಲಿ ಏರಿಳಿತ
ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಬಿಸಿಲ ಧಗೆ ಇನ್ನಷ್ಟು ಹೆಚ್ಚಾಗಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಇದನ್ನೂ ಓದಿ:Murder case: ವಿವಾಹಿತೆಯ ಮೋಹಿಸಿ ಹತ್ಯೆಯಾದ ಲಾರಿ ಚಾಲಕ
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 33 ಡಿ.ಸೆ -17 ಡಿ.ಸೆ
ಮಂಗಳೂರು: 34 ಡಿ.ಸೆ – 23 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 18 ಡಿ.ಸೆ
ಗದಗ: 35 ಡಿ.ಸೆ – 19 ಡಿ.ಸೆ
ಹೊನ್ನಾವರ: 34 ಡಿ.ಸೆ- 20 ಡಿ.ಸೆ
ಕಲಬುರಗಿ: 37 ಡಿ.ಸೆ – 24 ಡಿ.ಸೆ
ಬೆಳಗಾವಿ: 34ಡಿ.ಸೆ – 20 ಡಿ.ಸೆ
ಕಾರವಾರ: 35 ಡಿ.ಸೆ – 21 ಡಿ.ಸೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ