Site icon Vistara News

Karnataka Weather : ಇಂದಿನಿಂದ ಮಾರ್ಚ್‌ 14ರವರೆಗೆ ರಾಜ್ಯಾದ್ಯಂತ ಒಣಹವೆ ಸಾಧ್ಯತೆ

Dry weather continues across the state

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಾರ್ಚ್‌ 8 ರಿಂದ 14ರವರೆಗೆ ಶುಷ್ಕ ವಾತಾವರಣ (Dry Weather) ಇರಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ತಾಪಮಾನದ ಮುನ್ಸೂಚನೆಯನ್ನೂ ನೀಡಲಾಗಿದ್ದು, ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಲ್ಲಿ ಗರಿಷ್ಠ ತಾಪಮಾನವು 38-40 ಡಿ.ಸೆ ತಲುಪುವ ಸಾಧ್ಯತೆ ಇದೆ ಎಚ್ಚರಿಕೆ ನೀಡಲಾಗಿದೆ.

ಮಾರ್ಚ್‌ 10ರವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Love Case: ಪ್ರೀತಿಸಿದವಳು ದೂರಾದಳೆಂದು ಮನನೊಂದ; ಕತ್ತರಿಯಿಂದ ತಿವಿದುಕೊಂಡು ಯುವಕ ಸಾವು

ಜಲಾಶಯದ ನೀರಿನ ಮಟ್ಟ

ಉಳಿದೆಡೆ ಹೇಗಿತ್ತು ವಾತಾವರಣ?

ಗುರುವಾರದಂದು ರಾಜ್ಯಾದ್ಯಂತ ಒಣ ಹವೆ ಇತ್ತು. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಗರಿಷ್ಠ ಉಷ್ಣಾಂಶ 39.1 ಡಿ.ಸೆ ಕಲಬುರಗಿಯಲ್ಲಿ ದಾಖಲಾಗಿತ್ತು. ಅತೀ ಕನಿಷ್ಠ ಉಷ್ಣಾಂಶ 15.8 ಡಿ.ಸೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿತ್ತು.

Bindas look is a woman's outlook

ಕೋಲಾರ, ಬೆಳಗಾವಿ, ಹಾಸನ, ಬೀದರ್, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 13.7 ಡಿಗ್ರಿ ಸೆಲ್ಸಿಯಸ್‌ನಿಂದ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಾವೇರಿ, ರಾಯಚೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ನಿಂದ 42.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇದನ್ನೂ ಓದಿ: Road Accident : ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ; ಮಾಜಿ ಶಾಸಕ ವಿಎಸ್ ಪಾಟೀಲ್‌ಗೆ ಗಾಯ

ವುಮೆನ್ಸ್ ಡೇ ಫ್ಯಾಷನ್‌ಗೆ 5 ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್

ಮಹಿಳಾ ದಿನಾಚಾರಣೆಗೂ (women’s day 2024) ಸ್ಟೈಲಿಂಗ್‌ಗೂ ಏನು ಸಂಬಂಧ ಎಂದುಕೊಳ್ಳುತ್ತಿದ್ದೀರಾ! ಖಂಡಿತಾ ಇದೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಥವಾ ನಿಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಈ ದಿನದಂದು ನಿಮ್ಮ ಸ್ಟೈಲಿಂಗ್‌ ಇದ್ದಾಗ ಮಾತ್ರ ನಿಮ್ಮ ಇಮೇಜ್‌ಗೆ ಘನತೆ ತಂದುಕೊಡಬಲ್ಲದು. ಆಕರ್ಷಕವಾಗಿ ಕಾಣಿಸಬಹುದು. ಅದಕ್ಕಾಗಿ ಈ 5 ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.
“ಉದ್ಯೋಗಸ್ಥ ಮಹಿಳೆಯರು, ಹೋಮ್‌ ಮೇಕರ್ಸ್, ಕಾರ್ಪೋರೇಟ್‌ ಕ್ಷೇತ್ರದವರು, ಸ್ಪೋಟ್ಸ್, ಸಾಂಸ್ಕೃತಿಕ, ಕಲಾವಿದರು ಹೀಗೆ ಎಲ್ಲಾ ಕ್ಷೇತ್ರದ ಮಹಿಳೆಯರು ಅವರವರ ಕಾರ್ಯ ನಿರ್ವಹಣಾ ವಾತಾವರಣಕ್ಕೆ ಸಂಬಂಧಿಸಿದಂತೆ ಸ್ಟೈಲಿಂಗ್‌ ಫಾಲೋ ಮಾಡಬೇಕು” ಎನ್ನುತ್ತಾರೆ ಸ್ಟೈಲಿಸ್ಟ್ ಸಂಧ್ಯಾ ಶರ್ಮಾ ಅವರ ಪ್ರಕಾರ, ಮಹಿಳಾ ದಿನಾಚರಣೆ ಎಂದಾಕ್ಷಣ, ಯಾರೂ ಸೀರಿಯಸ್‌ ಲುಕ್‌ ನೀಡುವ ಸ್ಟೈಲಿಂಗ್‌ ಎಂದುಕೊಳ್ಳಬಾರದು ಎನ್ನುತ್ತಾರೆ.

ಸಾಮಾಜಿಕ ಕಳಕಳಿಯ ಕಾರ್ಯಕ್ರಮವಾದಲ್ಲಿ ಹೀಗೆ ಮಾಡಿ

ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವಿರಾದಲ್ಲಿ, ಆದಷ್ಟೂ ಸೀರೆ ಇಲ್ಲವೇ ಕುರ್ತಾಗೆ ಪ್ರಾಮುಖ್ಯತೆ ನೀಡಬೇಕು. ಎಥ್ನಿಕ್‌ ಲುಕ್‌ಗೆ ಆದ್ಯತೆ ನೀಡುವುದು ಉತ್ತಮ. ಹಾಗೆಂದು ಭಾರಿ ರೇಷ್ಮೆ ಸೀರೆ ಹಾಗೂ ವೆಡ್ಡಿಂಗ್‌ ಲುಕ್‌ ನೀಡುವ ಔಟ್‌ಫಿಟ್ಸ್ ಬೇಡ. ಕಾಟನ್‌ ಸೀರೆಗೆ ಪ್ರಾಮುಖ್ಯತೆ ನೀಡಿ.

ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರ ಔಟ್‌ಫಿಟ್ಸ್

ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರಾದಲ್ಲಿ ವೆಸ್ಟರ್ನ್ ಅಥವಾ ಫಾರ್ಮಲ್‌ಪ್ಯಾಂಟ್‌ ಸೂಟ್‌ ಧರಿಸಬಹುದು. ಟ್ರೆಂಡಿ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಈ ಕ್ಷೇತ್ರದವರಿಗೆ ಹೆಚ್ಚಿದೆ ಎನ್ನಬಹುದು.

ವುಮೆನ್ಸ್ ಡೇ ಪಾರ್ಟಿ ಡ್ರೆಸ್‌ಕೋಡ್ಸ್

ಸಾಕಷ್ಟು ವುಮೆನ್ಸ್ ಕ್ಲಬ್‌ ಹಾಗೂ ಅಸೋಸಿಯೇಷನ್‌ನವರು ನಡೆಸುವ ಗೆಟ್‌ ಟುಗೆದರ್‌ ಅಥವಾ ಲಂಚ್‌, ಬ್ರಂಚ್‌ ಅಥವಾ ನೈಟ್‌ ಪಾರ್ಟಿಗಳಿಗೆ, ಅಲ್ಲಿ ನಿರ್ಧರಿಸಿದ ಡ್ರೆಸ್‌ಕೋಡ್‌ ಫಾಲೋ ಮಾಡಬೇಕಾಗುತ್ತದೆ. ಯೂನಿಫಾರ್ಮಿಟಿಗೆ ಪ್ರಾಮುಖ್ಯತೆ ನೀಡುವುದರಿಂದ ಎಲ್ಲರೂ ಒಂದೇ ರೀತಿಯಲ್ಲಿ ಕಂಡರೂ ಕಾಣಬಹುದು.

ಸಂಘ-ಸಂಸ್ಥೆಗಳ ಕಾರ್ಯಕ್ರಮದಲ್ಲಿ ಯೂನಿಫಾರ್ಮ್ ಸೀರೆ ಲುಕ್‌

ಒಂದೇ ಬಗೆಯ ಯೂನಿಫಾರ್ಮ್‌ನಂತಹ ಸೀರೆಗಳು ಬಹುತೇಕ ಸಂಘ-ಸಂಸ್ಥೆಗಳ ಡ್ರೆಸ್‌ಕೋಡ್‌ನಲ್ಲಿರುತ್ತವೆ. ಒಂದೇ ಬಗೆಯ ಸೀರೆಗಳನ್ನು ಧರಿಸಿಯೂ ಡಿಫರೆಂಟ್‌ ಲುಕ್‌ ಬೇಕಾಗಿದ್ದಲ್ಲಿ, ಡಿಸೈನರ್‌ ಬ್ಲೌಸ್‌ ಅಥವಾ ಹೈ ಕಾಲರ್‌ ನೆಕ್‌ ಸೇರಿದಂತೆ ಡಿಸೈನ್‌ನ ಬ್ಲೌಸ್‌ ಧರಿಸಬಹುದು. ಸೀರೆಯನ್ನು ಡಿಫರೆಂಟ್‌ ಆಗಿ ಡ್ರೇಪಿಂಗ್‌ ಮಾಡಬಹುದು.

ಬಿಂದಾಸ್‌ ಲುಕ್‌ ಮಹಿಳೆಯ ಔಟ್‌ಲುಕ್‌

ಸೀರೆ ಬೇಡ, ಕುರ್ತಾ ಬೇಡ, ಬಿಂದಾಸ್‌ ಲುಕ್‌ ಬೇಕು ಎನ್ನುವವರು, ಟ್ರೆಂಡಿ ಔಟ್‌ಫಿಟ್‌ ಜೊತೆಗೆ ಸನ್‌ಗ್ಲಾಸ್‌, ನೆತ್ತಿಯ ಮೇಲೊಂದು ಪೋನಿಟೈಲ್‌, ಹೈ ಹೀಲ್ಸ್ ಹಾಕಿಕೊಳ್ಳಬಹುದು. ಇದು ಬಿಂದಾಸ್‌ ಲುಕ್‌ ನೀಡುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version