Site icon Vistara News

Karnataka Weather : ಬೆಂಗಳೂರಲ್ಲಿ ನಾಳೆ ಇಡೀ ದಿನ ಮೋಡ ಕವಿದ ವಾತಾವರಣ; ಉಳಿದೆಡೆ ಒಣಹವೆ

Dry weather likely to prevail over the State

ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ರಾಜ್ಯದಲ್ಲಿ ಒಣಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3 ಡಿ.ಸೆ ಹೆಚ್ಚಾಗಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ,ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಕೆಲವೊಮ್ಮೆ ಮಂಜು ಮುಸುಕುವ ಸಾಧ್ಯತೆ ಇದ್ದರೆ, ಮಧ್ಯಾಹ್ನದಂದು ಬಿಸಿಲು ಇರಲಿದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿವೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ

ಭಾನುವಾರ ರಾಜ್ಯಾದ್ಯಂತ ಒಣ ಹವೆ ಇತ್ತು. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಕನಿಷ್ಠ ಉಷ್ಣಾಂಶ 11.2 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿತ್ತು. ಇನ್ನೂ ಹಾಸನ, ಚಿಕ್ಕಬಳ್ಳಾಪುರ, ಬೀದರ್, ಬಾಗಲಕೋಟೆ ಹಾಗೂ ಚಿಕ್ಕಮಗಳೂರು, ಕೊಡಗು ಮತ್ತು ವಿಜಯಪುರದಲ್ಲಿ ಕನಿಷ್ಠ ತಾಪಮಾನ 11ರಿಂದ 13 ಡಿ.ಸೆ ದಾಖಲಾಗಿತ್ತು. ಶಿವಮೊಗ್ಗ, ವಿಜಯಪುರ, ದಾವಣಗೆರೆ, ರಾಯಚೂರು, ಧಾರವಾಡ, ಬಳ್ಳಾರಿ, ಉತ್ತರ ಕನ್ನಡ, ಕಲಬುರಗಿ ಮತ್ತು ಉಡುಪಿ, ದಕ್ಷಿಣ ಕನ್ನಡ, ತುಮಕೂರಿನ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ನಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ

ಇದನ್ನೂ ಓದಿ: Shivamogga News : ಮೂತ್ರ ವಿಸರ್ಜನೆ ಮಾಡುವಾಗ ತುಂಡಾದ ಸ್ಲ್ಯಾಬ್‌; ಚರಂಡಿಗೆ ಬಿದ್ದು ವ್ಯಕ್ತಿ ಸಾವು

ಆಕರ್ಷಕ ವಿಂಟರ್‌ ಟ್ರಾವೆಲ್‌ ಫ್ಯಾಷನ್‌ಗೆ 5 ಸಿಂಪಲ್‌ ಟಿಪ್ಸ್

ವಿಂಟರ್‌ ಸೀಸನ್‌ನಲ್ಲಿ ಲಾಂಗ್‌ ವೀಕೆಂಡ್‌ ಇದ್ದಾಗ ಟ್ರಾವೆಲ್ (Winter Travel Fashion tips) ಮಾಡುವವರು ಹೆಚ್ಚು. ಈ ಸಂದರ್ಭದಲ್ಲಿ ಪ್ರಯಾಣ ಮಾಡುವವರು ಯಾರೇ ಆಗಲಿ, ಫ್ಯಾಷನಬಲ್‌ ಆಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಕೆಲವರು ತಮ್ಮಲ್ಲೆ ಇರುವ ಔಟ್‌ಫಿಟ್‌ಗಳನ್ನೇ ಧರಿಸಿದರೇ, ಇನ್ನು ಕೆಲವರು ಟ್ರಾವೆಲ್‌ ಫ್ಯಾಷನ್‌ಗಾಗಿ ಶಾಪಿಂಗ್‌ ಮಾಡುತ್ತಾರೆ. ಇಂತಹವರಿಗೆ ಫ್ಯಾಷನ್‌ ಎಕ್ಸ್‌ಫರ್ಟ್‌ಗಳು ಹೇಳುವುದೆನೆಂದರೇ, ಈ ಸೀಸನ್‌ನಲ್ಲಿ ಪ್ರಯಾಣಿಸುವಾಗ ಆದಷ್ಟೂ ಬೆಚ್ಚಗಿಡುವ ಫ್ಯಾಷನಬಲ್‌ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಿ ಧರಿಸುವುದು ಬೆಸ್ಟ್. ಇದು ಆರೋಗ್ಯಕ್ಕೆ ಉತ್ತಮ. ಇದಕ್ಕೆ ಪೂರಕ ಎಂಬಂತೆ, ಟ್ರಾವೆಲ್‌ ಪ್ರಿಯರು ಈ ಚಳಿಗಾಲದ ಪ್ರಯಾಣದಲ್ಲಿ, ಲೇಯರ್‌ ಲುಕ್‌ಗೆ ಸೈ ಎನ್ನಬೇಕು. ಪ್ರತಿ ಟ್ರಾವೆಲ್‌ನಲ್ಲೂ ಹೇಗೆಲ್ಲಾ ಆಕರ್ಷಕವಾಗಿ ಕಾಣಿಸಬಹುದು ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್ಪಟ್ರ್ಸ್ ಇಲ್ಲಿ 5 ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

ಅತ್ಯಗತ್ಯ ಟ್ರಾವೆಲ್‌ ಫ್ಯಾಷನ್‌ವೇರ್ಸ್

ಟ್ರಾವೆಲ್‌ ಫ್ಯಾಷನ್‌ವೇರ್‌ಗಳಲ್ಲಿ ಜಾಕೆಟ್‌, ಕೋಟ್‌ ಅಥವಾ ಸ್ವೆಟರ್‌ನಂತಹ ಬೆಚ್ಚಗಿಡುವ ಮೇಲುಡುಗೆಗಳು ಇರುವುದು ಅಗತ್ಯ. ಇದೀಗ ಟ್ರೆಂಡ್‌ಗೆ ತಕ್ಕಂತೆ ನಾನಾ ಡಿಸೈನ್‌ಗಳಲ್ಲಿ ದೊರೆಯುತ್ತವೆ. ಇವುಗಳನ್ನು ಧಿರಿಸಿನ ಮೇಲೆ ಮೇಲುಡುಗೆಯಂತೆ ಧರಿಸಿ ಸ್ಟೈಲಾಗಿ ಕಾಣಿಸಬಹುದು.

ಕಂಫರ್ಟಬಲ್‌ ಲೇಯರ್‌ ವೇರ್ಸ್ ಇರಲಿ

ಈ ಸೀಸನ್‌ನಲ್ಲಿ ಟ್ರಾವೆಲ್‌ ಮಾಡುವಾಗ ಸ್ಲಿವ್‌ ಲೆಸ್‌, ಮಿನಿ, ಹಾಗೂ ತೀರಾ ತೆಳುವಾದ ಫ್ಯಾಬ್ರಿಕ್‌ನ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಕೂಡದು. ಗ್ಲಾಮರಸ್‌ ಉಡುಗೆಗಳು ಚಳಿಗೆ ಧರಿಸಿದಾಗ ತಕ್ಷಣಕ್ಕೆ ಆನಂದ ನೀಡಿದರೂ ನಂತರ ಚಳಿಗೆ ಆರೋಗ್ಯ ಹದಗೆಡಬಹುದು. ಅದಕ್ಕಾಗಿ ಆದಷ್ಟೂ ಲೇಯರ್‌ ಲುಕ್‌ ನೀಡುವ ಆರಾಮದಾಯಕ ಉಡುಪುಗಳ ಆಯ್ಕೆ ಮಾಡುವುದು ಬೆಸ್ಟ್.

ಥರ್ಮಲ್‌ ವೇರ್ಸ್ ಜತೆಗಿರಲಿ

ನೀವು ತೀರಾ ಥಂಡಿ ಇರುವ ಸ್ಥಳಗಳಿಗೆ ಹೋಗುತ್ತಿದ್ದಲ್ಲಿ, ಥರ್ಮಲ್‌ವೇರ್‌ಗಳನ್ನು ಒಳಗೆ ಧರಿಸಿ. ಅದರ ಮೇಲೆ ನೀವು ಧರಿಸಬಹುದಾದ ಸ್ಟೈಲಿಶ್‌ ಉಡುಪುಗಳನ್ನು ಹಾಕಿಕೊಳ್ಳಬಹುದು. ಥರ್ಮಲ್‌ ವೇರ್‌ ನಿಮ್ಮ ದೇಹವನ್ನು ಬೆಚ್ಚಗಿಡುತ್ತದೆ.

ಆರಾಮದಾಯಕವೆನಿಸುವ ಫುಟ್‌ವೇರ್‌

ಟ್ರಾವೆಲ್‌ ಮಾಡುವಾಗ ಹೈ ಹೀಲ್ಸ್‌, ವೆಡ್ಜೆಸ್‌ನಂತವನ್ನು ಆವಾಯ್ಡ್‌ ಮಾಡಿ. ಕಾಲು ನೋವಾಗಬಹುದು. ಹೆಚ್ಚು ನಡೆಯುವ ಸ್ಥಳವಾದಲ್ಲಿ, ಅತ್ಯುತ್ತಮ ಬ್ರಾಂಡ್‌ನ ಶೂಗಳನ್ನು ಧರಿಸಿ. ಇಲ್ಲವೇ ಫ್ಲಾಟ್ಸ್ ಅಥವಾ ಪ್ಲಿಪ್‌ ಫ್ಲಾಪ್‌ ತೆಗೆದುಕೊಂಡು ಹೋಗಿ.

ಗ್ಲೌವ್ಸ್-ಸಾಕ್ಸ್-ಆಕ್ಸೆಸರೀಸ್‌

ಕೈಗಳಿಗೆ ಉಲ್ಲನ್‌ ಗ್ಲೌವ್ಸ್ –ಪಾದಗಳಿಗೆ ಸಾಕ್ಸ್ ಧರಿಸಿ. ಟೋಪಿ, ಸ್ಕಾಫ್‌, ಮಫ್ಲರ್‌, ಸ್ಟೋಲ್‌ನಂತವು ಪ್ಯಾಕಿಂಗ್‌ನಲ್ಲಿ ಸೇರಿರಬೇಕು. ಟ್ರೆಂಡಿಯಾಗಿರುವುದನ್ನು ಕೊಂಡಲ್ಲಿ, ಇವುಗಳನ್ನೇ ಸ್ಟೈಲಾಗಿ ಧರಿಸಬಹುದು. ಚಳಿಯಲ್ಲಿ ಬಿಸಿಲಿದ್ದರೇ ಸನ್‌ಗ್ಲಾಸ್‌ ಧರಿಸಿ. ಫೋಟೋಗಳಲ್ಲಿ ಆಕರ್ಷಕವಾಗಿ ಕಾಣಿಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version