ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಒಣ ಹವೆ (Dry Weather) ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.
ತಾಪಮಾನದ ಎಚ್ಚರಿಕೆಯನ್ನು ನೀಡಲಾಗಿದ್ದು, ಕರಾವಳಿಯ ಕೆಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-4 ಡಿ.ಸೆ ಹೆಚ್ಚಾಗಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ 2-3 ಡಿ.ಸೆ ಏರಿಕೆ ಆಗಲಿದೆ.
ಬೆಂಗಳೂರು ನಗರದಲ್ಲಿ ಮುಖ್ಯವಾಗಿ ಆಕಾಶ ನಿರ್ಮಲವಾಗಿರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಹಾಗೂ ಕನಿಷ್ಠ ಉಷ್ಣಾಂಶ 18 ಡಿ.ಸೆ ಇರಲಿದೆ.
ಇನ್ನೂ ಶುಕ್ರವಾರದಂದು ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಕೋಲಾರ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 13.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರಿನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 36.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಬೀದರ್ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 11 ಡಿಗ್ರಿ ಸೆಲ್ಸಿಯಸ್‌ನಿಂದ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಹಾವೇರಿ ಮತ್ತು ರಾಯಚೂರಿನಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: Fire Accidents : ಹೋಟೆಲ್‌ನಲ್ಲಿ ಗ್ಯಾಸ್ ಲೀಕ್; ಬೆಂಕಿಗೆ ಬೆಂದು ಹೋದ್ರು ಅಡುಗೆ ಭಟ್ಟರು
ವೀಕೆಂಡ್ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಟೈ-ಅಪ್ ಕ್ರಾಪ್ ಟಾಪ್
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಲೌಸ್ ಶೈಲಿಯ ಟೈ-ಅಪ್ ಕ್ರಾಪ್ ಟಾಪ್‌ಗಳು (Tie Up Crop Top Fashion) ಈ ಸೀಸನ್‌ನ ವೀಕೆಂಡ್ ಔಟಿಂಗ್‌ಗೆ ಸಾಥ್ ನೀಡಲು ಆಗಮಿಸಿವೆ. ಹಾಲಿಡೇಯ ರಂಗು ಹೆಚ್ಚಿಸಲು ಆಗಮಿಸಿರುವ ಇವು ರೆಟ್ರೊ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿವೆ. ವೀಕೆಂಡ್ ಔಟಿಂಗ್ ಮಾತ್ರವಲ್ಲ, ಬೀಚ್ ಅಥವಾ ಯಾವುದೇ ಹಾಲಿ ಡೇಯ ಖುಷಿಯನ್ನು ಹೆಚ್ಚಿಸಲು ಸಜ್ಜಾಗಿವೆ.
ರೆಟ್ರೊ ಸ್ಟೈಲಿಂಗ್
“ಅಂದ ಹಾಗೆ, ಮಾಮೂಲಿ ಕ್ರಾಪ್ ಟಾಪ್‌ಗಳು, ಹೊಟ್ಟೆಯ ಬೆಲ್ಲಿಯ ಮೇಲೆ ನಿಲ್ಲುತ್ತವೆ. ಆದರೆ, ಇವು ಬೆಲ್ಲಿಯನ್ನು ಮರೆಮಾಚಿ ಟೈಯಿಂಗ್ ಲುಕ್ ನೀಡುತ್ತವೆ. ಅಷ್ಟೆ ಯಾಕೆ? ಹಾಲಿಡೇಯಲ್ಲಿನ ಸ್ಟೈಲಿಂಗ್‌ಗೆ ಸಾಥ್ ನೀಡುತ್ತವೆ. ಆಕರ್ಷಕವಾಗಿ ಕಾಣುವ ಇವು ಬಿಂದಾಸ್ ಲುಕ್‌ನಲ್ಲಿ ಸೇರುತ್ತವೆ. ಹುಡುಗಿಯರು ಅದರಲ್ಲೂ ಜೆನ್ ಜಿ ಯುವತಿಯರಿಗೆ ಇವು ಪ್ರಿಯವಾಗಿವೆ. ಸಾಮಾನ್ಯ ದಿನಗಳಲ್ಲಿ ಧರಿಸಲು ಹಿಂಜರಿಯುವ ಯುವತಿಯರು ಹಾಲಿಡೇಗಳಲ್ಲಿ ಇವನ್ನು ಧರಿಸಲಾರಂಭಿಸಿದ್ದಾರೆ. ನೋಡಲು ಮನಮೋಹಕವಾಗಿ ಕಾಣಿಸುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್ ರಾಗ. ಅವರ ಪ್ರಕಾರ, ಟೈ-ಅಪ್ ಕ್ರಾಪ್ ಟಾಪ್ ನೋಡಲು ಬ್ಲೌಸ್‌ನ ಹೊಸ ರೂಪದಂತೆಯೇ ಕಾಣುತ್ತವೆ.
ಟೈ-ಅಪ್ ಕ್ರಾಪ್ ಟಾಪ್ ವಿಶೇಷತೆ
ನೋಡಲು ಪಕ್ಕಾ ಸೀರೆ ಬ್ಲೌಸ್‌ನಂತೆ ಕಾಣುವ ಇವು ಅವಲ್ಲ! ಹಿಂದಿನ ಸಿನಿಮಾಗಳಲ್ಲಿ ರೆಟ್ರೊ ಸ್ಟೈಲ್‌ನಲ್ಲಿ ಇವು ಟ್ರೆಂಡಿಯಾಗಿದ್ದವು. ಸಿನಿಮಾ ತಾರೆಯರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ, ಸಮಾರಂಭಗಳಲ್ಲೂ ಇವನ್ನು ಧರಿಸುತ್ತಿದ್ದರು. ಹಾಗಾಗಿ ಇವು ರೆಟ್ರೊ ಸ್ಟೈಲ್ ಕ್ರಾಪ್ ಟಾಪ್ ಎನ್ನಲಾಗುತ್ತದೆ. ಬೆಲ್ ಬಾಟಮ್ ಪ್ಯಾಂಟ್ ಜೊತೆ ಇವನ್ನು ಕಾಣಬಹುದಾಗಿತ್ತು. ಇದೀಗ, ಇವು ಸ್ಕರ್ಟ್, ಮಿಡಿ ಹಾಗೂ ಶಾಟ್ರ್ಸ್ ಜೊತೆಯೂ ನೋಡಬಹುದಾಗಿದೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್‌ಗಳು.
ಟೈ-ಅಪ್ ಕ್ರಾಪ್ ಟಾಪ್ ಕೋ ಆರ್ಡ್ ಸೆಟ್
ಇದೀಗ ಹೆಚ್ಚಾಗಿ ಫ್ಯಾಷನ್‌ನಲ್ಲಿರುವುದು ಕೋ ಆರ್ಡ್ ಸೆಟ್‌ನ ಟೈ-ಅಪ್ ಕ್ರಾಪ್ ಟಾಪ್‌ಗಳು. ಪ್ರಿಂಟೆಡ್ ಅತಿ ಹೆಚ್ಚು ಟ್ರೆಂಡಿಯಾಗಿವೆ. ಡಿಸೈನರ್ ಸೆಟ್‌ಗಳಲ್ಲಿ ಇವು ದೊರಕುತ್ತಿವೆ. ಸಿನಿಮಾ ತಾರೆಯರು ತಮ್ಮ ಬ್ರಂಚ್ ಪಾರ್ಟಿಗಳಲ್ಲಿ ಹಾಗೂ ಹಾಲಿಡೇಗಳಲ್ಲಿ ಧರಿಸುತ್ತಿರುವುದು ಕಾಮನ್ ಆಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಟೈ-ಅಪ್ ಕ್ರಾಪ್ ಟಾಪ್ ಮಿಕ್ಸ್ ಮ್ಯಾಚ್
ನಿಮಗೆ ಗೊತ್ತೇ! ಈ ಟಾಪ್‌ಗಳನ್ನು ಇತರೇ ಔಟ್‌ಫಿಟ್‌ನೊಂದಿಗೂ ಮಿಕ್ಸ್ ಮ್ಯಾಚ್ ಮಾಡಬಹುದು. ಜೀನ್ಸ್ ಪ್ಯಾಂಟ್‌ನೊಂದಿಗೆ, ಸ್ಕರ್ಟ್ ಹಾಗೂ ಶಾಟ್ರ್ಸ್‌ನೊಂದಿಗೂ ಧರಿಸಬಹುದು.
- ಒಂದೇ ಸೈಡ್ ಸೀರೆ ಪಲ್ಲುವನ್ನು ಡ್ರೇಪ್ ಮಾಡುವುದಾದಲ್ಲಿ ಸೀರೆ ಜೊತೆಗೆ ಧರಿಸಬಹುದು.
- ಬೀಚ್ನಲ್ಲಿ ಶಾಟ್ರ್ಸ್ ಜೊತೆಗೆ ಧರಿಸಬಹುದು.
- ಜೀನ್ಸ್ ಪ್ಯಾಂಟ್ನೊಂದಿಗೂ ಧರಿಸಬಹುದು.
- ಸೊಂಟ ತೆಳ್ಳಗಿರುವವರಿಗೆ ಇದು ಹೇಳಿ ಮಾಡಿಸಿದ ಗ್ಲಾಮರಸ್ ಟಾಪ್.
- ಬ್ಲೌಸ್ನಂತಿರುವ ಈ ಟಾಪನ್ನು ಲೆಹೆಂಗಾಗೂ ಧರಿಸಬಹುದು.
- ಲಾಂಗ್ ಸ್ಕರ್ಟ್ನೊಂದಿಗೂ ಧರಿಸಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ