Site icon Vistara News

Karnataka Weather : ಸೂರ್ಯನ ಏಟಿಗೆ ಸುಸ್ತಾದ ಜನರು; ಈ ವಾರವೆಲ್ಲ ಶುಷ್ಕ ವಾತಾವರಣ

in Karnataka Mainly Clear sky with Dry weather

ಬೆಂಗಳೂರು: ಬೆಳಗ್ಗೆ-ರಾತ್ರಿ ಹಲವೆಡೆ ಮೈಕೊರೆಯುವ ಚಳಿಯು ಇದ್ದರೆ, ಮಧ್ಯಾಹ್ನದ ಹೊತ್ತಿಗೆ ಬಿಸಿಲ ಝಳ ಜೋರಾಗಿ ಇರಲಿದೆ. ಈ ವಾರ ಪೂರ್ತಿ ರಾಜ್ಯದಲ್ಲಿ ಒಣಹವೆ (Dry Weather) ಇರಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಉತ್ತರ ಒಳನಾಡಿನ ವಿಜಯಪುರ ಸೇರಿದಂತೆ ಒಂದೆರಡು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2-4 ಡಿ.ಸೆ ಇಳಿಕೆ ಆಗಲಿದೆ. ಇದರಿಂದಾಗಿ ಚಳಿ ವಾತಾವರಣ ಇರಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ.

ಮುಂದಿನ 48 ಗಂಟೆಯಲ್ಲಿ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲೂ ಉಷ್ಣಾಂಶದಲ್ಲಿ ಏರಿಳಿತ ಇರಲಿದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಭಾಗದಲ್ಲಿ ಕೆಲವೊಮ್ಮೆ ಚಳಿ ಇದ್ದರೂ, ಮಧ್ಯಾಹ್ನ ಸೂರ್ಯ ನೆತ್ತಿಯನ್ನು ಸುಡಲಿದ್ದಾನೆ.

ಇನ್ನು ರಾಜಧಾನಿ ಬೆಂಗಳೂರಲ್ಲಿ ಚಳಿ ಇದ್ದರೂ ಬಿಸಿಲ ಧಗೆ ಹೆಚ್ಚಿರಲಿದೆ. ಗರಿಷ್ಠ ತಾಪಮಾನ ಹಾಗೂ ಕನಿಷ್ಠ ತಾಪಮಾನ ಕ್ರಮವಾಗಿ 32, 18 ಡಿ.ಸೆ ಇರಲಿದೆ. ಕೆಲವೆಡೆ ಮುಂಜಾನೆ ಸಮಯ ಮಂಜು ಆವರಿಸಲಿದೆ.

ಇದನ್ನೂ ಓದಿ: Boost Gut Health In Kids: ಮಕ್ಕಳಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡುವುದು ಹೇಗೆ?

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 32 ಡಿ.ಸೆ -18 ಡಿ.ಸೆ
ಮಂಗಳೂರು: 35 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 33 ಡಿ.ಸೆ – 18 ಡಿ.ಸೆ
ಗದಗ: 34 ಡಿ.ಸೆ – 20 ಡಿ.ಸೆ
ಹೊನ್ನಾವರ: 35 ಡಿ.ಸೆ- 20 ಡಿ.ಸೆ
ಕಲಬುರಗಿ: 36 ಡಿ.ಸೆ – 21 ಡಿ.ಸೆ
ಬೆಳಗಾವಿ: 34 ಡಿ.ಸೆ – 16 ಡಿ.ಸೆ
ಕಾರವಾರ: 36 ಡಿ.ಸೆ – 22 ಡಿ.ಸೆ

ಬೆಂಗಳೂರು ಹಾಗೂ ಮಂಗಳೂರಲ್ಲಿ ಮುಂಜಾನೆ ಸಮಯ ದಟ್ಟ ಮಂಜು ಆವರಿಸುವ ಸಾಧ್ಯತೆ ಇದೆ. ಉಳಿದಂತೆ ಚಿತ್ರದುರ್ಗ, ಗದಗ, ಹೊನ್ನಾವರ ಹಾಗೂ ಕಲಬುರಗಿ, ಬೆಳಗಾವಿ, ಕಾರವಾರದಲ್ಲಿ ಆಕಾಶವು ನಿರ್ಮಲವಾಗಿ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Exit mobile version