ಬೆಂಗಳೂರು: ಶುಕ್ರವಾರದಂದು ರಾಜ್ಯಾದ್ಯಂತ ಒಣ ಹವೆ (Dry Weather) ಇತ್ತು. ಅತೀ ಕಡಿಮೆ ಕನಿಷ್ಠ ಉಷ್ಣಾಂಶ 14.1 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿತ್ತು. ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಒಣ ಹವೆ ಇರುವ ಸಾಧ್ಯತೆ ಹೆಚ್ಚಿದೆ. ಬೆಳಗಿನ ಜಾವ ಹಾಗೂ ರಾತ್ರಿಯಂದು ಚಳಿ ಇರಲಿದ್ದು, ಹಗಲು ಹೊತ್ತು ಒಣಹವೆ (Karnataka Weather Forecast) ಇರಲಿದೆ.
ಬೆಂಗಳೂರಲ್ಲಿ ಹೇಗಿರಲಿದೆ ವಾತಾವರಣ
ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಹಾಸನ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 13.6 ಡಿಗ್ರಿ ಸೆಲ್ಸಿಯಸ್‌ನಿಂದ 16 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ರಾಯಚೂರು, ಮೈಸೂರು, ಗದಗ, ಚಿಕ್ಕಮಗಳೂರು, ಧಾರವಾಡ ಹಾಗೂ ಕೊಪ್ಪಳ, ಹಾವೇರಿ, ತುಮಕೂರು, ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 34ರಿಂದ 35.7 ಡಿ.ಸೆ ದಾಖಲಾಗಿದೆ.
ಇದನ್ನೂ ಓದಿ: Self Harming: ತೊದಲು ಸಮಸ್ಯೆಗೆ ಮನನೊಂದ; ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ವಿಂಟರ್‌ನಲ್ಲಿ ಹೈ ಬೂಟ್ಸ್ ಧರಿಸುವವರಿಗೆ 5 ಸ್ಟೈಲಿಂಗ್ ಟಿಪ್ಸ್!
ವಿಂಟರ್ ಸೀಸನ್‌ನಲ್ಲಿ ಹೈ ಬೂಟ್ಸ್ ಫ್ಯಾಷನ್ ಟ್ರೆಂಡಿಯಾಗಿದ್ದು (High Boots Fashion), ಸದ್ಯ ಹೈ ಫ್ಯಾಷನ್ ಲಿಸ್ಟ್‌ಗೆ ಸೇರಿರುವ ಈ ಶೈಲಿಯ ಬೂಟ್‌ಗಳು ಯುವತಿಯರನ್ನು ಆಕರ್ಷಿಸಿವೆ. ಈ ಹಿಂದೆ ವಿದೇಶದಲ್ಲಿದ್ದ ಈ ಬೂಟ್ ಫ್ಯಾಷನ್ ಇದೀಗ ನಮ್ಮಲ್ಲಿಯೂ ಲಗ್ಗೆ ಇಟ್ಟಿದ್ದು, ಈ ಫುಟ್‌ವೇರ್ ಫ್ಯಾಷನ್ ಇದೀಗ ನೈಟ್ ಪಾರ್ಟಿವೇರ್‌ಗಳಿಗೆ ಜೊತೆಯಾಗಿದೆ. ಜೆನ್ ಜಿ ಹುಡುಗಿಯರನ್ನು ಸೆಳೆದಿರುವುದು ಮಾತ್ರವಲ್ಲ, ಪಾರ್ಟಿ ಪ್ರಿಯ ಯುವತಿಯರನ್ನು ಆಕರ್ಷಿಸಿದೆ. ಕೇವಲ ವೆಸ್ಟರ್ನ್‌ವೇರ್ ಜೊತೆಗೆ ಧರಿಸಬಹುದಾದ ಈ ಬೂಟ್ಸ್ ಸ್ಟೈಲಿಂಗ್ ಹೇಗೆಲ್ಲಾ ಮಾಡಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದೈದು ಟಿಪ್ಸ್ ನೀಡಿದ್ದಾರೆ. ಮಂಡಿಯಿಂದ ಕೆಳಗೆ ಹಾಗೂ ಮಂಡಿಯ ಮೇಲಿನವರೆಗೂ ಧರಿಸಬಹುದಾದ ಇಂತಹ ಹೈ ಬೂಟ್‌ಗಳನ್ನು, ಫ್ಯಾಷನ್ ಪ್ರಿಯರು ಯಾವ್ಯಾವ ಔಟ್‌ಫಿಟ್ಸ್ ಜೊತೆ ಧರಿಸಬಹುದು ? ಎಂಬುದರ ಬಗ್ಗೆ 5 ಫ್ಯಾಷನ್ ಟಿಪ್ಸ್ ತಿಳಿಸಿಕೊಟ್ಟಿದ್ದಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಇಲ್ಲಿದೆ ವಿವರ.
ಲೇಯರ್ ಲುಕ್ ಫ್ರಾಕ್‌ಗೆ ಸಾಥ್
ಲೇಯರ್ ಲುಕ್ ನೀಡುವ ಫ್ರಾಕ್ ಜೊತೆಗೆ ಇವನ್ನು ಧರಿಸಬಹುದು. ಪ್ಯಾಂಟ್‌ರಹಿತ ಫ್ರಾಕ್‌ಗಳ ಜೊತೆ ಧರಿಸಿದಾಗ ಇವು ಕಾಲನ್ನು ಬೆಚ್ಚಗಿಡುತ್ತವೆ ಜೊತೆಗೆ ನೋಡಲು ಸಖತ್ತಾಗಿ ಕಾಣುತ್ತವೆ. ಬ್ಲಾಕ್ ವೆಲ್ವೆಟ್ ಬೂಟ್ಸ್ ಎಲ್ಲಾ ಬಗೆಯ ಔಟ್‌ಫಿಟ್‌ಗಳ ಜೊತೆ ಮ್ಯಾಚ್ ಆಗುತ್ತ ವೆ.
ಫಂಕಿ ಕಲರ್ ಹೈ ಬೂಟ್ಸ್
ಕಲರ್‌ಫುಲ್ ಫಂಕಿ ಹೈ ಬೂಟ್ಸ್ ಮ್ಯಾಚ್ ಮಾಡುವಾಗ ಧರಿಸುವ ಔಟ್‌ಫಿಟ್‌ಗಳು ಫಂಕಿ ಲುಕ್ ಹೊಂದಿರಬೇಕು. ಇಲ್ಲವಾದಲ್ಲಿ ಕನಿಷ್ಠ ಪಕ್ಷ ಕಾಂಟ್ರಾಸ್ಟ್ ಲುಕ್ ನೀಡುವಂತಿರಬೇಕು. ಇದೀಗ ಕಲರ್‌ಫುಲ್ ಬೂಟ್‌ಗಳು ಟ್ರೆಂಡ್‌ನಲ್ಲಿವೆ.
ಪೆನ್ಸಿಲ್ ಹೈ ಹೀಲ್ಸ್ ಬೂಟ್ಸ್ ಕೇರ್
ಔಟಿಂಗ್‌ಗೆ ಪೆನ್ಸಿಲ್ ಹೈ ಹೀಲ್ಸ್ ಬೂಟ್ಸ್ ನಾಟ್ ಓಕೆ. ಇದೇನಿದ್ದರೂ ಫ್ಯಾಷನ್ ಶೋ ಅಥವಾ ಪಾರ್ಟಿಗಳಿಗೆ ಮಾತ್ರ ಓಕೆ. ಹೆಚ್ಚು ನಡೆದಾಡುವ ಪ್ರಸಂಗವಿದ್ದಲ್ಲಿ ಇಂತಹ ಹೀಲ್ಸ್ ಬೂಟ್ಸ್ ಆವಾಯ್ಡ್ ಮಾಡುವುದು ಉತ್ತಮ. ಫೋಟೋಶೂಟ್‌ಗೆ ಬೆಸ್ಟ್ ಎನ್ನಬಹುದು.
ಲೆದರ್ ಹೈ ಬೂಟ್ಸ್
ವಿಂಟೇಜ್ ಲುಕ್ ನೀಡುವ ಈ ಬೂಟ್ಸ್ ಜೊತೆಗೆ ಮಿಕ್ಸ್ ಮ್ಯಾಚ್ ಔಟ್‌ಫಿಟ್ಸ್ ಧರಿಸಬಹುದು. ಶಿಮ್ಮರಿಂಗ್ ಡ್ರೆಸ್‌ಗಳು ಇದರೊಂದಿಗೆ ಮ್ಯಾಚ್ ಆಗದು ಎಂಬುದು ನೆನಪಿರಲಿ.
ಲೂಸಾದ ಪ್ಯಾಂಟ್‌ಗೆ ಹೈ ಬೂಟ್ಸ್ ಬೇಡ
ಆದಷ್ಟೂ ಮಿಡಿ, ಮಿನಿ, ಸ್ಕರ್ಟ್ ಹಾಗೂ ಫ್ರಾಕ್‌ಗಳಿಗೆ ಹೈ ಬೂಟ್ಸ್ ಚೆನ್ನಾಗಿ ಕಾಣುತ್ತವೆ. ಪ್ಯಾಂಟ್ ಧರಿಸಲೇಬೇಕಿದ್ದಲ್ಲಿ ಆದಷ್ಟೂ ಟೈಟ್ ಪ್ಯಾಂಟ್ ಅಥವಾ ಸ್ಲಿಮ್ ಫಿಟ್ ಪ್ಯಾಂಟ್‌ಗಳಿಗೆ ಧರಿಸುವುದು ಉತ್ತಮ. ಯಾವುದೇ ಕಾರಣಕ್ಕೂ ಲೂಸಾದ ದೊಗಲೆ ಪ್ಯಾಂಟ್‌ಗಳಿಗೆ ಬೂಟ್ಸ್ ಧರಿಸುವುದು ಬೇಡ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ